ನಿಮ್ಮ ಪ್ರಕಾರ ಗ್ರಂಥಾಲಯಗಳು ಈ ದಿನಗಳಲ್ಲಿ ಏಕೆ ಅಷ್ಟು ಬಳಕೆಯಾಗುತ್ತಿಲ್ಲ, ಇದನ್ನು
ಮೊದಲಿಗಿಂತಲೂ ಹೆಚ್ಚಾಗಿ ಉಪಯೋಗಿಸಲು ಏನೆಲ್ಲಾ ಸಲಹೆಗಳನ್ನು ನೀಡುತ್ತೀರ?
Answers
Answer:
ಗ್ರಂಥಾಲಯಗಳು[೨] ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಹೀಗೆ ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಶೋಧಕರಿಗೂ, ಲೇಖಕರಿಗೂ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಗ್ರಂಥಾಲಯಗಳಿಲ್ಲದೇ ನಡೆಯುವಂತಿಲ್ಲ.
ಸರಕಾರದವರು ಜನರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿರುವರು. ಪ್ರತಿಯೊಂದು ಶಾಲೆಗೆ ಹಾಗೂ ಕಾಲೇಜುಗಳಿಗೆ ಗ್ರಂಥಾಲಯದ ಅವಶ್ಯಕತೆ ಇರುವುದು.ನಾವು ಎಷ್ಟೇ ಶ್ರೀಮಂತ ರಾಗಿದ್ದರೂ ನಮಗೆ ಬೇಕಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಪುಸ್ತಕದ ಪ್ರೇಮಿಗಳು ಗ್ರಂಥಾಲಯಗಳನ್ನು ಅವಲಂಬಿಸಬೇಕಾಗುವುದು. ನಮಗೆ ಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿ ದೊರೆಯುವುವು.
ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಹೋಗಬೇಕು. ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳೂ ಇರಬೇಕು. ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳು ಇಂಗ್ಲೀಷ್ ಭಾಷೆಯಲ್ಲಿ ದೊರೆಯುವುವು.
ಎಷ್ಟೋ ಶಾಲೆಗಳಲ್ಲಿ ಗ್ರಂಥಗಳಿರುತ್ತವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯು ಬೆಳೆಯಲಾರದು. ವಾಚನಾಭಿರುಚಿ ಇಲ್ಲದಿದ್ದರೆ ಅವರ ಜ್ಞಾನವು ಬೆಳೆಯಲಾರದು.
ಭಂಡಾರಿಗನು ಯಾವ ಪುಸ್ತಕಗಳು ಎಲ್ಲಿರುವುವು ಎಂಬುದನ್ನು ಅರಿತಿರಬೇಕು. ಕಾಲೇಜಿನವರು ಗ್ರಂಥಾಲಯಕ್ಕೆ ಮಹತ್ವವನ್ನು ಕೊಡುತ್ತಿರುವರು.
ವಿಶ್ವವಿದ್ಯಾನಿಲಯಗಳಲ್ಲಿಯಂತೂ ವಿದ್ಯಾರ್ಥಿಗಳು ತಮ್ಮ ಬಹಳ ವೇಳೆಯನ್ನೆಲ್ಲ ಗ್ರಂಥಾಲಯಗಳಲ್ಲಿಯೇ ಕಳೆಯುವರು.ಗ್ರಂಥಾಲಯಗಳೆಂದರೆ ಸರಸ್ವತಿಯ ಮಂದಿರಗಳಿದ್ದಂತೆ. ನಮಗೆ ಬೇಕಾದ ಜ್ಞಾನವನ್ನು ಕೊಡಲು ಗ್ರಂಥಗಳು ಸಿದ್ಧವಾಗಿರುವುವು. ನಮಗೆ ಜ್ಞಾನವನ್ನು ಪಡೆಯಬೇಕೆಂಬ ಮನಸ್ಸು ಮಾತ್ರ ಬೇಕು.ಮುದ್ರಾಣಾಲಯಗಳ ಶೋಧವಾದಾಗಿನಿಂದ ಜ್ಞಾನ ಪ್ರಸಾರವು ಭರದಿಂದ ಹಬ್ಬುತ್ತಿರುವುದು. ಈ ಕೆಲಸವನ್ನು ಗ್ರಂಥಗಳು ಮಾಡುತ್ತಿರುವುವು.