ನಮ್ಮ ದೇಶದಲ್ಲಿನ ಪ್ರಾಚ್ಯ ವಸ್ತುಗಳನ್ನು ಕಾಪಾಡಿಕೊಂಡು ಹೋಗಲು ನೀವು ನೀಡುವ
ಸಲಹೆಗಳಾವುವು?
Answers
Answer:
ಕರ್ನಾಟಕದಲ್ಲಿ ಇತಿಹಾಸಪೂರ್ವ ಕಾಲದ ಹಲವು ಕಲ್ಲಿನ ಸಮಾಧಿಗಳು ದೊರೆತಿವೆ. ಇವುಗಳನ್ನು ಕೆಲವೆಡೆ ಇಂದಿಗೂ ಪಾಂಡವರ ಗುಡಿಗಳು, ಮೋರಿಯರ ಮನೆಗಳು ಎಂದೂ ಕರೆಯಲಾಗುವುದನ್ನು ಗಮನಿಸಿದರೆ, ಈ ಸಮಾಧಿಗಳೇಅನಂತರದ ಕಾಲದಲ್ಲಿ ದೇವಾಲಯಗಳಿಗೆ ಮಾದರಿಯಾಗಿರುವ ಸಾಧ್ಯತೆಗಳಿವೆ. ಎಷ್ಟೋ ಕಡೆಗಳಲ್ಲಿ ಪಾಂಡವರ ಗುಡಿಗಳು ಎಂದು ಕರೆಸಿಕೊಳ್ಳುತ್ತಿದ್ದ ದೇವಾಲಯಗಳು ಅನಂತರದ ಕಾಲದಲ್ಲಿ ಶಿವಾಲಯಗಳಾಗಿ ಪರಿವರ್ತನೆಗೊಂಡಿವೆ. ಸಮಾಧಿಯ ಗುರುತಿಗೆ ಇಡಲಾಗಿದ್ದ ಗುಂಡುಕಲ್ಲುಗಳೇ ಲಿಂಗ ಎಂದು ಕರೆಸಿಕೊಂಡಿರಬಹುದು.
ಮೊದಲಿಗೆ ಇದ್ದ ಪಿತೃಪೂಜೆ ಈಗಲೂ ಒಂದಲ್ಲ ಒಂದು ರೀತಿ ಮುಂದುವರಿದಿದೆ. ದೀರ್ಘಕಾಲ ಮಲಗಿದವನು ಎಂದೋ ಒಂದು ದಿನ ಏಳುವನೆಂಬ ನಿರೀಕ್ಷೆ ಮತ್ತು ನಂಬಿಕೆಯಿಂದ ಕಲ್ಲಿನ ಕೋಣೆಗಳಲ್ಲಿ ಆಹಾರ, ನೀರು, ಆಯುಧ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಸಹಿತ ಸಮಾಧಿ ಮಾಡಲಾದ ವ್ಯಕ್ತಿಯೇ ಮುಂದೆ ಒಂದು ದಿನ ಪೂಜೆಗೆ ಗುರಿಯಾದ ದೇವರಾಗಿರುವ ಸಾಧ್ಯತೆಗಳೂ ಇವೆ. ದೇವರ ಉಗಮದ ಬಗ್ಗೆ ಬಗೆಹರಿಯಲಾಗದ ಚರ್ಚೆಗಳಿರುವಂತೆ, ದೇವಾಲಯದ ಉಗಮದ ಬಗ್ಗೆಯೂ ನಿರಂತರ ಚರ್ಚೆ ನಡೆಯುತ್ತಿದೆ.
ದೇವರು ಮತ್ತು ದೇವಾಲಯದ ಬಗ್ಗೆ ಬಗೆಹರಿಯದ ಚರ್ಚೆ ಮುಂದುವರಿದಿರುವಂತೆಯೇ ಅನೇಕ ದೇವಾಲಯಗಳು ನಿರ್ಮಾಣವಾಗಿವೆ, ಆಗುತ್ತಿವೆ ಮತ್ತು ಆಗುತ್ತವೆ. ಸಮಾಧಿಗಳ ಮೇಲೆ ನಿರ್ಮಾಣಗೊಂಡ ಕಟ್ಟಡಗಳೇ ಕ್ರಮೇಣ ಮಂದಿರಗಳಾಗಿ, ಆ ಸಮಾಧಿ ಮಂದಿರಗಳು ದೇವರು ಎಂದು ಕರೆಸಿಕೊಂಡ ವ್ಯಕ್ತಿ ಅಥವಾ ಶಕ್ತಿಯ ನೆಲೆಯಾಗಿ, ಆಲಯಗಳಾಗಿವೆ. ಪ್ರಕೃತಿಯಲ್ಲಿ ತಾನು ಕಂಡ ಸುಂದರ, ವಿಶೇಷ ಮತ್ತು ಅದ್ಭುತಗಳಿಗೆ ಅಗೋಚರ ಶಕ್ತಿ ಕಾರಣ, ಅದನ್ನು ಒಲಿಸಿಕೊಳ್ಳಬೇಕು ಎಂಬ ಉದ್ದೇಶ ದಿಂದಲೋ ಅಥವಾ ಸಮಾಧಿ ಹೊಂದಿದ ವ್ಯಕ್ತಿಯೇ ಕಾರಣ ಎಂಬ ಅನುಮಾನದಿಂದಲೋ ಪ್ರೀತಿ, ಗೌರವ, ಭಯ ಇತ್ಯಾದಿ ಭಾವಗಳು ದೇವರ ಸೃಷ್ಟಿಗೆ ಕಾರಣವಾಗಿರಬಹುದು. ಈಗಲೂ ಕೆಲವು ಜನಾಂಗಗಳ ಗುರುಗಳು ಅಥವಾ ಗಣ್ಯರ ಸಮಾಧಿಗಳ ಮೇಲೆ ಲಿಂಗವನ್ನು ಇಟ್ಟು ಪೂಜಿಸುವ ಪದ್ಧತಿ ಇದೆ. ಕ್ರಮೇಣ ಇಂತಹ ಸಮಾಧಿಗಳೇ ದೇವಾಲಯಗಳಾಗಿರುವ ಸಾಧ್ಯತೆಗಳಿವೆ. ತಮಿಳುನಾಡಿನಲ್ಲಿ ಕೆಲವು ದಶಕಗಳ ಹಿಂದೆ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಾಗ, ಕೆಲವು ದೇವಾಲಯಗಳ ಗರ್ಭಗೃಹದ ಕೆಳಗೆ ಮೂಳೆಗಳ ರಾಶಿ, ಶವಕರಂಡ, ಬೂದಿ ಇತ್ಯಾದಿಗಳು ಕಂಡುಬಂದವು. ಅಂದರೆ, ಒಂದು ಕಾಲಕ್ಕೆ ವ್ಯಕ್ತಿಯನ್ನು ಅಥವಾ ವ್ಯಕ್ತಿಗಳನ್ನು ಸಮಾಧಿ ಮಾಡಿದ್ದ ಸ್ಥಳವೇ ಕ್ರಮೇಣ ದೇವಾಲಯಗಳಾಗಿ ರೂಪುಗೊಂಡಿದ್ದವು. ಯಾರೇ ಆದರೂ ಮಲಗುವ ಜಾಗ `ಪಳ್ಳಿಪ್ಪಡೈ'. ಸತ್ತವನು ಮಲಗಿದ `ಪಳ್ಳಿಪ್ಪಡೈ'ಗಳೇ ದೇವಾಲಯಗಳಾಗಿವೆ ಎಂಬ ಅಭಿಪ್ರಾಯ ಇದೆ. ಇದು ಶಿವಾಲಯಗಳಿಗೆ ಮಾತ್ರ ಅನ್ವಯಿಸುವ ಮಾತು ಎಂದು ತಿಳಿಯಲಾಗುವುದಿಲ್ಲ. ಸಮಾಧಿಸ್ಥಿತಿಯು ಧ್ಯಾನಸ್ಥಿತಿಯೂ ಆಗುತ್ತದೆ. ಆದ್ದರಿಂದ ಧ್ಯಾನಸ್ಥಿತಿಯಲ್ಲಿ ಸಮಾಧಿಯಾದವನ ಮೇಲೆ ನಿರ್ಮಿತವಾದ ಕಟ್ಟಡವೇ ದೇವಾಲಯ ಎಂದು ತಿಳಿಯ ಬೇಕಾಗುತ್ತದೆ. ಈಗಲೂ ಗದ್ದುಗೆಗಳು ಮತ್ತು ಬೃಂದಾವನಗಳು ಧ್ಯಾನಸ್ಥ ಗುರುಗಳ ಸಮಾಧಿಗಳೇ ಆಗಿರುತ್ತವೆ. ಹೀಗೆ ಸಮಾಧಿ ಮಾಡುವುದು ಹಿಂದಿನಿಂದ ನಡೆದುಬಂದ ಪದ್ಧತಿ. ಎಲ್ಲ ಸಮಾಧಿಗಳೂ ದೇವಾಲಯಗಳಲ್ಲ , ಮತ್ತು ಎಲ್ಲ ದೇವಾಲಯಗಳೂ ಸಮಾಧಿಗಳಲ್ಲ ಎಂಬ ಸತ್ಯವನ್ನು ತಿಳಿದು ನಮ್ಮ ಅನುಮಾನಗಳಿಗೆ ಉತ್ತರ ಪಡೆಯುವುದು ಅವಶ್ಯಕ.
Explanation:
pls follow and mark me as brainalist