History, asked by Abhishekak9127, 4 months ago

ಕೂಡಿ ಬಾಳಿದರೆ ಸ್ವರ್ಗ ಸುಖ ಈ ಗಾದೆ ಮಾತಿನ ಅರ್ಥ

Answers

Answered by anuhanumantha
3

Answer:

ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ಹಿರಿಯರು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ. ಸುಖಿ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯವಾದ ಬಾಂಧವ್ಯವನ್ನು ಹೊಂದಿರುತ್ತವೆ. ಜೊತೆಗೆ ಇದು ತಲೆಮಾರುಗಳ ಕಾಲ ತಪ್ಪದೆ ಮುಂದೆ ಸಾಗುತ್ತವೆ. ಕುಟುಂಬದ ಹಿರಿಯರು ಅಂದರೆ ನಮ್ಮ ಪೋಷಕರು ತಮ್ಮ ಕುಟುಂಬದ ಬಾಂಧವ್ಯವನ್ನು ಕಾಪಾಡುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ.

ಇಡೀ ಕುಟುಂಬವು ಒಟ್ಟಿಗೆ ಕುಳಿತು ಹಬ್ಬ ಹರಿದಿನಗಳನ್ನು ಆಚರಿಸುವುದು ಈ ಕುಟುಂಬಗಳ ವಿಶೇಷ. ತಜ್ಞರು ಸಹ ಕುಟುಂಬಗಳು ಅನ್ಯೋನ್ಯವಾಗಿ ಒಟ್ಟಿಗೆ ಬದುಕವೇಕು ಇದರಿಂದ ಕೌಟುಂಬಿಕ ಬಾಂಧವ್ಯವು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ. ಸರಳವಾಗಿ ಹೇಳಬೇಕೆಂದರೆ, ಕೌಟುಂಬಿಕ ಬಾಂಧ್ಯವ್ಯವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಸುಧಾರಿಸುವುದು ಕಷ್ಟವಲ್ಲ.

Answered by BrainlyTwinklingstar
54

ಉತ್ತರ

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು.ಇವು ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೊಂದಿರುತ್ತವೆ.

ಇದೊಂದು ಪ್ರಸಿದ್ಧ ಗಾದೆಯಾಗಿದೆ. ಹಿರಿಯರು, ಕಿರಿಯರಿಗೆ ಹೇಳಿರುವ ಕಿವಿ ಮಾತು ಸಹ ಆಗಿದೆ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿದ್ದು ಮನೆ ತುಂಬ ಜನ ಇರುತ್ತಿದ್ದರು. ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ಅವರ ಮಕ್ಕಳು, ಚಿಕ್ಕಮ್ಮ-ಚಿಕ್ಕಪ್ಪ ಅವರ ಮಕ್ಕಳು, ಅಣ್ಣ-ಅತ್ತಿಗೆ ಎಲ್ಲರೂ ಇರುತ್ತಿದ್ದರು.

ಇದರಿಂದ ಮನೆಯಲ್ಲಿ ಎಲ್ಲಾ ಕಷ್ಟಸುಖಗಳಲ್ಲಿಯೂ ಎಲ್ಲರೂ ಆತ್ಮೀಯವಾಗಿ ಪಾಲ್ಗೊಳ್ಳುತ್ತಿದ್ದರು. ಮದುವೆ, ಮುಂಜಿ, ಹಬ್ಬ-ಹರಿದಿನಗಳಲ್ಲಿಯಂತು ಆ ಸಂಭ್ರಮ ಹೇಳತೀರದು. ಆ ಕುಟುಂಬವು ಒಂದು ಜೇನಿನ ಗೂಡಿನಂತೆ ಇತ್ತು. ಹಾಡು-ಹಸೆ, ಸಂಭ್ರಮ, ಸುಖ, ಖುಷಿ ಎಲ್ಲವನ್ನು ನಾವು ಅಲ್ಲಿಗೆ ಕಾಣಬಹುದು. ಮನೆಯ ಹೆಣ್ಣು ಮಕ್ಕಳು ರೇಷ್ಮೆ ಸೀರೆಕೊಟ್ಟು ಒಡವೆ ಧರಿಸಿ ಓಡಾಡುವುದು, ಮನೆಮಂದಿಯೆಲ್ಲ ಒಟ್ಟಿಗೆ ನಗುತ್ತಾ ಓಡಾಡುವುದು, ಕಂಡು ಹಿರಿಯರು ಹೇಳಿದ ಮಾತೇನೆಂದರೆ 'ಕೂಡಿ ಬಾಳಿದರೆ ಸ್ವರ್ಗ ಸುಖ' ಎಂದು.

Similar questions