ವಲಸಿಗರ ಸಮಸ್ಯೆ ಮೇಲೆ ಪ್ರಬಂಧ
Answers
Answer:
ಒಂದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ ಹೋಗಿನೆಲೆಸುವುದನ್ನು ವಲಸೆ ಎನ್ನುವರು. ಮನುಷ್ಯನ ಮೂಲ ಗುಣಸ್ವಭಾವದಲ್ಲೇ ವಲಸೆಯ ಆಸೆಯೊಂದು ಮೊಳಕೆಯೊಡೆಯುತ್ತಲೇ ಇರುತ್ತದೆ. ಉತ್ತಮ ಬದುಕಿಗಾಗಿ, ಇನ್ನೊಂದಿಷ್ಟು ಹೊಸ ಅವಕಾಶಗಳಿಗಾಗಿ, ಇನ್ಯಾವುದೋ ಭರವಸೆಯಿಂದ ವಲಸೆ ಹೋಗುತ್ತಲೇ ಇರುತ್ತಾನೆ. ಇಂದಿನ ಆಧುನಿಕ ಜೀವನದಲ್ಲೂ ಈ ಸ್ವಭಾವದಲ್ಲಿ ಬದಲಾವಣೆಯಾಗಿಲ್ಲ. ದೇಶಗಳ ಗಡಿಯ ಹಂಗಿನಲ್ಲೂ ಇನ್ನೊಂದು ಕಡೆ ತೆರಳಲು ಯತ್ನಿಸುವುದು ನಡೆದೇ ಇರುತ್ತದೆ. ಹೀಗಾಗಿ, ವಲಸೆ ಎನ್ನುವುದು ಆಧುನಿಕ ಜೀವನದ ಸಮಸ್ಯೆಯೂ ಆಗಿದೆ.ಹವಾಮಾನ ಬದಲಾವಣೆಯಿಂದ 2050ರೊಳಗೆ ದಕ್ಷಿಣ ಏಷ್ಯಾ ದೇಶಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವ ಅನಿವಾರ್ಯತೆಗೆ ಸಿಲುಕಲಿದ್ದಾರೆ ಎಂದು ಆ್ಯಕ್ಷನ್ ಏಡ್ ಇಂಟರ್ ನ್ಯಾಷನಲ್ ಅಧ್ಯಯನ ಹೇಳಿದೆ. ಸುಮಾರು 6.2 ಕೋಟಿ ಜನ ಹವಾಮಾನ ಬದಲಾವಣೆ ಸಂಬಂಧಿತ ಸಮಸ್ಯೆಗಳಿಂದಾಗಿ ತಾವಿರುವ ಸ್ಥಳವನ್ನು ತ್ಯಜಿಸುತ್ತಾರೆ ಎಂದು ದಕ್ಷಿಣ ಏಷ್ಯಾ ವಲಯದ ಸಮೀಕ್ಷೆ ಬಹಿರಂಗಪಡಿಸಿದೆ. ಈಗಾಗಲೇ ಅನೇಕ ಪ್ರದೇಶಗಳಲ್ಲಿ ಪ್ರವಾಹ, ಬರಗಾಲ, ಚಂಡಮಾರುತಗಳಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಮುಂದಿನ ದಿನಗಳಲ್ಲಿ ವಲಸೆಯನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿ ಬರಬಹುದು ಎನ್ನಲಾಗಿದೆ.