India Languages, asked by rohini975, 3 months ago

ವೃತ್ಯಾನುಪ್ರಾಸ ಎಂದರೇನು ???​

Answers

Answered by BrainlyTwinklingstar
2

ವೃತ್ಯಾನುಪ್ರಾಸ

ಒಂದಾಗಲಿ ಎರಡಾಗಲಿ ಅಥವಾ ಎರಡಕ್ಕಿಂತ ಹೆಚ್ಚಾಗಿ ವ್ಯಂಜನಗಳು ಒಂದು ಕಾವ್ಯದಲ್ಲಿ ಮನಃ ಪುನಃ ಹೇಳಲ್ಪಟ್ಟಿದ್ದರೆ ಅದನ್ನು ವೃತ್ಯಾನುಪ್ರಾಸ ಎನ್ನುವರು.

ಉದಾ :-

  1. ಬೆಚ್ಚನೆಯ ಮನೆಯಾಗ, ವೆಚ್ಚಕ್ಕೆ ಹೊನ್ನಾಗಿ ಇಚ್ಚೆ ಅರಿಯುವ ಸತಿಯಿದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
  2. “ಎಳೆಗಿಳಿಗಳ ಬಳಗಂಗಳ ಗಳ ನಿಳಿತಂದಳೆದ ಬಳಸಿ ಸುಳಿದೊಳೆವುಗತಂ ನಳನಳಿಸಿ ಬೆಳೆದು ಕಳಿಯದೆ ಕಳವೆಯ ಕಣೆಶಂಗಳೆಂ ಕರಂ ಖಂಡಿಸುಗುಂ”

ಅರ್ಥ :- ಕವಿಯು ಬೆಳೆದು ನಿಂತ ಭತ್ತದ ಗದ್ದೆಯ ವರ್ಣನೆ ಹಾಗೂ ಗಿಳಿಗಳು ಆ ಗದ್ದೆಯನ್ನು ಸವಿಯಲು ಪ್ರವೇಶಿಸುವ ರೀತಿಯನ್ನು ಮನೋಹರವಾಗಿ ಚಿತ್ರಿಸಿದ್ದಾನೆ.

ಎಳೆಯ ಗಿಳಿಗಳ ಬಳಗವು ಹಾಲನೆ ತುಂಬಿ ನಿಂತ ಭತ್ತದ ಗದ್ದೆಯನ್ನು ಕಂಡು ಅದರ ರಸವನ್ನು ಸವಿಯಬೇಕೆಂದು ಬಯಸಿ ಅವಸರ-ಅವಸರವಾಗಿ ಸದ್ದು ಮಾಡುತ್ತಾ ಗದ್ದೆಯ ಸನಿಹಕ್ಕೆ ಬಂದು ನೇರವಾಗಿ ಗದ್ದೆಗೆ ನುಗ್ಗದೆ, ಅದರ ಸುತ್ತಸುತ್ತಾಡಿ ಕೊನೆಗೆ ಕೋಮಲವಾದ ಪಕ್ವವಾದ ಭತ್ತದ ಹಾನೆಗಳ ಮೇಲೆ ಕುಳಿತು ಚೆನ್ನಾಗಿ ಚುಚ್ಚಿ ಚುಚ್ಚಿ ತೆನೆಗಳ ಹಾಲನ್ನು ಆನಂದದಿಂದ ಹೀರುತ್ತವೆ.

ವಿಶೇಷ

  • ಇಲ್ಲಿ 'ಕ', 'ಗ' ಹಾಗೂ 'ಳ' ಕಾರಗಳು ಪುನಃ ಪುನಃ ಬಂದಿರುವದರಿಂದ ಇದು ವೃತ್ಯಾನುಪ್ರಾಸವಾಗಿದೆ

 \:

Similar questions