India Languages, asked by prathimap884, 3 months ago

ಆರ್ಥಿಕಾಭಿವೃದ್ಧಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪ್ರಾವನ್ನು ವಿವರಿಸಿ.​

Answers

Answered by vivekpujar359
0

Explanation:

ವಿಷಯ

ದೇಶದ ಸ್ವಸಹಾಯ ಗುಂಪುಗಳ ಸದಸ್ಯರ ಜತೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದ ಸಂದರ್ಭದಲ್ಲಿ ಮಾಡಿದ ಭಾಷಣ.

12 Jul, 2018

ನಮಸ್ತೇ,

ಇವತ್ತು ನನ್ನನ್ನು ಆಶೀರ್ವದಿಸಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನನ್ನ ತಾಯಂದಿರು ಮತ್ತು ಸೋದರಿಯರು ಸೇರಿಕೊಂಡಿದ್ದೀರಿ. ದೇಶದ ಉನ್ನತಿಗಾಗಿ ಕೆಲಸ ಮಾಡಲು ಇದಕ್ಕಿಂತಲೂ ಶಕ್ತಿ ಮತ್ತು ಉತ್ಸಾಹ ಬೇರೆ ಇನ್ನಾರಿಗಾದರೂ ಸಿಗಲು ಸಾಧ್ಯವೇ.?

ದೇಶಕ್ಕಾಗಿ ಏನನ್ನಾದರೂ ಮಾಡಲು ನಿಮ್ಮೆಲ್ಲರ ಪ್ರೀತಿ ಮತ್ತು ಆಪ್ಯತೆಯು ಬಲ ನೀಡಿದೆ. ನೀವೆಲ್ಲರೂ ಭರವಸೆಯ ಶ್ರೀಮಂತರಾಗಿದ್ದು ಉದ್ಯಮಶೀಲತೆಗೆ ಸಮರ್ಪಣೆ ಮಾಡಿಕೊಂಡಿದ್ದೀರಿ. ನಿಮಗೆಲ್ಲರಿಗೂ ಒಂದು ತಂಡವಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದು ಗೊತ್ತಿದೆ. ಸಂಘಟಿತ ಪ್ರಯತ್ನವನ್ನು ಹೇಗೆ ಮಾಡಬೇಕು ಎನ್ನುವುದನ್ನು ತೋರಿಸಿದ್ದೀರಿ. ವಿಶ್ವದ ದೊಡ್ಡದೊಡ್ಡ ವಿಶ್ವ ವಿದ್ಯಾಲಯಗಳಿಗೂ ಭಾರತದ ಬಡ ತಾಯಂದಿರು ಮತ್ತು ಸೋದರಿಯರು ಸಂಘಟಿತರಾಗಿ ಶ್ರಮಿಸುತ್ತಿದ್ದಾರೆ ಎನ್ನುವ ಅಧ್ಯಯನವನ್ನು ಮಾಡಲು ಸಮಯ ಸಿಕ್ಕಿಲ್ಲದೇ ಇದ್ದರೂ ನಿಮ್ಮ ಸಾಂಘಿಕ ಸ್ಪೂರ್ತಿ, ಕೆಲಸವನ್ನು ಹೇಗೆ ಹಂಚಿಕೆ ಮಾಡಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದನ್ನು ಅರಿಯುತ್ತಿದ್ದಾರೆ.

ನಾವು ಮಹಿಳಾ ಸ್ವಾವಲಂಬನೆಯ ಬಗ್ಗೆ ಮಾತನಾಡಿದರೆ ಬಹಳ ಮುಖ್ಯವಾಗಿ ಅವರ ಸಾಮರ್ಥ್ಯ, ಅರ್ಹತೆ ಮತ್ತು ಕೌಶಲ್ಯಗಳನ್ನು ಗುರುತಿಸಬೇಕಿದೆ. ಮಹಿಳೆಯರಿಗೆ ಯಾವುದನ್ನೂ ಕಲಿಸುವ ಅಗತ್ಯ ಇಲ್ಲ. ಅವರೊಳಗೆ ಸಾಕಷ್ಟು ಸಂಗತಿಗಳಿವೆ ಅವುಗಳನ್ನು ಹೊರ ಹಾಕಲು ಅವಕಾಶಗಳನ್ನು ಒದಗಿಸಿಕೊಡಬೇಕಷ್ಟೇ. ನಮ್ಮ ತಾಯಂದಿರು ಮತ್ತು ಸೋದರಿಯರಿಗೆ ಅವಕಾಶ ಸಿಕ್ಕ ದಿನ ಅವರು ಅದ್ಭುತಗಳನ್ನು ಮಾಡುತ್ತಾರೆ, ಅಡೆತಡೆಗಳಿಂದ ಹೊರಬರುತ್ತಾರೆ. ನೀವು ನಾರೀ ಶಕ್ತಿಯನ್ನೊಮ್ಮೆ ನೋಡಿ. ಅವರಿಗೆ ಯಾವುದನ್ನೂ ನಿಭಾಯಿಸುವುದು ಅಸಾಧ್ಯವಲ್ಲ. ಬೆಳಗ್ಗೆಯಿಂದ ರಾತ್ರಿವರೆಗೂ ಅವರ ಸಮಯದ ವ್ಯವಸ್ಥಾಪನೆಯನ್ನು ನೋಡಿ, ಅವಳ ಗ್ರಾಮೀಣ ಮತ್ತು ಸಾಮಾಜಿಕ ಬದುಕು ಹಾಗೂ ಕುಟುಂಬದಲ್ಲಿ ಏನೆಲ್ಲಾ ಬದಲಾವಣೆ ಬೇಕೋ ಅದಕ್ಕೆ ತಕ್ಕಂತೆ ಅವಳು ನಿರಂತರವಾಗಿ ದುಡಿಯುತ್ತಾಳೆ. ನಮ್ಮ ದೇಶದ ಮಹಿಳೆಯರು ಅತ್ಯಂತ ಸಮರ್ಥರು, ಏನನ್ನಾದರೂ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಸಂಕಷ್ಟಗಳ ಜತೆ ಹೋರಾಡುವ ಧೈರ್ಯವನ್ನು ಹೊಂದಿದ್ದಾರೆ. ಯಾವಾಗ ಅವರು ಆರ್ಥಿಕವಾಗಿ ಸಬಲರಾಗುತ್ತಾರೋ..ಆರ್ಥಿಕವಾಗಿ ಸ್ವಾವಲಂಬನೆಯನ್ನು ಹೊಂದುತ್ತಾರೋ ಆಗಲೇ ಮಹಿಳಾ ಸ್ವಾವಲಂಬನೆ ಎಂದು ನಾನು ನಂಬಿದ್ದೇನೆ. ಯಾವಾಗ ಮಹಿಳೆ ಆರ್ಥಿಕವಾಗಿ ಸಮರ್ಥಳಾಗುತ್ತಾಳೋ ಆಗ ಅವಳಲ್ಲಿ ವಿಶ್ವಾಸ ಮೂಡುತ್ತದೆ. ಆಗ ಅವಳು ತನ್ನ ಮಕ್ಕಳಿಗೆ ಹೀಗೆ ಮಾಡಿ..ಹೀಗೆ ಮಾಡಬೇಡಿ ಎಂದು ಮಾರ್ಗದರ್ಶನವನ್ನು ಮಾಡುತ್ತಾಳೆ. ಅಷ್ಟೇ ಅಲ್ಲದೇ ಇದನ್ನು ಮಾಡಿ..ಇದನ್ನು ಮಾಡಬೇಡಿ ಎಂದು ತನ್ನ ಗಂಡನಿಗೂ ಸಲಹೆಗಳನ್ನು ನೀಡಬಲ್ಲಳು. ಅದೇ ಕಾರಣಕ್ಕೆ ಮಹಿಳೆಯ ಆರ್ಥಿಕ ಸ್ವಾವಲಂಬನೆಯು ಅವರ ಪಾಲುದಾರಿಕೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯ ಒಳಗೊಳ್ಳುವಿಕೆಯನ್ನು ವೃದ್ಧಿಸುತ್ತದೆ.

ಮಹಿಳೆಯ ಆರ್ಥಿಕ ಶಕ್ತಿಯಲ್ಲಿ ವೃದ್ಧಿಯನ್ನು ಕಂಡರೆ ಅದು ಸಾಮಾಜಿಕ ಪಿಡುಗುಗಳ ಮೇಲೆ ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಯಾವಾಗ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೋ ಅವರು ತಮ್ಮಲ್ಲೇ ಸಾಮಾಜಿಕ ಪಿಡುಗುಗಳನ್ನು ನಿಯಂತ್ರಿಸಿಕೊಳ್ಳುತ್ತಾರೆ. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಾಳೆ. ಇಂದು ನೀವು ಯಾವುದೇ ಕ್ಷೇತ್ರವನ್ನು ನೋಡಿ ಆ ಕ್ಷೇತ್ರಗಳಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಹೈನುಗಾರಿಕೆಯು ಹೆಣ್ಣು ಮಕ್ಕಳಿಲ್ಲದೇ ಇರಲು ಸಾಧ್ಯ ಎಂದು ಯಾರಾದರೂ ಊಹಿಸಲು ಸಾಧ್ಯವೇ..? ನಮ್ಮ ತಾಯಂದಿರುವ ಮತ್ತು ಸೋದರಿಯರ ಕೊಡುಗೆ ಇಲ್ಲದೇ ಬೇಸಾಯ ಕ್ಷೇತ್ರ ಮುಂದೆ ಸಾಗಲು ಸಾಧ್ಯ ಎಂದು ಯಾರಾದರೂ ಊಹಿಸಿಕೊಳ್ಳಲು ಸಾಧ್ಯವಿದೆಯೇ..? ಕೆಲವೇ ಕೆಲವು ಮಂದಿ ಈ ಬಗ್ಗೆ ಅರಿತುಕೊಂಡಿದ್ದಾರೆ. ಅವರು ಗ್ರಾಮೀಣ ಪ್ರದೇಶಗಳಿಗೆ, ಕೃಷಿ ಭೂಮಿಗೆ ಹೋಗಿ ನೋಡಿದರೆ ನಮ್ಮ ತಾಯಂದಿರುವ ಮತ್ತು ಸೋದರಿಯರ ಪಾತ್ರ ಎಷ್ಟು ದೊಡ್ಡದು ಎಂದು ತಿಳಿದುಕೊಳ್ಳಲು ಸಾಧ್ಯವಿದೆ.

ಹಾಗೆ ನೋಡಿದರೆ ಹೈನುಗಾರಿಕೆ ಎನ್ನುವುದು ಶೇಕಡಾ 100ರಷ್ಟು ಮಹಿಳೆಯರನ್ನೇ ಅವಲಂಬಿಸಿದೆ. ಇವತ್ತು ದೇಶದಲ್ಲಿ ಆಗುತ್ತಿರುವ ಹಾಲಿನ ಉತ್ಪಾದನೆ ಆಗುತ್ತಿದೆಯೋ ಅದರಲ್ಲಿ ನಮ್ಮ ತಾಯಂದಿರು ಮತ್ತು ಸೋದರಿಯರ ಕೊಡುಗೆ ನೂರಕ್ಕೆ ನೂರರಷ್ಟಿದೆ. ಹೈನುಗಾರಿಕೆಯು ಅತ್ಯಂತ ಪರಿಶ್ರಮ ಹಾಕಬೇಕಿರುವ ಕ್ಷೇತ್ರ. ನಮ್ಮ ತಾಯಂದಿರು ಮತ್ತು ಸೋದರಿಯರು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಮಹಿಳೆಯರು ಸ್ವಸಹಾಯ ಗುಂಪುಗಳ ಸಹಾಯ ಪಡೆದು ಸಾಂಘಿಕ ಸಭೆಗಳನ್ನು ನಡೆಸಿ ತಮಗೆ ಅಗತ್ಯ ಇರುವುದನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ. ಸ್ವಸಹಾಯ ಸಂಘಗಳ ಈ ಪ್ರಯತ್ನಗಳು ಇನ್ನಷ್ಟು ವಿಸ್ತರಿಸಬೇಕು ಮತ್ತು ಹೆಚ್ಚು ಫಲಾನುಭವಿಗಳಿಗೆ ತಲುಪಬೇಕು. ಹೆಚ್ಚು ಜನರನ್ನು ತಲುಪಿದರೆ ಸುಧಾರಣೆ ಸಾಧ್ಯವಿದೆ.

ಭಾರತ ಸರ್ಕಾರದ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಲೈವ್ಲಿವುಡ್ ಮಿಷನ್ ಮೂಲಕ ಸ್ವಸಹಾಯ ಗುಂಪುಗಳ ಸದಸ್ಯರು, ಗುಇ ಕೈಗಾರಿಕೆಗಳ ಕೆಲಸಗಾರರು ಮತ್ತು ಯುವಕರ ಮೂಲಕ ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ಯಶಸ್ಸುಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ನಾನು ಸಂಪೂರ್ಣ ಅನಕ್ಷರಸ್ಥ ಮಹಿಳೆಯರನ್ನು ಕಂಡಿದ್ದೇನೆ. ಆದರೆ ಅವರು ಸ್ವಸಹಾಯ ಸಂಘಗಳು ಎಂದರೆ ಏನು ಎನ್ನುವುದನ್ನು ಚೆನ್ನಾಗಿ ಗ್ರಹಿಸಿಕೊಂಡಿದ್ದಾರೆ. ಅದನ್ನು ಇಂಗ್ಲಿಷ್ ನಲ್ಲೂ ಉಚ್ಛಾರಣೆ ಮಾಡಬಲ್ಲರು. ಇದೇ ಪದವನ್ನು ಹಿಂದಿಯಲ್ಲಿ ಉಚ್ಛಾರಣೆ ಮಾಡಿದರೆ ಆಕೆ ಆಶ್ಚರ್ಯ ಪಡುತ್ತಾಳೆ. ಆ ಪದವು ಅಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಇದೇ ಪದವನ್ನು ಹೇಳುತ್ತಿದ್ದೇನೆ.

ಇಂದು ಸ್ವಸಹಾಯ ಗುಂಪುಗಳು ಮಹಿಳೆಯರ, ವಿಶೇಷವಾಗಿ ಬಡ ಮಹಿಳೆಯರ ಆರ್ಥಿಕ ಉನ್ನತಿಯ ತಳಹದಿಯಾಗಿವೆ. ಈ ಸ್ವಸಹಾಯ ಗುಂಪುಗಳು ಮಹಿಳೆಯರನ್ನು ಗುರುತಿಸುವಂತೆ ಮತ್ತು ಅವರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಿವೆ. ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಲೈವ್ಲಿವುಡ್ ಮಿಷನ್ 2 .5 ಲಕ್ಷ ಗ್ರಾಮಗಳ ಕೋಟಿ ಕೋಟಿ ಕುಟುಂಬಗಳನ್ನು ತಲುಪುವ ಪ್ರಯತ್ನವನ್ನು ಮಾಡಿದೆ. ಯಶಸ್ವಿ ಪರಿಶ್ರಮವನ್ನು ಹಾಕಿ ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗ್ರಾಮೀಣ ಮಹಿಳೆಯರಿಗೆ ಸ್ಥಿರ ಬದುಕನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಹೀಗಾಗಿಯೇ ಎಲ್ಲಾ ಗ್ರಾಮಗಳಲ್ಲೂ ಯೋಜನೆಯನ್ನು ಆರಂಭಿಸಲಾಗಿದೆ. ಲಕ್ಷಾಂತರ ಮತ್ತು ಕೋಟ್ಯಂತರ ಮಹಿಳೆಯರನ್ನು ತಲುಪಿ ಅವರ ಬದುಕನ್ನು ಉದ್ದಾರ ಮಾಡುವ ಕಾರ್ಯದಲ್ಲಿ ತೊಡಗಿರುವ ಎಲ್ಲಾ ರಾಜ್ಯಗಳು ಮತ್ತು ಅಧಿಕಾರಿಗಳನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ.

Similar questions