India Languages, asked by surekhaasangi7, 1 month ago

ಮಾನವನ ಆರೋಗ್ಯ ಹಾಗೂ ನಿಸರ್ಗ . ಇದರ ಮೇಲೆ ಪ್ರಬಂಧ ಬರೆಯಿರಿ​

Answers

Answered by Anonymous
8

ಪರಿಸರದ ಶಿಥಿಲತೆಗೆ ಮಾನವನ ಚಟುವಟಿಕೆಗಳು ಮುಖ್ಯ ಕಾರಣಗಳಾಗಿರುತ್ತವೆ. ನಾಗರಿಕತೆಯ ಪ್ರಾರಂಭದಿಂದಲೂ ನಿರಂತರವಾಗಿ ಮಾನವನು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಬಂದಿದ್ದಾನೆ. ಅದು ಅವನ ಮೂಲ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊ ಳ್ಳದೇ ಪರಿಸರ ವ್ಯವಸ್ಥೆ ಯನ್ನು ವಿನಾಶ ಗೊಳಿಸುವ ಮಟ್ಟಕ್ಕೆ ವ್ಯಾಪಿಸಿದೆ.. ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ದಿಶೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳ ಕಾಳಚಿ, ಜವಾಬ್ದಾರಿಗಳನ್ನು ಅರ್ಥೈಸುವ ದೃಷ್ಟಿಯಿಂದ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವುದು ಅಗತ್ಯ.

Similar questions