India Languages, asked by rashmithamogaveera31, 1 month ago

ಹುಲ್ಲುಗಾವಲು ಇದು ಯಾವ ಸಂಧಿ​

Answers

Answered by bhuvaneshwariks81
4

Answer:

ಆದೇಶ ಸಂಧಿ

ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.

Explanation:

ಉದಾಹರಣೆಗೆ:-

ಹುಲ್ಲು + ಕಾವಲು = *ಹುಲ್ಲು + ಗ್ ಆವಲು = ಹುಲ್ಲುಗಾವಲು

(ಕಕಾರಕ್ಕೆ ಗಕಾರಾದೇಶ)

ಹಳ + ಕನ್ನಡ = ಹಳ + ಗ್ ಅನ್ನಡ = ಹಳಗನ್ನಡ

(ಕಕಾರಕ್ಕೆ ಗಕಾರಾದೇಶ)

ಕಳೆ + ಕೂಡಿ = ಕಳೆ + ಗ್ ಊಡಿ = ಕಳೆಗೂಡಿ

(ಕಕಾರಕ್ಕೆ ಗಕಾರಾದೇಶ)

ಎಳೆ + ಕರು = ಎಳೆ + ಗ್ ಅರು = ಎಳೆಗರು

(ಕಕಾರಕ್ಕೆ ಗಕಾರಾದೇಶ)

ಮನೆ + ಕೆಲಸ = ಮನೆ + ಗ್ ಎಲಸ = ಮನೆಗೆಲಸ

(ಕಕಾರಕ್ಕೆ ಗಕಾರಾದೇಶ)

ಮೈ + ತೊಳೆ = ಮೈ + ದ್ ಒಳೆ = ಮೈದೊಳೆ

(ತಕಾರಕ್ಕೆ ದಕಾರಾದೇಶ)

ಮೇರೆ + ತಪ್ಪು = ಮೇರೆ + ದ್ ಅಪ್ಪು = ಮೇರೆದಪ್ಪು

(ತಕಾರಕ್ಕೆ ದಕಾರಾದೇಶ)

ಕಣ್ + ಪನಿ = ಕಣ್ + ಬ್ ಅನಿ = ಕಂಬನಿ

(ಪಕಾರಕ್ಕೆ ಬಕಾರಾದೇಶ)

ಬೆನ್ + ಪತ್ತು = ಬೆನ್ + ಬ್ ಅತ್ತು = (ಬೆಂಬತ್ತು)

(ಪಕಾರಕ್ಕೆ ಬಕಾರಾದೇಶ)

❤⭐️⭐️⭐️⭐️⭐️

Similar questions