India Languages, asked by chaitraboregowda123, 2 months ago

ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಪ್ರಬಂಧವನ್ನು ಮೂರು ಭಾಗವನ್ನಾಗಿ ಮಾಡಿ ಕಳುಹಿಸಿ​

Answers

Answered by llDivinell
2

ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಪ್ರಬಂಧವನ್ನು ಮೂರು ಭಾಗವನ್ನಾಗಿ ಮಾಡಿ ಕಳುಹಿಸಿ

Answered by Anonymous
3

Answer:

ಭಾರತವು ಅನೇಕ ಜನಾಂಗಗಳು, ಪಂಗಡಗಳು ಇರುವಂತಹ ಒಂದು ವಿಶಾಲ. ಇಲ್ಲಿ,ವಿವಿಧ ಭಾ, ಸಂಸ್ಕೃತಿ ,ಧರ್ಮ , ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಮನೋಭಾವನೆಯನ್ನು ಹೋದಿರುವುದೇ ‘ರಾಷ್ಟ್ರೀಯ ಭಾವೈಕ್ಯತೆ‛. ಭಾರತವು ಪ್ರಜಾಪ್ರಭುತ್ವ ತಳಹದಿಯ ಮೇಲೆ ರೂಪಿತವಾಗಿರುವ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಪ್ರತಿಯೊಂದು ಧರ್ಮೀಯರು ತಮ್ಮ ಸಂಪ್ರದಾಯ,ಪದ್ಧತಿಗಳನ್ನು ಅಚರಿಸಲು ಅವಕಾಶವಿದೆ.

ವಿಷಯ ನಿರೂಪಣೆ:

ಭಾರತವು ವಿವಿಧ ಧರ್ಮ, ಭಾಷೆ , ಬುಡಕಟ್ಟು, ಜನಾಂಗಗಳನ್ನು ಹೊದಿಂದ್ದು,ದೇಶದ ಯಾವುದೇ ಮೂಲೆಗೆ ಹೋದರು ಅಲ್ಲಿ ವೈವಿದ್ಯತೆಯನ್ನು ಕಾಣುತ್ತೇವೆ. ಏಕೆಂದರೆ ಭಾರತೀಯ ನಾಗರಿಕತೆಯು ಯಾವಾಗಲೂ ಧಾರ್ಮಿಕ ಹಾಗೂ ನೈತಿಕ ತಳಹದಿಯ ಮೇಲೆ ಚಲಿಸುತ್ತಿದೆ. ದೇಶದ ಎಲ್ಲ ಭಾಗಗಳಲ್ಲಿಯೂ,ಸಾಂಸ್ಕತಿಕ ಮತ್ತು ಜೀವನ ಮಾರ್ಗದ ಒಗ್ಗಟ್ಟು ಹಾಗೂ ದೃಷ್ಟಿಕೋನವು ಧರ್ಮ,ನಂಬಿಕೆ ಮತ್ತು ಆಚರಣೆಗಳಲ್ಲಿ ವಿಶಾಲ ವೈವಿಧ್ಯತೆಯನ್ನು ಹೊಂದಿದೆ.ಆದರೂ ನಮ್ಮಲ್ಲಿ ನಾವು ಭಾರತೀಯರು ಎಂಬ ಬಲವಾದ ಬೇರಿದೆ. ನಮ್ಮ ದೇಶದ ರಾಷ್ಟ್ರಗೀತೆ, ರಾಷ್ಟ್ರಗೀತೆ, ರಾಷ್ಟ್ರಭಾಷೆ , ರಾಷ್ಟ್ರಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿವೆ. ಅಲ್ಲದೇ ‘ವಂದೇಮಾತರಂ, ಸಾರೇ ಜಹಾಸೇ ಅಚ್ಚಾ, ಜನಗಣಮನ ಅಧಿನಾಯಕ’ ದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ, ದೇಶಾಭಿಮಾನವನ್ನು ಹುಟ್ಟಿಸುತ್ತವೆ. ಇಡೀ ದೇಶವೇ ವೈವಿಧ್ಯಮಯವದ ಸಂಸ್ಕೃತಿ ಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು.

ಉಪಸಂಹಾರ :

ಇತ್ತೀಚೆಗೆ ಭಾರತೀಯ ಸಂಸ್ಕೃತಿ ಯು ಪ್ರಗತಿ ಹಾಗೂ ಬದಲವಣೆಯ ಹಂತದಲ್ಲಿದೆ . ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯ ಗಾಳಿಯು ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಆದರೆ ಭಾರತೀಯರಾದ ನಾವು ಮಾತ್ರ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪ್ರೀತಿ ಹಾಗೂ ಸೌಹಾರ್ಧತೆಯಿಂದ ನಡೆದುಕೊಳ್ಳುತ್ತಾ, ನಮ್ಮ ದೇಶದ ಏಕತೆಯನ್ನು ಎತ್ತಿ ಹಿಡಿದಿದ್ದೇವೆ.

Similar questions