ನಿಮ್ಮ ಪ್ರಕಾರ ಗ್ರಂಥಾಲಯಗಳು ಈ ದಿನಗಳಲ್ಲಿ ಏಕೆ ಅಷ್ಟು ಬಳಕೆಯಾಗುತ್ತಿಲ್ಲ, ಇದನ್ನು
ಮೊದಲಿಗಿಂತಲೂ ಹೆಚ್ಚಾಗಿ ಉಪಯೋಗಿಸಲು ಏನೆಲ್ಲಾ ಸಲಹೆಗಳನ್ನು ನೀಡುತ್ತೀರ?
Answers
Answer:
ಗ್ರಂಥಾಲಯಗಳು[೨] ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
ಪ್ರತಿಯೊಂದು ಪಟ್ಟಣಗಳಲ್ಲಿಯೂ ವಾಚನಾಲಯಗಳು ಸ್ಥಾಪಿಸಲ್ಪಟ್ಟಿರುವವು. ಹಳ್ಳಿಗಳಲ್ಲಿ ಮಾತ್ರ ಇನ್ನೂ ಗ್ರಂಥಾಲಯಗಳ ಕೊರತೆ ಇರುವುದು.ಜನರಲ್ಲಿ ಜ್ಞಾನವನ್ನು ಪ್ರಸಾರ ಮಾಡುವುದರಲ್ಲಿ ಇವು ಮಹತ್ವದ ಕೆಲಸವನ್ನು ಮಾಡುವವು. ಗ್ರಾಮ ಪಂಚಾಯತಿಗಳು ತಮ್ಮ ಊರಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಬೇಕು.
ಸಂಚಾರಿ ವಾಚನಾಲಯವೆಂದರೆ ಪ್ರತಿಯೊಂದು ಹಳ್ಳಿಯಲ್ಲಿಯೂ ವಾಚನಾಲಯವನ್ನು ಸ್ಥಾಪಿಸಿ ವರ್ಷಕ್ಕೊಮ್ಮೆ ಅಲ್ಲಿಯ ಪುಸ್ತಕಗಳನ್ನು ಬೇರೆ ಹಳ್ಳಿಗೆ ಕಳಿಸಿ ಅಲ್ಲಿಯ ಪುಸ್ತಕಗಳನ್ನು ತರುವುದು. ಈ ರೀತಿ ಅದಲು ಬದಲು ಮಾಡುವುದರಿಂದ ವಾಚನಾಲಯದಲ್ಲಿ ಹೊಸ ಪುಸ್ತಕಗಳು ಬರಲು ಅವಕಾಶವಾಗುವುದು. ಬುದ್ಧಿಯನ್ನು ಬೆಳೆಸಲು ಗ್ರಂಥಾಲಯಗಳು ಮಾನವನಿಗೆ ಸಹಾಯ ಮಾಡುವುವು.
ಆನಂದವನ್ನು ಪಡೆಯುವುದಕ್ಕಾಗಿಯೂ, ಜ್ಞಾನಾಭಿವೃದ್ಧಿಗೂ ಗ್ರಂಥಾಲಯಗಳು ಮನುಷ್ಯನಿಗೆ ಉಪಯುಕ್ತವಾಗಿರುವವು. ಮುಂದುವರಿದ ರಾಷ್ಟ್ರಗಳಲ್ಲಿ ಸುಸಜ್ಜಿತವಾದ ಗ್ರಂಥಾಲಯಗಳಿರುವುವು. ಅದೇ ಮಾದರಿಯಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸುವುದು ಅತ್ಯವಶ್ಯಕವಾಗಿದೆ