೧. ಮಾದೇವ ತನ್ನ ಶಿಶು ಮಕ್ಕಳಿಗೆ ಏನೇನು ನೀಡಿ ಸಲಹಿದನು?
Answers
Explanation:
This is the answer for the question
Answer:
Answer❤
\huge\color{cyan}\boxed{\colorbox{black}{Sheikh Hasina}}
Sheikh Hasina
✶⊶⊷⊶⊷❍ ❥ ❍⊶⊷⊶⊷✶
▬▬▬▬ஜ۩۞۩ஜ▬▬▬▬
ಪದ್ಯ ಭಾಗ 6
ಶಿಶುಮಕ್ಕಳಿಗೊಲಿದ ಮಾದೇವ
ಜನಪದ ಕಾವ್ಯ
ಮಲೆಮಹದೇಶ್ವರ ಕಾವ್ಯ : 15ನೇ ಶತಮಾನದಲ್ಲಿದ್ದ ಶರಣ, ದೇವಮಾನವ.ಇವನು ಏಳುಮಲೆ ಎಪ್ಪತ್ತೇಳು ಮಲೆಗಳ ನಡುವನ ವಜ್ರಮಲೆ ಇಂದಿನ ಮಹದೇಶ್ವರ ಬೆಟ್ಟಾದಲ್ಲಿ ಲಿಂಗರೂಪತಾಳಿ ಭಕ್ತಾದಿಗಳಿಂದ ಪೂಜೆಗೊಳ್ಳುತ್ತಿದ್ದಾನೆ. ಇವನನ್ನು ಕುರಿತು ಕಂಸಾಳೆ ಕಾವ್ಯವನ್ನು ಕಂಸಾಳೆ ಕಲಾವಿದರು ಹಾಡುತ್ತಾ ಬಂದಿದ್ದಾರೆ.
ಈ ಕಾವ್ಯವು ಕನ್ನಡ ಜನಪದ ಕಾವ್ಯಗಳಲ್ಲೇ ದೊಡ್ಡದಾದುದು. ಇದು ಏಳು ವಿಭಾಗವಾಗಿ ವಿಂಗಡಣೆಗೊಂಡಿದೆ. ವಿಭಾಗಗಳನ್ನು ಸಾಲು ಎಂದು ಹೇಳುತ್ತಾರೆ. ಒಂದೊಂದು ವಿಭಾಗವೂ ಸ್ವತಂತ್ರವೆಂಬಂತೆ ವೈಶಿಷ್ಟ್ಯಪೂರ್ಣವಾಗಿವೆ. ಅವುಗಳೆಂದರೆ ತಾಳುಗತೆ, ಶ್ರವಣದೊರೆ ಸಾಲು, ಜುಂಜೇಗೌಡನ ಸಾಲು, ಸಂಕಮ್ಮನಸಾಲು , ಇಕ್ಕೇರಿ ದೇವಮ್ಮನ ಸಾಲು , ಸರಗೂರಯ್ಯನ ಸಾಲು ಬೇವಿನಹಟ್ಟಿ ಕಾಳಿಯ ಸಾಲು . ಪ್ರಸ್ತುತ ಕಾವ್ಯಭಾಗವು ಸಂಕಮ್ಮ ಸಾಲಿನಿಂದ ಆರಿಸಲಾಗಿದೆ.
ಕಥೆ ಹಿನ್ನೆಲೆ :
ಸಂಕಮ್ಮ ಎಂಬುವವಳು ಸೋಲಿಗರ ನೀಲಪ್ಪನನ್ನು ಮದುವೆಯಾಗುತ್ತಾಳೆ. ನೀಲಪ್ಪ ತನ್ನ ಪತ್ನಿ ಸಂಕಮ್ಮನನ್ನು ಕರೆದುಕೊಂಡು ಮೂಡಲಮನೆ ಕಾನಿಗೆ(ಅರಣ್ಯ)ಬಂದು ಅಲ್ಲಿ ಗುಡಿಸಲನ್ನು ಕಟ್ಟಿಕೊಂಡು ವಾಸಿಸುತ್ತಾನೆ. ಒಮ್ಮೆ ತನ್ನ ಹೆಂಡತಿಯನ್ನು ಗುಡಿಸಲಲ್ಲಿ ಬಿಟ್ಟು ಬೇಟೆಗೆಂದು ವಜ್ರದಮಲೆಕಾನಿಗೆ ಹೋಗುವಾಗ “ ನಾನು ಸುಮಾರು ೯ ತಿಂಗಳು ಇಲ್ಲಿರುವುದಿಲ್ಲ ಒಬ್ಬಳನ್ನೇ ಬಿಟ್ಟು ಹೋಗುವುದು ಹೇಗೆ? ಎಂದು ಚಿಂತಿಸಿ ಗುಡಿಸಲಮುಂದೆ ೭೭ಮಂಡಲಮಾಡಿ ಚೀಟಿ ಬರೆದಿಟ್ಟು ಬಾಗಿಲಲ್ಲಿ ರಾಕ್ಷಸಿಗೊಂಬೆ ಮಾಡಿಟ್ಟು ಸಂಕಮ್ಮನ ಮೇಲೆ ಸಂಶಯಪಟ್ಟು, ಅವಳ ವಸ್ತ್ರಗಳನ್ನು ಕಳಚಿ, ಸೊಪ್ಪಿನ ಉಡುಗೆ ತೊಡಿಸಿ, ಕೈಕಾಲುಗಳನ್ನೂ ಕಟ್ಟಿ ಬೇಟೆಗೆ ಹೊರಡುತ್ತಾನೆ.
ಹೀಗೆ ಗಂಡ ನೀಡಿದ ಚಿತ್ರಹಿಂಸೆಯಿಂದ ಬೇಸರಗೊಂಡು ದುಃಖಿತಳಾದ ಸಂಕಮ್ಮ ತನ್ನ ತಂದೆಯ ಮನೆದೇವರಾದ ಮಾದಯ್ಯನಲ್ಲಿ ಮೊರೆಯಿಡುತ್ತಾಳೆ. ನರಲೋಕದಲ್ಲಿಯಾರೋ ಹೆಣ್ಣು ಗೋಳಾಡುತ್ತಿದ್ದಾಳೆ ಎಂದು ತಿಳಿದ ಮಾದೇವ ಮಾರುವೇಷದಲ್ಲಿ ಸಂಕಮ್ಮನ ಗುಡಿಸಲ ಬಳಿಬಂದು ನೀಲಪ್ಪಮಾಡಿದ್ದ ಮಂಡಲಗಳನ್ನು, ರಾಕ್ಷಸಿಬೊಂಬೆಯನ್ನು ನಾಶಮಾಡಿ, ಭಿಕ್ಷೆಬೇಡುತ್ತಾನೆ. ಮೈಮೇಲೆ ಬಟ್ಟೆಯಿಲ್ಲದೆ, ಕೈಕಾಲುಗಳನ್ನು ಕಟ್ಟಿಸಿಕೊಂಡಿರುವ ಸಂಕಮ್ಮ ಏನೂ ತೋಚದೆ ಕಣ್ಣೀರಿಡುತ್ತಾಳೆ. ಅವಳ ದುಃಖವನ್ನು ನೋಡಲಾರದೆ ಮಾದೇವ ಕೃಪಾದೃಷ್ಟಿಯನ್ನು ಬೀರುತ್ತಾನೆ. ಆ ಕೂಡಲೇ ಗುಡಿಸಲು ಏಳು ಉಪ್ಪರಿಗೆ ಮನೆಯಾಗುತ್ತದೆ. ಮನೆ ಸಕಲ ಐಶ್ವರ್ಯದಿಂದ ತುಂಬಿ ತುಳುಕುತ್ತದೆ. ಸಂಕಮ್ಮ ಪಟ್ಟೆಸೀರೆ, ರವಿಕೆ, ಆಭರಣಗಳನ್ನು ತೊಟ್ಟು ಆ ಭಾಗ್ಯಕೊಟ್ಟ ಭಗವಂತನಿಗೆ ನಮಿಸಿ ಭಿಕ್ಷೆನೀಡಲು ಬರುತ್ತಾಳೆ. ಮಾದಪ್ಪ ಬಂಜೆಯ ಕೈಲಿ ಭಿಕ್ಷೆ ಪಡೆಯುವುದಿಲ್ಲ.