India Languages, asked by adityarhirnagaon, 3 months ago

ಉಪು ತಿಂದ ಮನೆಗೆ ಎರಡು ಬಗೆಯಬೇಡ. ಗಾದೆ ಮಾತು​

Answers

Answered by shreyam20070315
0

Answer:

hope it is helpful

Explanation:

ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಇದು ಒಂದು ಜನಪ್ರಿಯ ಗಾದೆಮಾತಾಗಿದೆ.

* ’ನಮಗೆ ಉಪಕಾರ ಮಾಡಿದವರಿಗೆ ಹಾಗೂ ಆಶ್ರಯ ನೀಡಿ ಸಲಹಿದವರಿಗೆ ಮೋಸಮಾಡಬಾರದು’ ಎನ್ನುವುದು ಈ ಗಾದೆಯ ಅರ್ಥವಾಗಿದೆ.

* ಮಾನವ ಸಂಘ ಜೀವಿ. ಆತನ ಒಬ್ಬಂಟಿಯಾಗಿ ಜೀವಿಸುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರಗತಿಯ ಮಾರ್ಗದಲ್ಲಿ ಯಾವುದೇ ರೂಪದಲ್ಲಿ ಒಮ್ಮೆಯಾದರೂ ಇತರರ ಸಹಾಯ ಪಡೆಯಲೇಬೇಕು. ಹಾಗೆಯೇ ದಾಸವರೇಣ್ಯರು, ಕವಿಪುಂಗವರು ’ಪರಹಿತಾರ್ಥದಿಂದ ಮಾತ್ರ ಮಾನವನ ಜೀವನ ಸಾರ್ಥಕತೆ ಹೊಂದಲು ಸಾಧ್ಯ’ ಎಂದಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಜನ ನಿಸ್ವಾರ್ಥದಿಂದ ಪರೋಪಕಾರವನ್ನು ಮಾಡುತ್ತಾರೆ. ಇಂತಹವರಿಂದ ಉಪಕಾರವನ್ನು ಪಡೆದವರು ಉಪಕಾರಮಾಡಿದವರನ್ನು ಸ್ಮರಿಸುವುದು ಧರ್ಮ.

ಕೆಲವರು ಉಪಕಾರ ಮಾಡಿಸಿಕೊಂಡು ನಂತರ ಉಪಕಾರ ಮಾಡಿದವರನ್ನು ಸ್ಮರಿಸದೆ ’ಅವರಿಂದ ನನಗೇನು?’ ಎಂದು ತಾತ್ಸಾರ ಹಾಗೂ ಅಹಂಕಾರದಿಂದ ನುಡಿಯುವುದುಂಟು. ಅಲ್ಲದೆ ಉಪಕಾರ ಮಾಡಿದವರಿಗೇ ಮೋಸಮಾಡುವವರನ್ನು ಸಮಾಜದಲ್ಲಿ ಕಾಣಬಹುದು. ಅಂತಹವರನ್ನು ’ಕೃತಘ್ನರು’ ಎಂದು ಕರೆಯಲಾಗುತ್ತದೆ. ’ಉಪ್ಪಿನ ಋಣ ಮುಪ್ಪಿನ ತನಕ’ ಎಂಬ ಗಾದೆ ಮಾತಿನಂತೆ ಉಪ್ಪುಂಡ ಮನಗೆ ಮೋಸಮಾಡಬಾರದು. ’ಮೇಲೇರಲು ಸಹಾಯ ಮಾಡಿದ ಏಣಿಯನ್ನು ಮೇಲೇರಿದ ನಂತರ ಒದೆಯುವುದು ಸರಿಯೇ’ ಮೇಲೇರಿದವರು ಕೆಳಗಿಳಿಯಲೇ ಬೇಕಲ್ಲವೇ? 

ಆದ್ದರಿಂದ ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡದಿದ್ದರೂ ಅವರ ಸಹಾಯವನ್ನು ಸ್ಮರಿಸುವುದು ಮಾನವೀಯ ಧರ್ಮ. ಅವರಿಗೆ ಅಪಕಾರ ಮಾಡುವುದು ಮಹಾ ಪಾಪಕಾರ್ಯವೆಂದರೆ ತಪ್ಪಾಗಲಾರದು. ಈ ಸಂದರ್ಭದಲ್ಲಿ ಮಹಾಭಾರತದ ಮಹಾನುಭಾವ ಕರ್ಣನು ದುರ್ಯೋಧನನ ಮೇಲಿಟ್ಟಿದ್ದ ಸ್ವಾಮಿಭಕ್ತಿ, ಉಪಕಾರ ಸ್ಮರಣೆಯನ್ನು ಸ್ಮರಿಸಬಹುದು.

Similar questions