ಬೋಳೆಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದ್ದಕ್ಕೆ ಸಾಹುಕಾರಣ್ಣನು ಏನು ಹೇಳುತ್ತಾನೆ
Answers
Answer:
ಬೋಳೇಶಂಕರ - ನಾಟಕ
ನಾಟಕ - ಬೋಳೇಶಂಕರ
ಡಾ. ಚಂದ್ರಶೇಖರ ಕಂಬಾರ
ಸಂದರ್ಭದೊಡನೆ ವಿವರಿಸಿ :
೧. ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದಮೇಲೆ ಹೆಂಡತಿಗೆ ಕೊಡ್ತೀನಿ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈ ಮಾತನ್ನು ಕೋಡಂಗಿಯು ಸೂತ್ರದಾರನಿಗೆ ಹೇಳಿದನು. ಕೋಡಂಗಿಯು ತಾನು ಬೋಳೆಶಂಕರನಲ್ಲಿ ಕೆಲಸಕ್ಕೆ ಇದ್ದೇನೆ ಎಂದು ಭಾಗವತನೊಂದಿಗೆ ಹೇಳುತ್ತಿದ್ದಾಗ ಭಾಗವತನು ನಿನ್ನ ಸಂಬಳ ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ದಿನಕ್ಕೆ ಕೆನ್ನೆಮೇಲೆ ಹತ್ತು ಏಟು ಎಂದು ಹೇಳುತ್ತಾನೆ. ಭಾಗವತನು ಅದನ್ನೇ ಲೆಕ್ಕಾ ಹಾಕಿ ದಿನಕ್ಕೆ ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು ವರ್ಷಕ್ಕೆ ಮೂರು ಸಾವಿರದ ಆರುನೂರು ಏಟು ಯಾರಿಗುಂಟು ಯಾರಿಗಿಲ್ಲ. ಇಷ್ಟೆಲ್ಲಾ ಸಂಬಳ ತೆಗೆದುಕೊಂಡು ಏನು ಮಾಡುತ್ತೀ ಎಂದಾಗ ಕೋಡಂಗಿ ಈ ಮೇಲಿನಂತೆ ಹೇಳುತ್ತಾನೆ.
೨. ಇವನಿಗೇನು ಹೆಂಡತೀನೇ ಮಕ್ಕಳೇ?
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈಮಾತನ್ನು ಸರದಾರನ ಹೆಂಡತಿ ಸರದಾರನಿಗೆ ಹೇಳುತ್ತಾಳೆ. ಆಸ್ತಿಯನ್ನು ಹಂಚಿಕೊಳ್ಳುವ ವಿಷಯಬಂದಾಗ ಬೋಳೇಶಂಕರನು ತನ್ನ ಅಣ್ಣಂದಿರನ್ನು ಕುರಿತು “ ನೀವಾಗಲಿ ನಿಮ್ಮ ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ” - ಹೇಗೆ ಬದುಕುತ್ತೀರಿ ಎಂಬ ಅರ್ಥದಲ್ಲಿ ಕೇಳಿದರೆ ಸರದಾರ ಅಣ್ಣ ಆಸ್ತಿಯನ್ನು ಮೂರು ಭಾಗ ಮಾಡೋಣ ಒಂದು ಭಾಗ ನೀನು ತಗೋ ಎಂದಾಗ ಸರದಾರನ ಹೆಂಡತಿ ಈ ಮೇಲಿನ ಮಾತನ್ನು ಹೇಳುತ್ತಾಳೆ.
ಒಂದು ವೇಳೆ ಮದುವೆಯಾಗಲು ಒಪ್ಪಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ ಎಂದು ಕೇವಲವಾಗಿ ಮಾತನಾಡುತ್ತಾಳೆ
೩. ಕೊಳೆತ ಬಲೆ ಹಾಕಿ ಎಳೆದರೂ ಬರುವಂಥವರು.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಸೈತಾನ ದೊರೆಯಿಂದ ಕಳುಹಿಸಲ್ಪಟ್ಟ ಮೊದಲನೆಯ ಪಿಶಾಚಿಯು ಈ ಮಾತನ್ನು ಹೇಳುತ್ತದೆ. ತನ್ನನ್ನು ಪರಿಚಯ ಮಾಡಿಕೊಡುತ್ತಾ, ಬೋಳೇಶಂಕರನ ಅಣ್ಣಂದಿರ ಬಗ್ಗೆ ಹೇಳುವಾಗ ಈ ಮಾತು ಬಂದಿದೆ. ತನ್ನ ಅಣ್ಣಂದಿರು ತಲೆ ತುರಿಸಿಕೊಳ್ಳುವ ಮೊದಲೇ ವಶವಾದವರು. ಆದರೆ ಬೋಳೇ ಶಂಕರ ಮಹಾ ಪಾಕಡ ಎಲ್ಲರಿಗಿಂತ ಚುರುಕು ಎಂದು ಹೇಳಿಕೊಂಡಿತು. ಬೋಳೇಶಂಕರನ ಅಣ್ಣಂದಿರು ಎಷ್ಟು ದುರ್ಬಲರು ಎಂಬುದು ಈಮಾತಿನಲ್ಲಿ ಗೋಚರವಾಗುತ್ತದೆ.
೪. ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಮೊದಲನೆ ಪಿಶಾಚಿಯು ಬೋಳೇಶಂಕರನನ್ನು ತನ್ನ ವಶಮಾಡಿಕೊಳ್ಳಲು ಅವನ ರೊಟ್ಟಿಯನ್ನು ಕದಿಯುತ್ತದೆ. ಇದರಿಂದ ಅವನು ಕೋಪಗೊಂಡು ವಾಚಾಮಗೋಚರವಾಗಿ ಬೈದಾಡುತ್ತಾನೆ ಎಂದು ಭಾವಿಸುತ್ತದೆ. ಆದರೆ ರೊಟ್ಟಿ ತಿನ್ನಲು ಬಂದ ಬೋಳೇಶಂಕರ ರೊಟ್ಟಿಕಾಣದೆ ಬಹುಷಃ ಹಸಿದವರಾರೋ ತೆಗೆದುಕೊಂಡು ತಿಂದಿರಬೇಕು. ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ ಎಂದು ಉಳಿದ ಕೆಲಸ ಮುಗಿಸಲು ಹೋಗುತ್ತಾನೆ. ಬೋಳೇಶಂಕರನ ಉದಾರತೆ , ಒಳ್ಳೆಯತನ ಇಲ್ಲಿ ಗೋಚರವಾಗುತ್ತದೆ.
೫. ನಾನೇನಾದರೂ ರಾಜನಾದರೆ ನಿಮ್ಮಂಥ ಸೋಂಬೇರಿಗಳೀಗೆ ಊಟ ಹಾಕೋದೇ ಇಲ್ಲ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಮೊದಲನೆ ಪಿಶಾಚಿಯು ಬೋಳೇಶಂಖರನನ್ನು ತನ್ನ ವಶಮಾಡಿಕೊಳ್ಳಲು ಮನುಷ್ಯರಂತೆ ವೇಷ ಬದಲಿಸಿಕೊಂಡು ಬರುತ್ತದೆ. ಎರಡು ಎರಡು ಸೇರಿ ಐದಾಗುವ ಆಟ ಆಡೋಣ ಬರುವೆಯಾ ಎಂದು ಮಾತಿಗೆಳೆಯುತ್ತದೆ. ಬೋಳೆಶಂಕರ ಒಪ್ಪುವುದಿಲ್ಲ. ಆದರೂ ಕಳೆಯೋ ಆಟ ಆಡೋಣ ಬಾ ಎಂದು ಪಿಶಾಚಿಯು ಹೇಳುತ್ತಾ ನಿನ್ನ ಹತ್ತಿರ ಹತ್ತು ರೂಪಾಯಿ ಇದೆ, ಐದು ರೂಪಾಯಿ ನನಗೆ ಕೊಟ್ಟರೆ ಎಷ್ಟು ಉಳಿಯುತ್ತದೆ ಎಂದು ಕೇಳಿದಾಗ ನಾನು ನಿನಗೆ ಹಣ ಕೊಡೋದಿಲ್ಲ ಎಂದು ಹೇಳುತ್ತಾನೆ. ಕದಿಯುತ್ತೇನೆ ಎಂದು ಪಿಶಾಚಿ ಹೇಳಿದಾಗ ಬೋಳೇಶಂಕರ ಈ ಮೇಲಿನ ಮಾತನ್ನು ಹೇಳುತ್ತಾನೆ.
೬. ಹೆಣ್ಣಿದ್ದ ಮನೆಯ ಸೌಭಾಗ್ಯವೇ ಬೇರೆ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ.
ಈ ಮಾತನ್ನು ಬೋಳೇಶಂಕರ ತನ್ನಲ್ಲಿ ತಾನು ಹೇಳಿಕೊಳ್ಳುತ್ತಾನೆ. ಒಬ್ಬನ ಜೀವನದಲ್ಲಿ ಒಳ್ಳೆಯ ದಿನಗಳು ಬರುವುದು ಅಪರೂಪ. ಅಣ್ಣತಮ್ಮಂದಿರು ಒಟ್ಟಿಗೆ ಕುಳಿತು ಊಟಮಾಡಿ ಎಷ್ಟುದಿನವಾಯಿತು. ಅತ್ತಿಗೆಯವರ ಹಸ್ತಗುಣದಿಂದ ಅಡುಗೆ ಪರಿಮಳ ಭರಿತವಾಗಿದೆ. ಬನ್ನಿ ಅಣ್ಣತಮ್ಮಂದಿರು ಒಟ್ಟಿಗೆ ಊಟಮಾಡೋಣ ಎಂದು ತನ್ನ ಅಣ್ಣಂದಿರನ್ನು ಕರೆಯುತ್ತಾನೆ. ಈ ಸಂದರ್ಭದಲ್ಲಿ ಈಮೇಲಿನ ಮಾತು ಬಂದಿದೆ.
೭. ಹಸಿರು ಸಾಮ್ರಾಜ್ಯದ ನಮ್ರಪ್ರಜೆ ಕಣಯ್ಯ ನಾನು
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ.ಬೋಳೇಶಂಕರನು ಕೋಡಂಗಿಯೊಡನೆ ಮಾತನಾಡುವಾಗ ಈ ಮೇಲಿನ ಮಾತು ಬಂದಿದೆ.
ಕೋಡಂಗಿಯು ನಿನ್ನ ಅಣ್ಣಂದಿರು ನಿನ್ನ ಹಣವನ್ನೆಲ್ಲ ಖರ್ಚುಮಾಡುತ್ತಿದ್ದಾರೆ. ಎಂದು ದೂರಿದಾಗ ಬೋಳೇಶಂಕರನು ಹಸಿರನ್ನು ನೋಡು ಹಸಿರನ್ನು ಪ್ರೀತಿಸಬೇಕಾದರೆ ನೀನು ಪುಸ್ತಕದ ಭಾಷೆಯಲ್ಲಿ ಸಮರ್ಥಿಸಿಕೊಳ್ಳಬೇಕಾಗಿಲ್ಲ ಅಂತಃಕರಣ ತೆರೆದರೆ ಸಾಕು. ಅದು ಒಳಗೆ ಪ್ರವೇಶಿಸುತ್ತದೆ. ಒಳಗಿನ ಕೊಳೆ ತೊಳೆದು ಹೃದಯವನ್ನು ಪರಿಶುದ್ಧವಾದ ಸ್ವಚ್ಛವಾದ ಕೊಳದ ಥರ ಮಾಡುತ್ತದೆ ನಾನು ಹಸಿರು ಸಾಮ್ರಾಜ್ಯದ ನಮ್ರಪ್ರಜೆ ಕಾಣಯ್ಯಾ ಎಂದು ಹೇಳಿದನು. ಈ ಮಾತಿನಲ್ಲಿ ಬೋಳೇಶಂಕರನ ಬೋಳೇತನ ಕಾಣುತ್ತದೆ.
೮. ರಾಜಕುಮಾರಿಗೆ ಬಂದಿರೋದು , ರಾಜರೋಗ
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಮಂತ್ರಿಯು ಸೇವಕನಿಗೆ ಹೇಳಿದ ಮಾತು. ರಾಜಕುಮಾರಿಯ ಹೊಟ್ಟೆನೋವನ್ನು ನಿವಾರಿಸಲು ಬೆಪ್ತಕ್ಕಡಿ ಬೋಳೇಶಂಕರ ಬಂದಿದ್ದಾನೆ ಎಂದಾಗ ಮಂತ್ರಿ ಸಾಮಾನ್ಯರಿಗೆಲ್ಲ ಬಗ್ಗುವಂತಹ ಕಾಯಿಲೆ ಇದಲ್ಲ . ಇದು ರಾಜರೋಗ ರಾಜವೈದ್ಯರೇ ಬರಬೇಕು ಎಂದು ಹೇಳುವಾಗ ಈ ಮಾತು ಬಂದಿದೆ.
೯. ರಾಜರಾಣೀಯರಿಂದ ಹಿಡಿದು ಎಲ್ಲರೂ ದುಡಿಯುತ್ತಾರೆ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ.ರಾಜಕುಮಾರಿಯನ್ನು ವಿವಾಹವಾಗುವಂತೆ ರಾಜನ ತೀರ್ಮಾನವನ್ನು ತಿಳಿಸಲು ಬಂದ ಮಂತ್ರಿಗಳಿಗೆ ಬೋಳೇಶಂಕರ ಹೇಳುವ ಮಾತು.
ನಾನು ರಾಜನಾದರೆ ರಾಜ್ಯದಲ್ಲಿ ಸೈನ್ಯವಿರುವುದಿಲ್ಲ. ತೆರಿಗೆ ಇರೋದಿಲ್ಲ, ನಾಣ್ಯ ಇರೊದಿಲ್ಲ, ರಾಜ ರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ. ಎಲ್ಲರೂ ಉಣ್ಣುತ್ತಾರೆ. ದುಡಿಯದ ಸೋಂಬೇರಿಗಳಿಗೆ ಖಂಡಿತಾ ಅವಕಾಶವಿಲ್ಲ ಎಂದು ಹೇಳುತ್ತಾನೆ. ಈ ಮಾತಿನಲ್ಲಿ ಬೋಳೇಶಂಕರನ ಸ್ವಭಾವ ವ್ಯಕ್ತವಾಗುತ್ತದೆ.
Answer:
ಸಂದರ್ಭದೊಡನೆ ವಿವರಿಸಿ :
೧. ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದಮೇಲೆ ಹೆಂಡತಿಗೆ ಕೊಡ್ತೀನಿ.
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈ ಮಾತನ್ನು ಕೋಡಂಗಿಯು ಸೂತ್ರದಾರನಿಗೆ ಹೇಳಿದನು. ಕೋಡಂಗಿಯು ತಾನು ಬೋಳೆಶಂಕರನಲ್ಲಿ ಕೆಲಸಕ್ಕೆ ಇದ್ದೇನೆ ಎಂದು ಭಾಗವತನೊಂದಿಗೆ ಹೇಳುತ್ತಿದ್ದಾಗ ಭಾಗವತನು ನಿನ್ನ ಸಂಬಳ ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ದಿನಕ್ಕೆ ಕೆನ್ನೆಮೇಲೆ ಹತ್ತು ಏಟು ಎಂದು ಹೇಳುತ್ತಾನೆ. ಭಾಗವತನು ಅದನ್ನೇ ಲೆಕ್ಕಾ ಹಾಕಿ ದಿನಕ್ಕೆ ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು ವರ್ಷಕ್ಕೆ ಮೂರು ಸಾವಿರದ ಆರುನೂರು ಏಟು ಯಾರಿಗುಂಟು ಯಾರಿಗಿಲ್ಲ. ಇಷ್ಟೆಲ್ಲಾ ಸಂಬಳ ತೆಗೆದುಕೊಂಡು ಏನು ಮಾಡುತ್ತೀ ಎಂದಾಗ ಕೋಡಂಗಿ ಈ ಮೇಲಿನಂತೆ ಹೇಳುತ್ತಾನೆ.
೨. ಇವನಿಗೇನು ಹೆಂಡತೀನೇ ಮಕ್ಕಳೇ?
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈಮಾತನ್ನು ಸರದಾರನ ಹೆಂಡತಿ ಸರದಾರನಿಗೆ ಹೇಳುತ್ತಾಳೆ. ಆಸ್ತಿಯನ್ನು ಹಂಚಿಕೊಳ್ಳುವ ವಿಷಯಬಂದಾಗ ಬೋಳೇಶಂಕರನು ತನ್ನ ಅಣ್ಣಂದಿರನ್ನು ಕುರಿತು “ ನೀವಾಗಲಿ ನಿಮ್ಮ ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ” - ಹೇಗೆ ಬದುಕುತ್ತೀರಿ ಎಂಬ ಅರ್ಥದಲ್ಲಿ ಕೇಳಿದರೆ ಸರದಾರ ಅಣ್ಣ ಆಸ್ತಿಯನ್ನು ಮೂರು ಭಾಗ ಮಾಡೋಣ ಒಂದು ಭಾಗ ನೀನು ತಗೋ ಎಂದಾಗ ಸರದಾರನ ಹೆಂಡತಿ ಈ ಮೇಲಿನ ಮಾತನ್ನು ಹೇಳುತ್ತಾಳೆ.
ಒಂದು ವೇಳೆ ಮದುವೆಯಾಗಲು ಒಪ್ಪಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ ಎಂದು ಕೇವಲವಾಗಿ ಮಾತನಾಡುತ್ತಾ
Explanation: