India Languages, asked by Pravalka, 1 month ago

ಈ ಕೆಳಗೆ ಕೊಟ್ಟಿರುವ ಚಿತ್ರವನ್ನು ಗಮನಿಸಿ “ಪುಣ್ಯಕೋಟಿ" ಕತೆಯನ್ನು ೧೫೦ ಶಬ್ದ ಮೀರದಂತೆ ಬರೆಯಿರಿ.​

Attachments:

Answers

Answered by Anonymous
2

ಪುಣ್ಯಕೋಟಿಯ ಕತೆಯು ಕನ್ನಡ ನಾಡಿನ ಜನಪ್ರಿಯ ಕಥನಕವನ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಈ ಕವನದ ಭಾಗಗಳನ್ನು ನಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿದ್ದರು. ಕವನದ ಕೊನೆಗೆ ಒಂದು ಪ್ರಶ್ನೆ ಇರುತ್ತಿತ್ತು: ಯಾರ ತ್ಯಾಗ ಹೆಚ್ಚಿನದು, ಪುಣ್ಯಕೋಟಿಯದೊ ಅಥವಾ ಹುಲಿಯದೊ?

ನಾವು ವಿದ್ಯಾರ್ಥಿಗಳೆಲ್ಲ ಪುಣ್ಯಕೋಟಿಯ ಪರವಾಗಿ ಇದ್ದರೆ, ನಮ್ಮ ಗುರುಗಳು ಹುಲಿಯ ತ್ಯಾಗ ಹೇಗೆ ಹೆಚ್ಚಿನದು ಎಂದು ವಿವರಿಸುತ್ತಿದ್ದರು. ಗೋವು ಹೇಳೀಕೇಳೀ ಸಾಧು ಪ್ರಾಣಿ. ಸತ್ಯದ ಮಾರ್ಗದಲ್ಲಿ ನಡೆಯುವುದು ಅದಕ್ಕೆ ತಲೆತಲಾಂತರದ ಅಭ್ಯಾಸ. ಹುಲಿಯಾದರೊ ಕ್ರೂರ ಪ್ರಾಣಿ. ತನಗೆ ಹಸಿವಾದಾಗಲೂ ಸಹ ಪುಣ್ಯಕೋಟಿಯನ್ನು ಅದರ ದೊಡ್ಡಿಗೆ ಹೋಗಲು ಬಿಟ್ಟಿದ್ದು ಹುಲಿಯ ಹೆಚ್ಚುಗಾರಿಕೆ. ಪುಣ್ಯಕೋಟಿ ಮರಳಿ ಬಂದು ಹುಲಿಯ ಮನಃಪರಿವರ್ತನೆಯಾದ ಬಳಿಕ, ಅದು ತನ್ನ ಪ್ರಾಣತ್ಯಾಗವನ್ನು ಮಾಡಿದ್ದು ಹುಲಿಯ ತ್ಯಾಗವೇ ಹೆಚ್ಚಿನದು ಎನ್ನುವುದನ್ನು ತೋರಿಸುತ್ತದೆ ಇತ್ಯಾದಿ.

ಇತ್ತೀಚೆಗೆ ಪ್ರಸಿದ್ಧ ನಾಟಕಕಾರ ಹಾಗು ಹಿರಿಯ ಚಿಂತಕರಾದ ವ್ಯಾಸ ದೇಶಪಾಂಡೆಯವರು ಈ ಕವನದ ಮೇಲೆ ಹೆಚ್ಚಿನ ಬೆಳಕನ್ನು ಬೀರಿದರು. ಅವರ ಮುಖ್ಯ ಪ್ರಶ್ನೆ ಎಂದರೆ ಹುಲಿ ತನ್ನನ್ನು ತಾನೆ ಕೊಂದುಕೊಳ್ಳುವ ಕಾರಣವೇನು, ಎನ್ನುವುದು. ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ಹುಲಿಯ ಮನಃಪರಿವರ್ತನೆ ಆಗಿದೆ. ಇದರರ್ಥವೆಂದರೆ, ಇನ್ನು ಮೇಲೆ ಈ ಕೊಂದು ತಿನ್ನುವ ಕಾಯಕವನ್ನು ಅದು ಬಿಟ್ಟು ಬಿಡುತ್ತದೆ. ಆದರೆ ಅದು ಶಾಕಾಹಾರಿಯಾಗಿ ಬದುಕಲು ಸಾಧ್ಯವಿಲ್ಲವಲ್ಲ! ಈ ವಿಪರ್ಯಾಸವು ಆ ಹುಲಿಗೆ ಥಟ್ಟನೆ ಹೊಳೆದು, ಅದು ಆತ್ಮಹತ್ಯೆಯೆ ಉತ್ತಮ ಪರ್ಯಾಯವೆಂದು ಭಾವಿಸಿರಬಹುದು!

ವ್ಯಾಸ ದೇಶಪಾಂಡೆ ಹೇಳಿದರು: “ಹುಲಿಯು ಆ ಕ್ಷಣದಲ್ಲಿಯೇ ಪ್ರಾಣತ್ಯಾಗ ಮಾಡುವ ಕಾರಣವೆಂದರೆ, ಆ ಕ್ಷಣದಲ್ಲಿ ಅದಕ್ಕೆ ಸತ್ಯದ ದರ್ಶನವಾಗಿದೆ!

ಪುಣ್ಯಕೋಟಿಯು ಮರಳಿ ಬರಬಹುದೆಂದು ಹುಲಿಯು ಭಾವಿಸಿರಲಿಲ್ಲ. ಹಾಗಿದ್ದರೂ ಅದು ಪುಣ್ಯಕೋಟಿಯನ್ನು ಬಿಡಲು ಕಾರಣವೇನು? ಈ ಜಗತ್ತಿನಲ್ಲಿ ಸತ್ಯ, ಅಹಿಂಸೆಗಳು ಸುಳ್ಳು ಆದರ್ಶಗಳು. ತನ್ನ ಜೀವದ ಸುತ್ತು ಬಂದಾಗ, ಎಲ್ಲ ಆದರ್ಶಗಳೂ ಓಡಿ ಹೋಗುತ್ತವೆ. ಬದುಕಬೇಕಾದರೆ ಕ್ರೂರವಾಗಿ ಬದುಕಬೇಕು ಇದು ಆ ಹುಲಿಯ ನಂಬುಗೆಯಾಗಿತ್ತು. ತನ್ನ ನಂಬಿಕೆಯೇ ಸರಿ, ಪುಣ್ಯಕೋಟಿಯು ಮೋಸಗಾರ್ತಿ ಎನ್ನುವುದನ್ನು ಆ ಹುಲಿಗೆ ತೋರಿಸಬೇಕಾಗಿತ್ತು. ಆದರೆ ಪುಣ್ಯಕೋಟಿ ಮರಳಿ ಬಂದಾಗ, ಹುಲಿಯ ನಂಬಿಕೆಗಳು ಅಲುಗಾಡಿದವು. ತಾನೇ ಸೋತೆ ಎನ್ನುವುದು ಅದಕ್ಕೆಅರಿವಾಯಿತು. ತನ್ನ ಹಳೆಯ ನಂಬಿಕೆಗಳನ್ನು ಹೊತ್ತುಕೊಂಡು, ಹಳೆಯ ರೀತಿಯಲ್ಲಿಯೇ ಇನ್ನು ಬದುಕುವುದು ಸಾಧ್ಯವಿಲ್ಲ ಎಂದು ಆ ಹುಲಿಗೆ ಅನಿಸಿರಬಹುದು. ಆ ಕಾರಣದಿಂದಲೇ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.

ವಿಶ್ವಾಮಿತ್ರನು ಸತ್ಯ ಹರಿಶ್ಚಂದ್ರನನ್ನು ಸುಳ್ಳುಗಾರ ಎಂದು ತೋರಿಸುವ ಪ್ರಯತ್ನಕ್ಕೆ ಇದನ್ನು ಹೋಲಿಸಬಹುದು. ಭಾರತೀಯ ಶಾಸ್ತ್ರಗಳು, ಪುರಾಣಗಳು ಈ ಮಾತನ್ನೇ ಯಾವಾಗಲೂ ಘೋಷಿಸುತ್ತ ಬಂದಿವೆ: ‘ಸತ್ಯಂ ಶಿವಂ ಸುಂದರಮ್’, ಅಂದರೆ ಸತ್ಯಮಾರ್ಗವೇ ಬಾಳಿಗೆ ಕಲ್ಯಾಣಕರವಾದದ್ದು. ಸುಂದರಂ ಎಂದರೆ ದೈಹಿಕ ಚೆಲುವು ಅಂತಲ್ಲ, ಯಾವುದು ಬಾಳಿಗೆ ಬೆಳಕು ಕೊಡುವುದೊ ಅದೇ ಸುಂದರವಾದದ್ದು.

ಇಲ್ಲಿ ಕವಿಯು ಪುಣ್ಯಕೋಟಿಯನ್ನು ಸಾತ್ವಿಕತೆಯ ಪ್ರತೀಕವಾಗಿ ಹಾಗು ಹುಲಿಯನ್ನು ತಾಮಸ ಶಕ್ತಿಯ ಪ್ರತೀಕವಾಗಿ ತೋರಿಸಬಯಸುತ್ತಿದ್ದಾನೆ. ತಾಮಸ ಶಕ್ತಿಗೆ ತಾತ್ಪೂರ್ತಿಕವಾಗಿ ಮೇಲುಗೈಯಾಗಬಹುದು. ಆದರೆ ಸಾತ್ವಿಕತೆಯು ತನ್ನ ತ್ಯಾಗ, ಬಲಿದಾನಗಳ ಮೂಲಕವೇ ತಾಮಸ ಶಕ್ತಿಯ ಕಣ್ಣು ತೆರೆಯಿಸುತ್ತದೆ. ತಾಮಸ ಶಕ್ತಿಯನ್ನು ಸಾತ್ವಿಕತೆಗೆ ಬದಲಾಯಿಸುತ್ತದೆ.”

ಈ ಸಂದರ್ಭದಲ್ಲಿ ವ್ಯಾಸ ದೇಶಪಾಂಡೆಯವರು ಗಾಂಧೀಜಿಯನ್ನು ನೆನಪಿಸಿದರು. ಗಾಂಧೀಜಿ ಈ ಯುಗದ ಸಾತ್ವಿಕ ಶಕ್ತಿಯ ಪ್ರತೀಕರಾಗಿದ್ದಾರೆ. ದೇಶವಿಭಜನೆಯ ಸಮಯದಲ್ಲಿ ನಡೆದ ಹಿಂಸಾಚಾರವನ್ನು ಹಾಗು ಪ್ರತಿಹಿಂಸಾಚಾರವನ್ನು ನಿಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಅವರ ಕೊಲೆಯಾದ ತಕ್ಷಣವೇ ಹಿಂಸಾಚಾರವು ಸ್ತಬ್ಧವಾಯಿತು. ಅವರ ಸಾವು ತಾಮಸ ಶಕ್ತಿಗಳ ಮೇಲೆ ವಿಜಯ ಸಾಧಿಸಿತು! ಈ ಮಾತನ್ನೇ ಬೇಂದ್ರೆಯವರು ತಮ್ಮ ಕವನದಲ್ಲಿ ಹೀಗೆ ಹೇಳಿದ್ದಾರೆ:

ಹಿಂಸೆ ಕೊನೆಗು ಅಹಿಂಸೆಯನ್ನು

ಗುಂಡು ಹಾಕಿ ಕೊಂದಿತೊ,

ತನ್ನ ಕೊಲೆಯ ಕೊನೆಗಾಣಿಸೆ

ಅವಗೆ ಶರಣು ಬಂದಿತೊ,

ಅಯ್ಯೊ ಇವನೆ ಅಮರ

ನಾನೆ ಸತ್ತೆ ಎಂದಿತೊ?”

ಆ ಬಳಿಕ, ಈ ಕವನದ ಇತರ ಅಂಶಗಳ ಬಗೆಗೆ ನಮ್ಮ ನಡುವೆ ಚರ್ಚೆ ನಡೆಯಿತು. ಈ ಕವನದ ಕವಿಯು, ಕವನದ ಮೊದಲಲ್ಲಿ ‘ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟ ದೇಶದಿ’ ಎಂದು ಹಾಡಿದ್ದಾನೆ. ನಮ್ಮ ಕನ್ನಡ ನಾಡೇ ಈ ಭೂಮಂಡಲದ ಮಧ್ಯದಲ್ಲಿದೆ ಹಾಗು ಮೆರೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ಕವಿಗಿದೆ. ಯಾವ ಕಾರಣಗಳಿಗಾಗಿ ಕರ್ನಾಟದೇಶವು ಮೆರೆಯುತ್ತಿರಬಹುದು ಎಂದು ಕೇಳಿದರೆ, ಅದರ ಉತ್ತರ ಈ ಕವನದ ಕಥೆಯಲ್ಲಿದೆ: ತನ್ನ ಸದ್ಗುಣಗಳಿಗಾಗಿ ಕರ್ನಾಟದೇಶವು ಭೂಮಂಡಲದಲ್ಲಿ ಮೆರೆಯುತ್ತಿದೆ. ಇದು ಕರ್ನಾಟಕದ ಪರಂಪರೆ! ಇದು ನಮ್ಮ ಸಂಸ್ಕೃತಿ. ಗೋವಿನ ಹಾಡಿನ ಮೂಲಕ, ಕವಿಯು ಕರ್ನಾಟದೇಶದ ಸಂಸ್ಕೃತಿಯನ್ನು ಹಾಡುತ್ತಿದ್ದಾನೆ. ‘ನಮ್ಮದು ಈ ಕನ್ನಡ ನಾಡು, ಸತ್ಯ ಅಹಿಂಸೆಯ ಬೀಡು!’ ತನ್ನನ್ನು ತಬ್ಬಲಿಯನ್ನಾಗಿ ಮಾಡಬೇಡ ಎಂದು ಬೇಡಿಕೊಳ್ಳುವ ಕರುವಿಗೆ, ಪುಣ್ಯಕೋಟಿ ಹೇಳುವ ಮಾತನ್ನು ನೋಡಿರಿ:

ಕೊಟ್ಟ ಭಾಷೆಗೆ ತಪ್ಪಲಾರೆ

ಕೆಟ್ಟ ಯೋಚನೆ ಮಾಡಲಾರೆ

ನಿಷ್ಠೆಯಿಂದಲಿ ಪೋಪೆನಲ್ಲಿಗೆ

ಕಟ್ಟಕಡೆಗಿದು ಖಂಡಿತ.

Similar questions