"ಮನುಕುಲ ಮತ್ತು ಸಕಲ ಜೀವರಾಶಿಗಳಿಗೆ ಯುದ್ಧದಿಂದಾಗುವ ಪರಿಣಾಮ" - ಪ್ರಬಂಧ ಬರೆಯಿರಿ.
Answers
ಧರ್ಮಪಚಾರ, ಜನಾಂಗ ದ್ವೇಷ, ಬಲ ಪ್ರದರ್ಶನ, ರಾಜ್ಯದಾಹ, ಮುಂತಾದ ನಾನಾ ಕಾರಣಗಳಿಂದ ದೇಶ-ದೇಶ ಗಳ ನಡುವೆ ಯುದ್ಧಗಳು ನಡೆಯುತ್ತವೆ. ಯುದ್ಧದಲ್ಲಿ ಪಾಲ್ಗೊಳ್ಳುವ ಸೈನಿಕರಷ್ಟೇ ಅಲ್ಲದೆ ಲಕ್ಷಗಟ್ಟಲೆ ಸಾಮಾನ್ಯ ನಾಗರೀಕರೂ ಯುದ್ಧದ ದೆಸೆಯಿಂದ ಸಾಯುತ್ತಾರೆ. ಯುದ್ಧಗಳು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಬಗೆಬಗೆಯ ಅನಾಹುತಗಳನ್ನು ಉಂಟುಮಾಡುತ್ತವೆ.
ಯುದ್ಧ ಆರಂಭವಾದಾಗ ಸಮರ್ಥರಾದ ಯುವಕರನ್ನೆಲ್ಲ ಬಲಾತ್ಕಾರವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಯುದ್ಧದಲ್ಲಿ ಬದುಕಿಬರುವುದು ಅನಿಶ್ಚಿತ. ಬದುಕಿ ಉಳಿದರೂ ಅಂಗವೈಕಲ್ಯಗಳಿಂದ ಪರಾಶ್ರಯ ಪಡೆಯುವವರಾಗಿರುವುದೇ
ಹೆಚ್ಚು ಸಮಾಜದಲ್ಲಿ ಕೇವಲ ವಿಧವೆಯರು, ಮುದುಕರು, ನಿರಾಶ್ರಿತರೇ ಹೆಚ್ಚಾಗುವಂತಾಗುತ್ತದೆ. ಸಮಾಜದ ಸಹಜಸ್ಥಿತಿ ಕೆಡುತ್ತದೆ.
ಯುದ್ಧದ ವೆಚ್ಚಕ್ಕಾಗಿ ಜನರು ಬೆವರು ಸುರಿಸಿ ಗಳಿಸಿದ ಹಣ, ದವಸ ಧಾನ್ಯ ವಸ್ತುಗಳನ್ನು ಬಲಾತ್ಕಾರವಾಗಿ ಕಸಿದುಕೊಳ್ಳಲಾಗುತ್ತದೆ. ದುಡಿಯುವವರಿಲ್ಲದೆ ಕುಸಿಯುತ್ತದೆ. ಬೆಲೆಗಳು ಹೆಚ್ಚುತ್ತವೆ. ಅಗತ್ಯ ವಸ್ತುಗಳ ಅಭವ ಉಂಟಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಸಿರಿವಂತ ಬಡವರ ಅಂತರ ಹೆಚ್ಚುತ್ತದೆ.
ಸೋತವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಬಲಾತ್ಕಾರವಾಗಿ ಮತ-ಧರ್ಮಗಳ, 3 ತಿಗಳ ಪರಿವರ್ತನ ಗಳನ್ನು ಕೈಗೊಳ್ಳಲಾಗುತ್ತದೆ. ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ, ಆಚರಣೆಗೆ ಒಳಗಾಗಬೇಕಾಗುತ್ತದೆ .ರೋಗ ರುಜಿನಗಳು ಹೆಚ್ಚುತ್ತವೆ. ಅಣುಬಾಂಬಿನಂಥವುಗಳ ಪ್ರಯೋಗದಿಂದ ಸಹಸ್ರಾರು ಜನರು ಸಾಯುತ್ತಾರೆ. ಬದುಕಿ ಉಳಿದವರಲ್ಲದೆ, ತಲೆ ತಲಾಂತರಗಳವರೆಗೂ ಅದರ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.