ಅದು ಪದಗಳಿಗೆ ನಿಲುಕದ ರಸಾನುಭವ.
ಸಂದರ್ಭ ಬರೆದು ಸ್ವಾರಸ್ಯ ವಿವರಿಸ....
Answers
Answered by
20
Answer:
ಆಯ್ಕೆ:ಶ್ರೀಯುತ ಚ.ಹ.ರಘುನಾಥ ಅವರ 'ರಾಗಿಮುದ್ದ' ಎಂಬ ಲಲಿತಪ್ರಬಂಧದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ.
ಸಂದರ್ಭ:ರಾಗಿಮುದ್ದೆಯನ್ನು ಯಾವುದರ ಜೊತೆ ಬೇಕಾದರೂ ಸವಿಯಬಹುದು ಎಂಬುದನ್ನು ವಿವರಿಸುತ್ತಾ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ. ಮುದ್ದೆ ಸೊಪ್ಪಿನ ಸಾರಿನ ಜೊತೆ ತಿನ್ನಲು ರುಚಿಕರವಾದರೂ ಯಾವುದೇ ಸಾರಿಗೆ ಹೊಂದಿಕೊಳ್ಳುವ ಗುಣ ಮುದ್ದೆಯದೆಂದು ಲೇಖಕರು ವಿವರಿಸಿದ್ದಾರೆ.
ಸ್ವಾರಸ್ಯ:ಕಿವುಚಿದ ಸಾರು, ಕೋಳಿಸಾರು, ಮೊಳಕೆ ಹುರುಳಿಸಾರು, ಹಿಚುಕಿದ ಅವರೆ ಕಾಯಿ ಸಾರು, ಗೊಜ್ಜು, ಚಟ್ಟಿ ಎಲ್ಲದರೊಂದಿಗೆ ಅನುರೂಪವಾಗುವ ಮುದ್ದೆಯನ್ನು ನೀರು ಮಜ್ಜಿಗೆಯೊಂದಿಗೆ ಕದಡಿ ಕುಡಿಯುವ ಸುಖವಾಗಲಿ, ಉಪ್ಪು ಮೆಣಸಿನ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆದ್ರಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು. ಅದು ಪದಗಳಿಗೆ ನಿಲುಕದ ರಸಾನುಭವ, ಮಾತಿಗೆ ಮೀರಿದ ಸುಖ ಎಂದು ಲೇಖಕರು ಓದುಗರ ಬಾಯಲ್ಲಿ ನೀರೂರುವಂತೆ ವಿವರಿಸಿದ್ದಾರೆ.
Similar questions