- ಸ್ವರಗಳು ಎಂದರೇನು? ಸ್ವರಗಳಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?
Answers
ಸ್ವರಗಳು
ಸ್ವತಂತ್ರವಾಗಿ ಉಚ್ಚರಿಸಲ್ಪಡುವ, 'ಅ' ಕಾರದಿಂದ 'ಔ' ಕಾರದವರೆಗೆ ಇರುವ ಹದಿಮೂರು ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.
ಉದಾ : ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ.
ಸ್ವರಗಳಲ್ಲಿ ೩ ವಿಧಗಳಿವೆ.
ಹ್ರಸ್ವಸ್ವರ
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಹ್ರಸ್ವಸ್ವರ ಎಂದು ಕರೆಯುತ್ತೇವೆ.
ಕನ್ನಡದಲ್ಲಿ ಆರು ಪ್ರಸ್ವಸ್ವರಗಳು ಇವೆ.
ಉದಾ : ಅ ಇ ಉ ಋ ಎ ಒ.
ಧೀರ್ಘಸ್ವರ
ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಧೀರ್ಘಸ್ವರಗಳು ಎಂದು ಕರೆಯುತ್ತೇವೆ.
ಕನ್ನಡದಲ್ಲಿ ಏಳು ಧೀರ್ಘಸ್ವರಗಳಿವೆ.
ಉದಾ : ಆ ಈ ಊ ಏ ಐ ಓ ಔ.
ಪ್ಲುತಾಕ್ಷರ
ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರವನ್ನು ಪ್ಲುತಾಕ್ಷರ ಎಂದು ಅಥವಾ ದೀರ್ಘ ಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪ್ಲುತಾಕ್ಷರ ಎಂದು ಕರೆಯುತ್ತೇವೆ.
ಉದಾ : ಲೇ ತಮ್ಮಾss, ಗೆಳೆಯಾsss.
ಸ್ವರವು ನಿಮ್ಮ ಬಾಯಿಯನ್ನು ತೆರೆದಿರುವ ಶಬ್ದವಾಗಿದ್ದು, ಗಾಳಿಯು ಅದರ ಮೂಲಕ ಹರಿಯುವಂತೆ ಮಾಡುತ್ತದೆ ಮತ್ತು 'ಎ', 'ಇ', ಐ 'ಓ' ಮತ್ತು 'ಯು' ಅಕ್ಷರಗಳಿಂದ ಬರವಣಿಗೆಯಲ್ಲಿ ಪ್ರತಿನಿಧಿಸುತ್ತದೆ.
#SPJ2