World Languages, asked by sushmasushmitha612, 1 month ago

ಕಣ್ದೆರೆ ಈ ಪದವು ಯಾವ ಸಮಾಸಕ್ಕೆ ಉದಾಹರಣೆ​

Answers

Answered by bhuvaneshwariks81
2

Explanation:

ಕ್ರಿಯಾಸಮಾಸ:- "ಪೂರ್ವಪದವು ಪ್ರಾಯಶಃ ದ್ವಿತೀಯಾಂತವಾಗಿದ್ದು ಉತ್ತರದಲ್ಲಿರುವ ಕ್ರಿಯೆಯೊಡನೆ ಸೇರಿ ಆಗುವಸಮಾಸವನ್ನು ಕ್ರಿಯಾಸಮಾಸವೆನ್ನುವರು."

ಪ್ರಾಯಶಃ ಎಂದು ಸೂತ್ರದಲ್ಲಿ ಹೇಳಿರುವುದರಿಂದ ಬೇರೆ ವಿಭಕ್ತಿಗಳು ಬರುತ್ತವೆಂದು ತಿಳಿಯಬೇಕು. ಈ ಸಮಾಸದಲ್ಲಿ ಅರಿಸಮಾಸದೋಷವಿಲ್ಲ.

(i) ಕನ್ನಡ - ಕನ್ನಡ ಶಬ್ದಗಳು ಸೇರಿ ಆಗುವ ಸಮಾಸಕ್ಕೆ ಉದಾಹರಣೆ-

ಮೈಯನ್ನು + ತಡವಿ = ಮೈದಡವಿ (ತಕಾರಕ್ಕೆ ದಕಾರಾದೇಶ)

ಕೈಯನ್ನು + ಮುಟ್ಟಿ = ಕೈಮುಟ್ಟಿ

ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ

ತಲೆಯನ್ನು + ಕೊಡವಿ = ತಲೆಗೊಡವಿ (ಕಕಾರಕ್ಕೆ ಗಕಾರಾದೇಶ) (ತಲೆಕೊಡವಿ)

ಮೈಯನ್ನು + ಮುಚ್ಚಿ = ಮೈಮುಚ್ಚಿ

ತಲೆಯನ್ನು + ತೆಗೆದನು = ತಲೆದೆಗೆದನು (ತಕಾರಕ್ಕೆ ದಕಾರಾದೇಶ)

ಕಣ್ಣನ್ನು + ತೆರೆದನು = ಕಣ್ಣು ತೆರೆದನು

ಕಣ್ಣಂ + ತೆರೆ = ಕಣ್ದೆರೆ (ಹ.ಗ. ರೂಪ) (ತಕಾರಕ್ಕೆ ದಕಾರಾದೇಶ)

ಕೈಯನ್ನು + ಪಿಡಿದು = ಕೈವಿಡಿದು (ಪಕಾರಕ್ಕೆ ವಕಾರಾದೇಶ)

ಮಣೆಯನ್ನು + ಇತ್ತು = ಮಣೆಯಿತ್ತು

ಬಟ್ಟೆಯನ್ನು + ತೋರು = ಬಟ್ಟೆದೋರು (ತಕಾರಕ್ಕೆ ದಕಾರಾದೇಶ)

ಕೈಯನ್ನು + ಕೊಟ್ಟನು = ಕೈಕೊಟ್ಟನು

ದಾರಿಯನ್ನು + ಕಾಣನು = ದಾರಿಗಾಣನು (ಕಕಾರಕ್ಕೆ ಗಕಾರಾದೇಶ)

(ii) ಪೂರ್ವಪದವು ಬೇರೆ ವಿಭಕ್ತ್ಯಂತ ತರುವುದಕ್ಕೆ-

ನೀರಿನಿಂದ + ಕೂಡಿ = ನೀರ್ಗೂಡಿ (ಕಕಾರಕ್ಕೆ ಗಕಾರ)

ಬೇರಿನಿಂದ + ಬೆರಸಿ = ಬೇರುವೆರಸಿ (ಬಕಾರಕ್ಕೆ ವಕಾರ)

ಕಣ್ಣಿನಿಂದ + ಕೆಡು = ಕೆಂಗೆಡು (ಕಕಾರಕ್ಕೆ ಗಕಾರ)

ಬೇರಿನಿಂ + ಬೆರಸಿ = ಬೇರ‍್ವೆರಸಿ (ಬಕಾರಕ್ಕೆ ವಕಾರ)

ನೀರಿನಲ್ಲಿ + ಮಿಂದು = ನೀರುಮಿಂದು

(iii) ಹಳಗನ್ನಡ ಕ್ರಿಯಾಸಮಾಸ ರೂಪಗಳು-

ಮೈಯಂ + ತೊಳೆದು = ಮೈದೊಳೆದು

ಒಳ್ಳುಣಿಸಂ + ಇಕ್ಕಿ = ಒಳ್ಳುಣಿಸಿಕ್ಕಿ

ಮುದ್ದಂ + ಗೈದು = ಮುದ್ದುಗೈದು

ವಿಳಾಸಮಂ + ಮೆರೆದು = ವಿಳಾಸಂಮೆರೆದು

ಬೇರಿನಂ + ಬೆರೆಸಿ = ಬೇರ‍್ವೆರಸಿ

ಕೈಯಂ + ತೊಳೆದು = ಕೈದೊಳೆದು

(iv) ಸಂಸ್ಕೃತ ನಾಮಪದದೊಡನೆ ಕನ್ನಡದ ಕ್ರಿಯೆಯು ಸೇರಿ ಆಗುವ ಕ್ರಿಯಾಸಮಾಸದ ಉದಾಹರಣೆಗಳು-

ಕಾರ‍್ಯವನ್ನು + ಮಾಡಿದನು = ಕಾರ‍್ಯಮಾಡಿದನು

ಸತ್ಯವನ್ನು + ನುಡಿದನು = ಸತ್ಯನುಡಿದನು

ಮಾನ್ಯವನ್ನು + ಮಾಡಿದನು = ಮಾನ್ಯಮಾಡಿದನು

ಕಾವ್ಯವನ್ನು + ಬರೆದನು = ಕಾವ್ಯಬರೆದನು

Similar questions