CBSE BOARD X, asked by swayamwaghe2005, 1 month ago

ಪ್ರ-೧) ನಿಮ್ಮ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದ ಕುರಿತು ಒಂದು ವರದಿಯನ್ನು ರಚಿಸಿರಿ.​

Answers

Answered by Helpingbot
2

Answer:

ಗದಗ: ಮಾಜಿ ಪ್ರಧಾನಿ ಪಂ.ಜವಾಹರಲಾಲ್‌ ನೆಹರು ಜನ್ಮದಿನದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೋಮವಾರ ಮಕ್ಕಳ ದಿನ ಆಚರಿಸಲಾಯಿತು. ನೆಹರು ಅವರ ಸ್ಮರಣೆ ಜೊತೆಗೆ, ದೇಶದ ಭಾವಿ ಪ್ರಜೆಗಳಾದ ಮಕ್ಕಳಿಗೆ ದೇಶ ನಿರ್ಮಾಣದಲ್ಲಿ ವಹಿಸಬೇಕಾದ ಜವಾಬ್ದಾರಿ ಬಗ್ಗೆ ತಿಳಿಹೇಳಲಾಯಿತು.

ನಗರಸಭೆ ಶಿಕ್ಷ ಣ ಸಂಸ್ಥೆ: ನಗರದ ನಗರಸಭೆ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ದಿನಾಚರಣೆಯಲ್ಲಿ ಉಪನ್ಯಾಸಕ ಬಿ.ಜಿ. ಗೋಪಾಲ ಅವರು ನೆಹರು ಜೀವನ-ಸಾಧನೆ ಕುರಿತು ಮಾತನಾಡಿದರು. ಸ್ವಾತಂತ್ರ್ಯಾನಂತರ ದೇಶದ ಪ್ರಗತಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು. ಆರ್‌.ಈಶ್ವರಶೆಟ್ಟರ, ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ್ಯ ಕೆ.ಎಸ್‌. ಬಡಿಗೇರ ಮಾತನಾಡಿದರು.

ನೆಹರು ಕುರಿತು ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ವನಶ್ರೀ ಕುಲಕರ್ಣಿ, ಅಂಜು ಕಾಟೇವಾಲ್‌, ಸುಧಾ ಹುಣಿಸಿಮರದ ಹಾಗೂ ಪ್ರೌಢಶಾಲೆ ವಿಭಾಗದ ವಸಂತ ಕಾಜಗಾರ, ಹೈದರಆಲಿ ನದಾಫ್‌, ಶರಣಪ್ಪ ಹಡಪದ ಅವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಾದ ಸೀತಾರ ರಾಯಭಾಗಿ, ಶರಣಪ್ಪ ಹಡಪದ, ಶಿಕ್ಷ ಕ ಬಿ.ಬಿ. ಗಾಯಕವಾಡ ಇತರರು ಇದ್ದರು.

ಬಿವಿವಿ ಶಾಲೆ: ನಗರದ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಚಾಚಾ ನೆಹರೂರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಹಪಠ್ಯ ಚಟುವಟಿಕೆ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಆಟೋಟಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅರ್ಲಿ ಲರ್ನಿಂಗ್‌ ಸೆಂಟರ್‌ ಮುಖ್ಯಸ್ಥೆ ಆರ್‌.ವಸಂತಕುಮಾರಿ, ಪ್ರಾಚಾರ್ಯ ವಿ.ಎಂ. ಅಡ್ನೂರ ಪ್ರಶಸ್ತಿಗಳನ್ನು ವಿತರಿಸಿದರು. ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು.

ವಿದ್ಯಾರ್ಥಿನಿ ಐಶ್ವರ್ಯ, ಪ್ರಾಚಾರ್ಯ ವಿ.ಎಂ ಅಡ್ನೂರ ಮಾತನಾಡಿದರು. ಶಿಕ್ಷ ಕ ರವೀಂದ್ರಗೌಡ, ಯಾಸ್ಮಿನ ಮೊಮಿನ, ಪ್ರಮೋದಸಿಂಗ ಬ್ಯಾಳಿ ಹಾಡನ್ನು ಹಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಇದ್ದರು.

ಸೈಂಟ್‌ ಜಾನ್ಸ್‌ ಶಾಲೆ: ನಗರದ ಸೈಂಟ್‌ ಜಾನ್ಸ್‌ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅಧ್ಯಕ್ಷ ತೆ ವಹಿಸಿದ್ದ ಫಾದರ್‌ ಡಾ.ಫ್ರೆಡ್ಡಿರಾಜ್‌, ಫಾ.ಆ್ಯಂಡ್ರು ಆಳ್ವಾ, ಮುಖ್ಯಾಧ್ಯಾಪಕಿ ಮೇರಿ ಮಸ್ಕರೇನ್ಹಸ್‌ ಮಾತನಾಡಿದರು. ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಆಟೋಟಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ಅನಿತಾ, ಅನ್ನಾ ಅಲ್ಬುಕರ್ಕ ಹಾಗೂ ಸಂಗಡಿಗರು ಮಕ್ಕರಳನ್ನು ರಂಜಿಸಿದರು. ಶಿಕ್ಷಕ ಮಹೇಶ ಶಟವಾಜಿ ನಗೆ ಚಟಾಕಿ ಕಾರ್ಯಕ್ರಮ ನಡೆಸಿಕೊಟ್ಟರು. ಮರಿಯಮ್ಮ ಸಂತಾಕ್ರೂಜ್‌, ಶ್ರೀಮತಿ ಎ.ಎಫ್‌. ಸಂಗಣ್ಣವರ, ಬಿ.ಕೆ. ಆಸ್ಕಿ, ನದಾಫ, ಎಲ್‌.ಪಿ. ಕಟ್ನಳ್ಳಿ, ರೂಪಾ ಮಾರನಬಸರಿ ಇದ್ದರು.

ಮಹಾರಾಣಾ ಪ್ರತಾಪಸಿಂಹ ಶಿಕ್ಷ ಣ ಸಂಸ್ಥೆ: ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷ ಣ ಸಂಸ್ಥೆಯಲ್ಲಿ ಮಕ್ಕಳ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳೇ ಅತಿಥಿ, ಅಧ್ಯಕ್ಷ ಸ್ಥಾನ ವಹಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿ ಆಕಾಶ ತಟ್ಟಿ ನೆಹರೂಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ವಿದ್ಯಾರ್ಥಿ ಮಾರುತಿ ಸಿಂಗಟಾಲೂರ, ನೆಹರೂರವರು ಮಕ್ಕಳ ಮೇಲೆ ಹೊಂದಿದ್ದ ಪ್ರೀತಿ ಬಗ್ಗೆ ಮಾತನಾಡಿದರು.

ಪ್ರತಿಭಾ ಕಾರಂಜಿಯ ತಾಲೂಕು ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ಇದೇ ಸಂದರ್ಭ ಸತ್ಕರಿಸಲಾಯಿತು. ಸಂಸ್ಥೆ ಸಂಸ್ಥಾಪಕ ಗಣೇಶಸಿಂಗ್‌ ಬ್ಯಾಳಿ, ಪ್ರಾಂಶುಪಾಲೆ ವೈ.ಆರ್‌. ಹಿರೇಗೌಡರ, ವಿ.ಜಿ. ಕಾಂಬಳೇಕರ, ಸಿ.ಎಂ. ಮಾರನಬಸರಿ ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

ಬಳಗಾನೂರ ಐಟಿಐ: ತಾಲೂಕಿನ ಬಳಗಾನೂರದ ಚಿಕ್ಕೇನಕೊಪ್ಪ ಚನ್ನವೀರ ಶರಣರ ಗ್ರಾಮೀಣ ಖಾಸಗಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಸೋಮವಾರ ಮಕ್ಕಳ ದಿನ ಆಚರಿಸಲಾಯಿತು. ಮಾಜಿ ಪ್ರಧಾನಿ ಪಂ.ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಐಟಿಐ ಪ್ರಾಚಾರ್ಯ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

__________________________________________________

The BRAINLIEST...

Answered by rashmivijay5678
1

Explanation:

ಇಂದ

ಕರುಣಾಕರ

10ನೇ ತರಗತಿ

ಸರ್ಕಾರಿ ಪ್ರೌಢಶಾಲೆ ರಾಮೋಹಳ್ಳಿ

ಗೆ

ಉದಯವಾಣಿ ದಿನಪತ್ರಿಕೆ

ಸಂಪಾದಕರು ರಾಮೋಹಳ್ಳಿ

ವಿಷಯ:- ಮಕ್ಕಳ ದಿನಾಚರಣೆ ವರದಿಯನ್ನು ಪ್ರಕಟಿಸುವಂತೆ ಉದಯವಾಣಿ ದಿನಪತ್ರಿಕೆ ಸಂಪಾದಕರಿಗೆ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಶಾಲೆಯಲ್ಲಿ ನಡೆದಿರುವ ಮಕ್ಕಳ ದಿನಾಚರಣೆಯ ಬಗ್ಗೆ ಉದಯವಾಣಿ ದಿನಪತ್ರಿಕೆ ಹೇಳುವುದೇನೆಂದರೆ ನಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರು ಶಿಕ್ಷಕ ಶಿಕ್ಷಕಿಯರು ಭಾಷಣ ಮಾಡಿರುತ್ತಾರೆ ನೀವು ಇಂದಿನ ದಿನಪತ್ರಿಕೆಯಲ್ಲಿ ತಿಳಿಯಪಡಿಸಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಧನ್ಯವಾದಗಳು

ಸ್ಥಳ: ರಾಮೋಹಳ್ಳಿ

ದಿನಾಂಕ :15-09-2022 ಇಂತಿ ತಮ್ಮ ವಿಶ್ವಾಸಿ

ಕರುಣಾಕರ

ವರುಣ್ ದೊಡ್ಡಮನಿ

Similar questions