ಕೈ ಕೆಸರಾದರೆ ಬಾಯಿ ಮೊಸರು
Answers
Answered by
2
ಕೈಕೆಸರಾದರೆ ಬಾಯಿ ಮೊಸರು ಅಂದರೆ ಕಷ್ಟಪಟ್ಟು ದುಡಿದರೆ ಸುಖವುಂಟು ಎಂದರ್ಥ. ಸೋಮಾರಿಯಾಗಿ ಸುಮ್ಮನೆ ಕುಳಿತುಕೊಳ್ಳಬಾರದು. ಯಾವುದಾದರೊಂದು ಕೆಲಸ ಮಾಡುವುದರಿಂದ ನಮ್ಮ ಹೊಟ್ಟೆ ತುಂಬುತ್ತದೆ. ನಮ್ಮ ಬಾಯಿ ಮೊಸರಿನ ರುಚಿ ನೋಡುವಂತಾಗುತ್ತದೆ. ‚ಛೀ! ಕೈ ಕೆಸರಾಗುವುದಲ್ಲ .ಈ ಕೆಲಸ ಮಾಡುವುದಾದರೂ ಹೇಗೆ?‛ ಎಂದು ಯೋಚಿಸುತ್ತಾ ಕುಳಿತರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಕೆಲಸ ಮಾಡದಿದ್ದರೆ ಹಣ ಸಂಪಾದನೆಯಾಗುವುದಿಲ್ಲ. ಸಂಪಾದನೆಯಾಗದಿದ್ದರೆ ಹೊಟ್ಟೆ ತುಂಬುವುದಿಲ್ಲ . ಜೀವನ ಸುಖವಾಗಿ ಸಾಗಬೇಕಾದರೆ ಕೈ ಕೆಸರಾಗಲೇ ಬೇಕು; ಕೈ ತುಂಬಾ ಸಂಪಾದನೆಯಾಗಲೇಬೇಕು. ಆಗ ನಮಗೆ ಒಳ್ಳೆಯ ಊಟ , ಆಹಾರ ಸಿಗುವಂತಾಗುತ್ತದೆ. ಅದಕ್ಕೇ ಹಿರಿಯರು ಹೇಳಿದ್ದು ‘ಕೈ ಕೆಸರಾದರೆ ಬಾಯಿ ಮೊಸರು’
Similar questions