India Languages, asked by bhagyachandrasheker1, 9 days ago

ಗುಣಿತಾಕ್ಷರ ಎಂದರೇನು ಉದಾಹರಣೆ ನೀಡಿ?​

Answers

Answered by vivekpujar359
4

Answer:

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ

ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ

ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಹ:

ಈ ಸ್ವರಗಳು ಕ್ ಕಾರವನ್ನು ಸೇರಿದಾಗ ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ: ಆಗುತ್ತದೆ

ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು

ಸಂಯುಕ್ತಾಕ್ಷರಗಳು :-

ವ್ಯಂಜನಗಳಿಗೆ ಸ್ವರ ಸೇರಿದಾಗ ಗುಣಿತಾಕ್ಷರವಾಗುವಂತೆ

ವ್ಯಂಜನಗಳಿಗೆ ವ್ಯಂಜನಗಳೇ ಸೇರಿದಾಗ ಸಂಯುಕ್ತಾಕ್ಷರವಾಗುತ್ತದೆ

ಇವನ್ನು ಒತ್ತಕ್ಷರ ಎಂದೂ ಕರೆಯಬಹುದು

ಒಂದು ವ್ಯಂಜನಕ್ಕೆ ಅದೇ ವ್ಯಂಜನ ಸೇರಿದಾಗ ಬರುವ ಒತ್ತಕ್ಷರವನ್ನು ಸ್ವಜಾತೀಯ ಸಂಯುಕ್ತಾಕ್ಷರವೆಂದು ಕರೆಯಬಹುದು

ಉದಾಹರಣೆ ಗಮನಿಸಿ : ಅಕ್ಕ , ಅಪ್ಪ , ಅಮ್ಮ ಅಣ್ಣ , ಹಗ್ಗ , ಅಟ್ಟ , ಅಡ್ಡ , ಕದ್ದ , ಅನ್ನ, ಹಬ್ಬ

ಹಾಗೆ ಒಂದು ವ್ಯಂಜನಕ್ಕೆ ಮತ್ತೊಂದು ವ್ಯಂಜನ ಒತ್ತಾಗಿ ಬಂದಾಗ, ವಿಜಾಯೀಯ ಸಂಯುಕ್ತಾಕ್ಷರವೆನಿಸುತ್ತದೆ

ಉದಾಹರಣೆ: ಪುಸ್ತಕ, ವ್ಯಾಕರಣ, ಆಶ್ಚರ್ಯ ಇತ್ಯಾದಿ...

Answered by shivadeepthi25
2

ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕ

Similar questions