India Languages, asked by prathimap884, 1 month ago

ಕನ್ನಡ ಸಂಧಿಗಳ ಸುಲಭ ಸೂತ್ರಗಳು​

Answers

Answered by Anonymous
6

\large\underline\bold\red{QuSeTiOn}

ಕನ್ನಡ ಸಂಧಿಗಳ ಸುಲಭ ಸೂತ್ರಗಳು

\large\underline\bold\red{AnSwEr}

ಕನ್ನಡ ಸಂಧಿಗಳು

★ಲೋಪ ಸಂಧಿ

★ಆಗಮ ಸಂಧಿ

★ಆದೇಶ ಸಂಧಿ

ಸೂತ್ರಗಳು:

ಲೋಪಸಂಧಿ: ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.

ಆಗಮ ಸಂಧಿ: ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.

ಆದೇಶಸಂಧಿ: ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.

hope  \: it  \: helps ✔︎✔︎

Answered by Anonymous
5

ಕನ್ನಡ ಭಾಷೆಗೆ ಸಾವಿರಾರು ವರ್ಷಗಳಿಂದ ಸಂಸ್ರೃತದ ಅನೇಕ ಶಬ್ದಗಳು ಬಂದು ಸೇರಿವೆ. ಈ ರೀತಿಯಲ್ಲಿ ಬಂದು ಸೇರಿದ ಸಂಸ್ರೃತ ಶಬ್ದಗಳು ಕಾಲ ವಿಳಂಬವಿಲ್ಲದೆ ಕೂಡಿದಾಗ ಸಂಧಿ ಏರ್ಪಡುತ್ತದೆ.

ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾದರೆ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾದರೆ ವ್ಯಂಜನ ಸಂಧಿಗಳೆಂದು ಹೆಸರು.

ಸಂಸ್ಕೃತ ಸ್ವರ ಸಂಧಿಗಳು

ಸ್ವರಸಂಧಿಗಳಲ್ಲಿ ಮುಖ್ಯವಾದವುಗಳು, ಸವರ್ಣಧೀರ್ಘ ಸಂಧಿ, ಗುಣ ಸಂಧಿ, ವೃದ್ಧಿ ಸಂಧಿ, ಯಣ್ ಸಂಧಿ.

ಸವರ್ಣಧೀರ್ಘ ಸಂಧಿ

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾ:

ದೇವ + ಅಸುರ = ದೇವಾಸುರ

ಸುರ + ಅಸುರ = ಸುರಾಸುರ

ಮಹಾ + ಆತ್ಮ = ಮಹಾತ್ಮ

ಕವಿ + ಇಂದ್ರ = ಕವೀಂದ್ರ

ಗಿರಿ + ಈಶ = ಗಿರೀಶ

ಲಕ್ಷೀ + ಈಶ = ಲಕ್ಷ್ಮೀಶ

ಗುಣ ಸಂಧಿ

ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಓ' ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ 'ಆರ್' ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ 'ಗುಣಸಂಧಿ' ಎಂದು ಹೆಸರು.

ಉದಾ:

ಸುರ + ಇಂದ್ರ = ಸುರೇಂದ್ರ

ಧರಾ + ಇಂದ್ರ = ಧರೇಂದ್ರ

ಧರಾ + ಇಂದ್ರ = ಧರೇಂದ್ರ

ಮಹಾ + ಈಶ್ವರ = ಮಹೇಶ್ವರ

ಚಂದ್ರ + ಉದಯ = ಚಂದ್ರೋದಯ

ದೇವ + ಋಷಿ = ದೇವರ್ಷಿ

ಮಹಾ + ಋಷಿ = ಮಹರ್ಷಿ

ವೃದ್ಧಿಸಂಧಿ

ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.

ಉದಾ:

ಲೋಕ + ಏಕವೀರ = ಲೋಕೈಕವೀರ

ಜನ + ಐಕ್ಯ = ಜನೈಕ್ಯ

ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ

ಘನ + ಔದಾರ್ಯ = ಘನೌದಾರ್ಯ

ಮಹಾ + ಔದಾರ್ಯ = ಮಹೌದಾರ್ಯ

ಯಣ್ ಸಂಧಿ

ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ 'ಯ್' ಕಾರವು, ಉ, ಊ, ಕಾರಗಳಿಗೆ 'ವ್' ಕಾರವು, ಋ ಕಾರಕ್ಕೆ 'ರ್' ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

ಉದಾ:

ಅತಿ + ಅವಸರ = ಅತ್ಯವಸರ

ಜಾತಿ + ಅತೀತ = ಜಾತ್ಯಾತೀತ

ಕೋಟಿ + ಅಧೀಶ = ಕೋಟ್ಯಾಧೀಶ

ಗತಿ + ಅಂತರ = ಗತ್ಯಂತರ

ಪ್ರತಿ + ಉತ್ತರ = ಪ್ರತ್ಯುತ್ತರ

ಅತಿ + ಆಸೆ = ಅತ್ಯಾಸೆ

ಗುರು + ಆಜ್ಞೆ = ಗುರ್ವಾಜ್ಞೆ

ಮನು + ಆದಿ = ಮನ್ವಾದಿ

ಧನ್ಯವಾದಗಳು!

Similar questions