ಸಂಕಲ್ಪ ಗೀತ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. (೭೫ ಪದಗಳನ್ನು
ಮೀರದಂತೆ)
Answers
Answer:
ಕವಿ ಜಿ.ಎಸ್,ಎಸ್ ರವರು ಈ ಪದ್ಯವನ್ನು ಎರಡು ಅರ್ಥದಲ್ಲಿ ಹೆಳುತ್ತಾರೆ. ಒಂದು ಭೌತಿಕ ಅರ್ಥ ಇನ್ನೊಂದು ಬದುಕಿನ ಅರ್ಥ
ಇಂದು ಜಗತ್ತೆಲ್ಲಾ ಅಜ್ಞಾನವೆಂಬ ಕತ್ತಲೆಯಿಂದ ತುಂಬಿದೆ
ಪ್ರೀತಿ ಮಮಕಾರಗಳು ಮಾನವನಿಂದ ದೂರವಾಗಿ ಸ್ವಾರ್ಥ ತುಂಬಿಕೊಂಡಿದೆ
ಈ ಅಜ್ಞಾ ಕತ್ತಲನ್ನು ಓಡಿಸಲು .
ನಾವೀಗ ಪ್ರೀತಿ ಮಮಕಾರಗಳ ದೀಪವನ್ನು ಹಚ್ಚಬೇಕಿದೆ .
ಬದುಕೆನ್ನುವದು ಹಲವಾರು ಸಂಕಷ್ಟಗಳಿಗೆ ಸಿಲುಕಿ ಹೊಯ್ದಾಡುವ ಹಡಗಿನಂತಾಗಿದೆ. ಈ ಹೊಯ್ದಾಡುವ ಬದುಕೆಂಬ ಹಡಗು ಯಾವ ಸಂದರ್ಭದಲ್ಲಿ ಮುಳುಗುತ್ತಿದೇಯೋ ಎಂಬ ಭಯ ಜನರನ್ನು ಕಾಡುತ್ತಿದೆ. ಅದಕ್ಕಾಗಿ ಈ ಬದುಕೆಂಬ ಹಡಗನ್ನು ಬಹಳ ಎಚ್ಚರದಿಂದ ಮುನ್ನಡೆಸಬೇಕಿದೆ.
ಬದುಕಿಗೆ ಜೀವನಾಧಾರವಾದ ಜಲರಾಶಿ ಹಲವಾರು ಕಾರಣಗಳಿಂದ ಕಲುಷಿತಗೊಂಡು ಜನರ ಬದುಕಿಗೆ ವಿಷದ ದ್ರವವಾಗಿ ಪರಿಣಮಿಸಿದೆ. ಈ ವಿಷವನ್ನು ದೂರಮಾಡಲು ಇದರಿಂದಾಗಿ ಬದುಕು ಬರುಡು ಭೂಮಿಯಾಗಿದೆ ಇದನ್ನು ದೂರಮಾಡಲು ನಾವು ಸದ್ಗುಣ ಸದ್ಭಾವ ಹೊಂದಿ ವಸಂತಕಾಲವಾಗೋಣ
ಬದುಕಿನಲ್ಲಿ ನಿರಾಶೆಗೊಂಡು ಜೀವನವನ್ನೆ ತಜಿಸುವ ಹಂತದಲ್ಲಿರುವವರನ್ನು ಎಬ್ಬಿಸಿ ಬೆನ್ನು ತಟ್ಟಿ ಹೊಸಭರವಸೆಯನ್ನು ನಿಡಿ ಅವರ ಬದುಕಿನಲ್ಲಿ ಆಶಾವಾದಿಗಳನ್ನಾಗಿ ಮಾಡೊಣ ಮನುಜ
ಮನುಜ ರ ನಡುವಿರುವ ಮತ ಪಂಥ , ಬಡವ ಶ್ರೀಮಂತ,ಮಾಲಿಕ - ಕಾರ್ಮಿಕ , ಅಧಿಕಾರಿ - ಸೇವಕ ಇಂಥಹ ಅಡ್ಡಗೊಡೆಗಳನ್ನು ಒಡೆದು ಮನುಜ ಮನುಜರ ನಡುವೆ ಬಾಂಧವ್ಯದ ಸೇತುವೆ ಕಟ್ಟೋಣ
ಮತಗಳೆಲ್ಲವೂ ಏಳಿಗೆಗೆ ಪಥ ಎನ್ನುವ ಅರ್ಥೃವನ್ನು ತಿಳದುಕೊಂಡು ಎಚ್ಚರದಿಂದ ಬದುಕೊಣ . ಹಲವಾರು ಜನ ಭಯದ ನೇರಳಿನಲ್ಲಿ ಸಂಶಯದ ಕಂದಕದಲ್ಲಿ ಬದುಕನ್ನು ಸಾಗಿಸುತ್ತಿದ್ದಾರೆ. ಅಂಥವರ ಕಣ್ಣಲ್ಲಿ ಹೊಸಕನಸುಗಳನ್ನು ಬಿತ್ತೋಣ ಎಂದು ಕವಿ ಮಾರ್ಮಿಕವಾಗಿ ಹೇಳಿದ್ದಾರೆ. ಇದನ್ನು ಅರ್ಥಹಿಸಿಕೊಂಡು ಬದುಕು ಸಾಗಿಸುವದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ.
Answer:
ಸಂಕಲ್ಪ ಗೀತೆ ಪದ್ಯದ ಸಾರಾಂಶ:
ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ ದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂಬುದನ್ನು ಭಾವಗೀತೆಯ ಮೂಲಕ ವ್ಯಕ್ತಗೊಳಿಸುವುದೇ ಈ ಕವನದ ಆಶಯವಾಗಿದೆ
ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು - ಎಂಬುದು ಕವಿಯ ಆಶಯವಾಗಿದೆ.
ಮಾನವನ ದುರಾಸೆಗೆ ಸಿಲುಕಿ ಕಲುಷಿತವಾಗಿರುವ ನದೀಜಲಗಳನ್ನು ಶುದ್ಧೀಕರಿಸಲು ನಾವು ಮುಂಗಾರಿನ ಮಳೆಯಾಗಬೇಕು. ಅಂದರೆ ಪರಿಸರ ರಕ್ಷಿಸುವ ಪರಿಸರ ಪ್ರೇಮಿಯಾಗಬೇಕು. ಕಾಡುಮೇಡುಗಳು ಬರಡಾಗಿದ್ದು ಅವುಗಳನ್ನು ಉಳಿಸಿ ಬಳೆಸಬೇಕು. ಅದಕ್ಕಾಗಿ ನಾವು ಹಚ್ಚಹಸಿರಿನಿಂದ ಕಂಗೊಳಿಸುವ, ಸಮೃದ್ಧವಾದ ವಸಂತಕಾಲವಾಗಬೇಕು. ಒಟ್ಟಾರೆ ನಾವೆಲ್ಲಾ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕು. ಎಂಬುದು ಕವಿಯ ಆಶಯವಾಗಿದೆ.
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತಬೇಕು. ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಷ್ಯರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗಬೇಕು. ಒಟ್ಟಾರೆ ಸಮಾಜವನ್ನು ಉದ್ಧರಿಸುತ್ತಾ ಭಾವೈಕ್ಯತೆಯನ್ನು ಬೆಳೆಸಬೇಕೆಂಬುದು ಕವಿಯ ಆಶಯವಾಗಿದೆ
ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮಸುಕಾದವರ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಭರವಸೆಯನ್ನು ತುಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು. ಎಂದು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸುತ್ತಾರೆ.