ನಿಮಗೆ ಇಷ್ಟವಾದ ಎರಡು ಕೀಡೆಗಳ ಬಗ್ಗೆ ಬರೆಯಿರಿ ಕ್ರಿಕೆಟ್
Answers
ಕ್ರಿಕೆಟ್:
ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
ಕ್ರಿಕೆಟ್ ನಿಯಮಗಳು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಸ್ಥಾಪಿಸಿದ ಕ್ರಿಕೆಟ್ ಆಟ ಆಡುವವರು ಜಗತ್ತಿನಾದ್ಯಂತ ಬಳಸಬಲ್ಲ ಸೂತ್ರಗಳ ಸಂಗ್ರಹವಾಗಿದ್ದು, ಇದು ಕ್ರಿಕೆಟ್‌ಅನ್ನು ವಿಶ್ವದಲ್ಲೆಲ್ಲಾ ಒಂದೇ ರೀತಿಯಲ್ಲಿ ಮತ್ತು ನ್ಯಾಯಯುತವಾಗಿ ಆಡಲು ಸಹಾಯಕವಾಗಿವೆ. ಸಧ್ಯದಲ್ಲಿ ಒಟ್ಟಾರೆ ೪೨ ನಿಯಮಗಳಿದ್ದು, ಇವು ಕ್ರೀಡೆಯನ್ನು ಆಡುವುದರಿಂದ ಹಿಡಿದು, ಆಟವನ್ನು ತಂಡವು ಯಾವ ರೀತಿ ಗೆಲ್ಲುತ್ತದೆ, ಬ್ಯಾಟ್ಸ್ ಮನ್ ಗಳು ಔಟ್ ಆಗುವುದು ಹೇಗೆ, ಆಡುವ ಪಿಚ್ ಅನ್ನು ಹೇಗೆ ತಯಾರಿಸಬೇಕು ಮತ್ತು ಹೇಗೆ ಸಂರಕ್ಷಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ವಿಧಿವಿಧಾನಗಳನ್ನು ಸೂಚಿಸುತ್ತವೆ. MCC ಒಂದು ಖಾಸಗಿ ಕ್ಲಬ್ ಆಗಿದ್ದು, ಇದು ಇಂಗ್ಲೆಂಡ್ ನ ಲಂಡನ್ ನಲ್ಲಿದೆ ಹಾಗೂ ಈಗ ಅದು ಕ್ರಿಕೆಟ್ ಆಟದ ಆಡಳಿತವನ್ನು ನಡೆಸುವಂತಹ ಸಂಸ್ಥೆಯಾಗಿಲ್ಲ.