ಹುಲಿಯು ಶಾನುಭೋಗರನ್ನು ಕೊಲ್ಲಲು ಬಂದ ಸಂದರ್ಭದಲ್ಲಿ ನಡೆದ ಘಟನೆಯನ್ನು ನಿಮ್ಮ ಮಾತುಗಳಲ್ಲಿ ವಿವರಿಸಿ
Answers
Explanation:
ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದ ಘಟನೆ ಎಂದರೆ -
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂತಿರುಗುತ್ತಿದ್ದರ
ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರದಾರಿಯಿದ ಎನ್ನುವಾಗ ಎತ್ತುಗಳು ಏನು ಮಾಡಿದರೂ ಮುಂದೆ ಹೋಗದೇ ಕಣಿ ಹಾಕಿಕೊಂಡವು. ಆ ವೇಳೆಗೆ ಎದೆ ನಡುಗುವಂತೆ ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಗಂಟೆಯ ಶಬ್ದವನ್ನು ಕೇಳಿದ ಹುಲಿ ಕೆಲವು ನಿಮಿಷ 1 ತಡೆದು ನೂಡಿತು. ಆದರೆ ರೈತರ ಮಾತು ಕೇಳಿ ಬಂದ ಮೇಲೆ ನಿರಾಶೆಯಿಂದಲೂ, ಕೋಪದಿಂದಲೂ ಗರ್ಜಿಸಿ 1 ಪಲಾಯನ ಮಾಡಿತು. ಗಾಡಿಯವರು ಐದು ಜನವಿದ್ದರೂ ಎಪೇ ಆಗಲಿ ಹುಲಿಯೆಂದರೆ ಭಯವಲ್ಲವೇ! ಸ್ವಲ್ಪ ಹೊತ್ತು ಗಾಡಿಯ ಬಳಿಯೇ ನಿಂತು ನೋಡಿದರು.
ಮತ್ತೆ ಗರ್ಜನ ಕೇಳಲಿಲ್ಲ. ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೊಟಾ ಹಾರಿಸಿ, ಕೈಲಾದಷ್ಟು ಗಲಭ ಮಾಡುತ್ತಾ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರಿದರು. ಮೂರ್ಛಯಲ್ಲಿ - ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರರಚಿ ಎಚ್ಚರಿಸಿದರು.