India Languages, asked by raviravivalli, 1 month ago

ಪತ್ರ ವ್ಯವಹಾರ ಪ್ರಬಂಧ :


* ನಮ್ಮ ರಾಷ್ಟ್ರಧ್ವಜ *​

Answers

Answered by Anonymous
4

Answer:

ಪ್ರತಿ ಭಾರತೀಯನ ಹೆಮ್ಮೆಯ ಸಂಕೇತ ನಮ್ಮ ರಾಷ್ಟ್ರಧ್ವಜ. ಇದು ಕೇವಲ ನಾಲ್ಕು ಬಣ್ಣಗಳ ಈ ಧ್ವಜ ಕೇವಲ ಸ್ವತಂತ್ರ ಮತ್ತು ಗಣರಾಜ್ಯೋತ್ಸವದಂದು ಮಾತ್ರ ಹೊರತೆಗೆಯುವ ಬಟ್ಟೆಯಲ್ಲ, ಬದಲಿಗೆ ರಾಷ್ಟ್ರದ ಗೌರವವನ್ನು ಕಾಪಾಡುವ ಹಾಗೂ ಗ್ರಾಮದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಪ್ರತಿ ಭಾರತೀಯನ ರಾಷ್ಟ್ರೀಯತೆಯನ್ನು ಬಿಂಬಿಸುವ ಲಾಂಛನವೂ ಆಗಿದೆ.

ದೇಶದ ಪ್ರಮುಖ ಸ್ಥಳಗಳಲ್ಲಿ ಬಳನೀಲಿಯ ಅಶೋಕ ಚಕ್ರವಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುತ್ತದೆ.

ಈ ರಾಷ್ಟ್ರ ಧ್ವಜ. ತಯಾರಾಗುವುದು ನಮ್ಮ

ಕರ್ನಾಟಕದಲ್ಲಿಯೇ ಎಂಬುದು ನಮಗೊಂದು ಹೆಮ್ಮೆಯ ವಿಷಯ. ಇದನ್ನು ಸುಖಾಸುಮ್ಮನೇ ನಮಗೆ ಮನಸ್ಸಿಗೆ ಬಂದಂತೆ ಹೊಲಿದು ಬಳಸುವಂತಿಲ್ಲ. ಬದಲಿಗೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

22 ನೇ ಜುಲೈ 1947 ರಂದು ಈ ಧ್ವಜ ಕೆಲವರು ಮಾರ್ಪಾಡುಗಳ ಬಳಿಕ ಭಾರತದ ಸಂವಿಧಾನದ ಪ್ರಮುಖ ಸಭೆಯೊಂದರಲ್ಲಿ 22 ನೇ ಜುಲೈ 1947 ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಅಂದರೆ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುನ್ನ ತಿರಂಗವೇ ನಮ್ಮ ರಾಷ್ಟ್ರಧ್ವಜವಾಗಲಿದೆ ಎಂದು ನಮ್ಮ ನಾಯಕರು ವಿಶ್ವಕ್ಕೆ ಸ್ಪಷ್ಟಪಡಿಸಿದ್ದರು

ಈ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ.ಫೋಟೋ ದಲ್ಲಿರುವ ಈ ಧ್ವಜವನ್ನು ಪಿಂಗಾಳಿ ವೆಂಕಯ್ಯ ಎಂಬುವವರು ರಚಿಸಿದ್ದಾರೆ. ಇವರು ಓರ್ವ ಕೃಷಿಕರಾಗಿದ್ದು ಸ್ವತಂತ್ರ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ

ಈ ಧ್ವಜವನ್ನು ನಮಗೆ ಮನಬಂದ ಬಟ್ಟೆಯಲ್ಲಿ ತಯಾರಿಸುವಂತಿಲ್ಲ. ಬದಲಿಗೆ, ಕಾನೂನು ಸ್ಪಷ್ಟಪಡಿಸಿದಂತೆ ಇದನ್ನು ಖಾದಿ ಬಟ್ಟೆಯಿಂದಲೇ ತಯಾರಿಸಲಾಗುತ್ತದೆ.

ಇದರ ಬಟ್ಟೆಯನ್ನು ಚರಕ ಬಳಸಿ ತಯಾರಿಸಿದ ಹತ್ತಿಯ ನೂಲುಗಳನ್ನು ನೇದಿದ ಬಟ್ಟೆಯನ್ನೇ ಬಳಸಬೇಕಾಗುತ್ತದೆ. ಈ ನೂಲುಗಳನ್ನು ಮಹಾತ್ಮಾಗಾಂಧಿಯವರು ಚರಕದಿಂದ ತಯಾರಿಸುತ್ತಿದ್ದ ರೀತಿಯಲ್ಲಿಯೇ ತಯಾರಿಸಲಾಗುತ್ತದೆ

ಈ ಧ್ವಜವನ್ನು ತಯಾರಿಸಲು ಭಾರತ ಸರ್ಕಾರದಿಂದ ಕೇವಲ ಒಂದು ಸಂಸ್ಥೆಗೆ ಮಾತ್ರವೇ ಅಧಿಕಾರ ನೀಡಲಾಗಿದೆ. ಖಾದಿ ಅಭಿವೃದ್ದಿ ಮತ್ತು ಗ್ರಾಮೋದ್ಯೋಗ ಆಯೋಗ ಸಂಸ್ಥೆ ಈ ಅಧಿಕೃತ ಸಂಸ್ಥೆಯಾಗಿದ್ದು ಸ್ಥಳೀಯವಾಗಿ ಧ್ವಜ ತಯಾರಿಸುವ ಅನುಮತಿಯನ್ನು ಇತರ ಸಂಸ್ಥೆಗಳಿಗೆ ನೀಡುವ ಅಧಿಕಾರವನ್ನು ಹೊಂದಿದೆ.

ರಾಷ್ಟ್ರಧ್ವಜ ಹಾರಿಸುವವರು ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳು

★ರಾಷ್ಟ್ರಧ್ವಜವನ್ನು ಹಗಲಿನಲ್ಲಿ, ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರವೇ ಹಾರಿಸಲು ಅನುಮತಿ ಇದೆ. ಆದ್ದರಿಂದ ಧ್ವಜ ಹಾರಿಸುವ ಜವಾಬ್ದಾರಿ ಹೊಂದಿರುವ ವ್ಯಕ್ತಿಗಳು ತಪ್ಪದೇ ಸೂರ್ಯಾಸ್ತಕ್ಕೂ ಮುನ್ನ ಧ್ವಜವನ್ನು ಇಳಿಸುವುದು

ಕಡ್ಡಾಯವಾಗಿದೆ.

★ಒಂದು ವೇಳೆ ಮರೆತು ರಾತ್ರಿಯೂ ಧ್ವಜ ಹಾರುತ್ತಿದ್ದರೆ ಇದು ಕಾನೂನಿನ ಉಲ್ಲಂಘನೆಯಾಗಿದ್ದು ಜವಾಬ್ದಾರಿ ಹೊಂದಿದ ವ್ಯಕ್ತಿಗಳನ್ನು ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಲೂ ಬಹುದಾಗಿದೆ.

★ಅಪ್ಪಿತಪ್ಪಿಯೂ ಹಸಿರು ಬಣ್ಣ ಮೇಲೆ ಬರದಂತೆ ಎಚ್ಚರ ವಹಿಸಬೇಕು.

★ಬೆಂಕಿ, ಮಳೆ, ಬಿರುಗಾಳಿ ಮೊದಲಾದ ಸಂದರ್ಭದಲ್ಲಿ ಧ್ವಜ ಹಾಳಾಗುವ ಸಂದರ್ಭವಿದ್ದರೆ ತಕ್ಷಣ ಇಳಿಸಬೇಕು ಹಾಗೂ ಧ್ವಜ ಹಾಳಾಗುವುದನ್ನು ತಪ್ಪಿಸಬೇಕು.

hope it helps ✔︎ ✔️.

Attachments:
Answered by Anonymous
1

Explanation:

ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.

ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ.

ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಜವಾಹರ‌ಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಸರಕಾರವು ದ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ.

ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಕೇಸರಿ - ಬಿಳಿ - ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ ೩:೨ ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.

ರಾಷ್ಟ್ರಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.

ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.

Similar questions