ಸಾವಯವ ಕೃಷಿ ಕುರಿತು ಪ್ರಬಂಧ
Answers
Answer:
ಸಾವಯವ ಕೃಷಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಜನಪ್ರಿಯವಾಗುತ್ತಿರುವ ಕೃಷಿ ಪದ್ಧತಿ, ಜಗತ್ತಿನಾದ್ಯಂತ ರಾಸಾಯನಿಕ ಹೊರತಾದ ಆಹಾರ ಸೇವನೆ ಮತ್ತು ಆಹಾರ ಕಾಳಜಿಯತ್ತ ಹೆಚ್ಚಿನ ಒಲವು ತೋರಿರುವ ಹಿನ್ನೆಲೆಯಲ್ಲಿ ಸಾವಯುವ ಕೃಷಿಗೆ ಹೆಚ್ಚೆಚ್ಚು ನೀಡಲಾಗುತ್ತಿದೆ.ಸಾವಯುವ ಕೃಷಿ ಭಾರತದ್ದೆ ಎಂಬ ವಾದವಿದ್ದರೂ, ಸರ್ ಅಲ್ಬರ್ಟ್ ಹೋವಾರ್ಡ್, ಜೆ.ಐ.ರೊಡೇಲ್ ಲೇಡಿ ಈವ್ ಬಾಲ್ ಅವರನ್ನು ಸಾವಯುವ ಪಿತಾಮಹ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು ಕಾರಣೀಕರ್ತರೆಂದು ಪರಿಗಣಿಸಲಾಗಿದೆ.
ಸಾವಯುವ ಕೃಷಿ ಇಂದು ನಿನ್ನೆಯದೇನೂ ಅಲ್ಲ. ಹಾಗೇ ನೋಡಿದಲ್ಲಿ ಕೃಷಿ ಪದ್ಧತಿಯ ಹುಟ್ಟು ಸಾವಯುವ ಆಧಾರವಾಗಿತ್ತು. ಆದರೆ, 1930-40ರ ದಶಕದಲ್ಲಿ ಬೇಸಾಯ ಕ್ಷೇತ್ರ ಪ್ರವೇಶಿಸಿ ಕೃತಕ ಗೊಬ್ಬರಗಳು ಸಾವಯುವ ಪದ್ಧತಿಗೆ ಹೆಚ್ಚಿನ ಪೆಟ್ಟು ನೀಡಿದವು. ಇದರಿಂದಾಗಿ ಸಾವಯುವ ಪದ್ಧತಿ ಹಿಂದಕ್ಕೆ ಸರಿದು, ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಪ್ರಾರಂಭವಾಯಿತು. ಈ ಸಲುವಾಗಿ
ಕೃತಕ ಗೊಬ್ಬರಗಳನ್ನು ಮೊದಲು ಸೂಪರ್ ಫಾಸ್ಪೇಟ್, ಆನಂತರ ಅಮೋನಿಯದ ಉತ್ಪನ್ನಗಳಿಂದ ಭಾರಿ ಪ್ರಮಾಣ ದಲ್ಲಿ 18 ನೆಯ ಶತಮಾನದಲ್ಲಿ ಉತ್ಪನ್ನ ಮಾಡಲಾಯಿತು. ಮೊದಲನೆಯ ವಿಶ್ವ-ಮಹಾಯುದ್ಧದ ಸಮಯದಲ್ಲಿ ಹೇಬರ್-ಬಾಷ್ ವಿಧಾನವನ್ನು ಅನುಸರಿಸಿ ಇದನ್ನು ತಯಾ ರಿಸಲಾಯಿತು. ಪ್ರಾರಂಭದಲ್ಲಿ ತಯಾರಾದ ಈ ಗೊಬ್ಬರಗಳು ಅಗ್ಗವಾಗಿ ದೊರೆಯುತ್ತಿದೆ.