India Languages, asked by umeumahaba75, 9 days ago


೩.ಕೆಳಗೆ ಕೊಟ್ಟಿರುವ ವಿಷಯಗಳಲ್ಲಿ ಒಂದಕ್ಕೆ ಹದಿನೈದು ವಾಕ್ಯಗಳು ಮೀರಿದಂತೆ ಪ್ರಬಂಧವನ್ನು
ಬರೆಯಿರಿ.
೨) ಬಾಲಕಾರ್ಮಿಕ ಪದ್ಧತಿ ​

Answers

Answered by Anonymous
1

ಉತ್ತರ:

ಮಕ್ಕಳ ದಿನನಿತ್ಯದ ಹಾಗು ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕ (ಯು. ಯಸ್ ಬಾಲ ಕಾರ್ಮಿಕ) ಎಂದು ಕರೆಯಲಾಗುತ್ತದೆ. ಈ ಅಭ್ಯಾಸವನ್ನು ಹಲವು ಅಂತರರಾಷ್ಟ್ರೀಯ ಸಂಘಗಳು ಶೋಷಣೀಯ ಎಂದು ಪರಿಗಣಿಸಿವೆ ಮತ್ತು ಹಲವಾರು ದೇಶಗಳಲ್ಲಿ ಈ ಪದ್ಧತಿ ಕಾಯಿದೆಗೆ ವಿರೋಧವಾದದ್ದು. ಇತಿಹಾಸದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ.

ಬಾಲ ಕಾರ್ಮಿಕ ಪದ್ಧತಿ :

✰ಕೆಲವು ಮುಂದುವರಿದ ದೇಶಗಳಲ್ಲಿ, ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶೋಷಣೀಯ ಅಥವಾ ಸಮಂಜಸವಲ್ಲ ಎಂದು ಪರಿಗಣಿಸಿವೆ.(ಮನೆಗೆಲಸ ಅಥವಾ ಶಾಲೆಗೆ ಸಂಭಂಧಿಸಿದ ಕೆಲಸಗಳನ್ನು ಹೊರತುಪಡಿಸಿ).ಉದ್ಯೋಗಿಯೊಬ್ಬನು ನಿಗದಿತ ಕೆಳವಯಸ್ಸಿನ ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುವುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುವುದಿಲ್ಲ.

☆ಈ ನಿಗದಿತ ಕಿರಿ ವಯಸ್ಸು ದೇಶ ಮತ್ತು ಕೆಲಸದ ವಿವಿಧ ಮಾದರಿಯ ಮೇಲೆ ಅವಲಂಬಿತವಾಗಿದೆ. 1973ರ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಿರಿ ವಯಸ್ಸಿನ ಪದ್ಧತಿಯನ್ನು, ಅಂದರೆ ಸುಮಾರು 14ರಿಂದ 16ರ ವಯಸ್ಸಿನ ಒಳಗಿನ ಮಕ್ಕಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದೆಂಬ ನೀತಿಯನ್ನು ಅಮೆರಿಕಾವು ಅಳವಡಿಸಿಕೊಂಡಿದೆ. ಅಮೆರಿಕಾದ ಬಾಲ ಕಾರ್ಮಿಕ ಕಾಯಿದೆಗಳು, ಪೋಷಕರ ಸಹಕಾರವಿಲ್ಲದೆ ಮತ್ತು ಯಾವುದೇ ನಿರ್ಬಂಧವಿಲ್ಲದೆ ಉದ್ಯಮದಲ್ಲಿ ದುಡಿಯುವ ಕಿರಿ ನಿಗದಿತ ವಯಸ್ಸನ್ನು 16ಎಂದು ಪರಿಗಣಿಸಿವೆ.

✰ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಪ್ರಪಂಚದಲ್ಲಿ 1960ರಿಂದ 2003ರ ಮಧ್ಯದಲ್ಲಿ ಬಾಲ ಕಾರ್ಮಿಕ ಘಟನೆಗಳು ಶೇಕಡಾ 25ರಿಂದ 10ಕ್ಕೆ ಇಳಿದಿವೆ.

ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ

★ಬಾಲ ಕಾರ್ಮಿಕರಿಂದ ತಯಾರಿಸಲ್ಪಟ್ಟ ಅಥವಾ ಜೋಡಿಸಲ್ಪಟ್ಟ ಉತ್ಪಾದನೆಗಳನ್ನು ಕೊಂಡುಕೊಳ್ಳುವ ಸಾರ್ವಜನಿಕರ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಆದಾಗ್ಯೂ, ಬೇರೆಯವರು ಬಾಲಕಾರ್ಮಿಕರಿಂದ ತಯಾರಿಸಲ್ಪಟ್ಟ ಉತ್ಪಾದನೆಗಳನ್ನು ಬಹಿಷ್ಕರಿಸುವುದರಿಂದ ಮಕ್ಕಳುನ್ನು ಮತ್ತಷ್ಟು ಅಪಾಯಕರವಾದ ವೇಶ್ಯಾವಾಟಿಕೆ ಅಥವಾ ಶ್ರಮದಾಯಕವಾದ ಬೇಸಾಯ ವೃತ್ತಿಗಳಿಗೆ ಬಲವಂತವಾಗಿ ತಳ್ಳಿದಂತಾಗುತ್ತದೆ ಎಂದು ಕಾಳಜಿ ಪಟ್ಟಿದ್ದಾರೆ.

★ಉದಾಹರಣೆಗಾಗಿ, ಯುನಿಸೆಫ್ ಅಧ್ಯಯನ ಕಂಡುಕೊಂಡಂತೆ ಯುಎಸ್ ನಲ್ಲಿ ಚೈಲ್ಡ್ ಲೇಬರ್ ಡಿಟರೆನ್ಸ್ ಆಕ್ಟ್ ಅನ್ನು ಜಾರಿಗೆ ತಂದ ನಂತರ, ಬಾಂಗ್ಲಾದೇಶದ ಸಿದ್ಧ ಉಡುಪುಗಳ ಕೈಗಾರಿಕೆಯಲ್ಲಿ ಕೆಲಸದಲ್ಲಿ ತೊಡಗಿರುವ ಸುಮಾರು 50,000 ಮಕ್ಕಳನ್ನು ಕೆಲಸ ದಿಂದ ತೆಗೆದು ಹಾಕಲಾಯಿತು.

★ಮಿಲ್ಟನ್ ಫ್ರೈಡ್-ಮ್ಯಾನ್ನ ಪ್ರಕಾರ ಕೈಗಾರಿಕಾ ಕ್ರಾಂತಿಗೆ ಮೊದಲು ವಾಸ್ತವವಾಗಿ ಎಲ್ಲ ಮಕ್ಕಳು ಬೇಸಾಯದಲ್ಲಿ ದುಡಿಯುತ್ತಿದ್ದರು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹಲವು ಮಕ್ಕಳು ಹೊಲದ ಕೆಲಸದಿಂದ ಕಾರ್ಖಾನೆ ಕೆಲಸಕ್ಕೆ ಬಂದರು. ಮುಂದೆ ಅವರ ವೇತನದ ಹೆಚ್ಚಳದಿಂದ ಪೋಷಕರು ಅವರ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬದಲು ಶಾಲೆಗಳಿಗೆ ಕಳುಹಿಸುವುದು ಸಾಧ್ಯವಾಯಿತು.

★ಆದ ಥಾಮಸ್ ಡಿಗ್ರೆಗೊರಿ ಎಂಬುವವರ ಪ್ರಕಾರ, ಕ್ಯಾಟೋ ಸಂಸ್ಥೆಯು ಪ್ರಕಟಿಸಿದ ಲೇಖನವೊಂದರಲ್ಲಿ, ವಾಷಿಂಗ್ಟನ್ ಡಿ.ಸಿ ಯಲ್ಲಿರುವ ಒಂದು ಲಿಬರ್ಟೇರಿಯನ್ ಸಂಶೋಧನಾ ಸಂಸ್ಥೆಯು ಸ್ಪಷ್ಟ ಪಡಿಸು ವುದೇನೆಂದರೆ, "ತಾಂತ್ರಿಕವಾದ ಮತ್ತು ಆರ್ಥಿಕವಾದ ಬದಲಾವಣೆಗಳ ಸಲಕರಣೆಗಳನ್ನು ಜಾರಿಗೊಳಿಸುವುದರಿಂದ ಮಕ್ಕಳನ್ನು ಕೆಲಸದ ಸ್ಥಳದಿಂದ ಹೊರಗೆ ತರುವುದು ಮತ್ತು ಅವರನ್ನು ಶಾಲೆಗೆ ಕಳುಹಿಸುವುದು.

★ಆಗ ಅವರು ಜವಾಬ್ದಾರಿಯುತ ವಯಸ್ಕರಾಗಿ ಬೆಳೆಯಬಹುದು ಮತ್ತು ಹೆಚ್ಚು ದಿನ ಆರೋಗ್ಯವಾಗಿ ಬದುಕಬಹುದು. ಹೀಗಿದ್ದಾಗ್ಯೂ, 19ನೇ ಶತಮಾನದ ಕೊನೆಯವರೆಗೆ ಬಾಲಕಾರ್ಮಿಕ ಪದ್ದತಿಯು ಹೇಗೆ ನಮ್ಮಲ್ಲಿ ಪಾರಂಪರಿಕವಾಗಿತ್ತೋ, ಹಾಗೆಯೇ ಬಾಂಗ್ಲಾದೇಶ ಮುಂತಾದ ಬಡ ರಾಷ್ಟ್ರಗಳಲ್ಲಿ, ದುಡಿಯುವ ಮಕ್ಕಳು ಹಲವಾರು ಕುಟುಂಬಗಳ ಉಳಿವಿಗಾಗಿ ಮುಖ್ಯವಾಗಿರುತ್ತಾರೆ.

★ಆದುದರಿಂದ, ಬಾಲ ಕಾರ್ಮಿಕ ಪದ್ದತಿಯನ್ನು ಕೊನೆಗೊಳಿಸಲು ಹೋರಾಡುವುದು ಹೇಗೆ ಅವಶ್ಯಕವಾಗಿದೆಯೋ, ಇದನ್ನು ಸಾಧಿಸಲು ವಿವಿಧ ಮಾರ್ಗಗಳ ಅವಶ್ಯಕತೆ ಇದೆ, ಮತ್ತು ದುಃಖದ ಸಂಗತಿಯೆಂದರೆ ಇದನ್ನು ಸಾಧಿಸಲು ಹಲವಾರು ರಾಜಕೀಯ ಅಡ್ಡಿಗಳಿವೆ.

Similar questions