ಇಂದು ದ್ವಿರುಕ್ತಿ ಶಬ್ದಗಳ ಭಂಡಾರ ಬೆಳೆಸೋಣ.ಉತ್ತರದಲ್ಲಿ ನಾಲ್ಕು ಅಕ್ಷರಗಳು ಇರಬೇಕು.
ಉದಾ: ಪರಿಮಳ = ಗಮಗಮ ( ಪಿರಿಪಿರಿ,ಕಿರಿಕಿರಿ ಇತ್ಯಾದಿ )
೧:ನಡುಗುವುದು
೨:ಮಧ್ಯಾಹ್ನದ ಬಿಸಿಲು
೩:ಹರಿಯುವ ನೀರು
೪:ಕುದಿಯುವುದು
೫:ಬೇಗನೆ ಉತ್ತರಿಸು
೬:ಮಿಂಚುವ ನಕ್ಷತ್ರ
೭:ಮೆಟ್ಟಿಲು ಇಳಿಯುವುದು
೮:ಹರಿದ ಹಾವು
೯:ತೊಳೆದ ಪಾತ್ರೆ
೧೦:ಸುರಿಯುವ ಕಣ್ಣೀರು
೧೧:ಉರಿಯುವ ಬೆಂಕಿ
೧೨:ಮರೆಯಲ್ಲಿ ನಗುವುದು
೧೩:ಮಲ್ಲಿಗೆಯ ಸುಗಂಧ
೧೪:ಸಣ್ಣ ಮಳೆಯ ಹನಿ
೧೫:ಹೆದರಿದ ಎದೆ ಬಡಿತ
೧೬:ಹೊಳೆಯುವ ವಜ್ರ
೧೭:ದೀನವಾಗಿ ಬೇಡುವುದು
೧೮:ಜೋರಾಗಿ ಪಾತ್ರೆ ತಿಕ್ಕು
೧೯:ಖಾಲಿ ಖಾಲಿ ಅನಿಸಿಕೆ
೨೦:ತ್ವರಿತವಾದ ಕೆಲಸ
೨೧:ಗರಗಸದ ಸದ್ದು
೨೨:ಹೊಳೆಯುವ ಸೂರ್ಯ
೨೩:ಹೊಳೆಯುವ ಚಿನ್ನ
೨೪:ನಾಣ್ಯಗಳ ಸದ್ದು
೨೫:ಬಿಸಿಲಿನ ತಾಪ
೨೬:ಅಳುವುದು
೨೭:ಬೆಳಗುವ ಹಣತೆ
೨೮:ಚಕ್ಕುಲಿ ತಿನ್ನುವಸದ್ದು
೨೯:ಮಗುವಿಗೆ ಮುತ್ತಿಡು
೩೦:ಗೆಜ್ಜೆನಾದ
೩೧:ನಗುವುದು
೩೨:ತಿರುಗುವ ತಿಗರಿ
೩೩:ಒದ್ದಾಡುವುದು
೩೪:ಗಂಟೆಯನಾದ
೩೫:ಹಲ್ಲುಕಡಿಯುವುದು
ದ್ವಿರುಕ್ತಿ ಪದಗಳನ್ನು ಬರೆಯಿರಿ.
don't touch my question if u dont know the language and the answer of my question need immidiate answer correct one no spamming report will be sent immidiately
Answers
Answered by
30
Answer:
ಉತ್ತರ ಗಳು:
1.ಗಡಗಡ
2.ಧಗಧಗ
3.ಜುಳು ಜುಳು
4.ಕೊತ ಕೊತ
5.ಪಟಪಟ
6.ಮಿರ ಮಿರ
7.ಧಡಧಢ
8.ಸರಸರ
9.ಫಳಫಳ
10.ಗಳಗಳ
11.ಧಗಧಗ
12.ಪಿಸುಪಿಸು
13.ಘಮಘಮ
14.ತಟತಟ
15.ಡವಡವ
16.ಫಳಫಳ
17.
18.ಗಸಗಸ
19.ಭಣಭಣ
20.ಚಕಚಕ
21.ಗರಗರ
22.ಫಳಫಳ
23.ಫಳಫಳ
24.ಝಣಝಣ
25..ಧಗಧಗ
26.ಮುಸಿಮುಸಿ
27.
28.ಕುರುಕುರು
29.ಲೊಚಲೊಚ
30.ಘಲ್ ಘಲ್
31.ಗಹಗಹಿಸಿ
32.ಗಿರಗಿರ
34.ಡಣ್ ಡಣ್
35.ಕಟಕಟ
ಧನ್ಯವಾದಗಳು.
Similar questions