ವಾಲ್ಮಿಕಿ ಸಿತೆಯನ್ನು ಹೆಗೆ ಸಂತೈಸುತ್ತಾನೆ
Answers
Answered by
13
Answer:
ಸೀತೆಯು ವನದ ಕಲ್ಕರಗಳು ಕರಗುವಂತೆ ದುಃಖಿಸುತ್ತಿರುವಾಗ ತಪೋಧನರಾದ ವಾಲ್ಮೀಕಿ ಮಹರ್ಷಿ ತನ್ನ ಶಿಷ್ಯರೊಡಗೂಡಿ ಯೂಪವನ್ನು ಅರಸುತ್ತ ಅಲ್ಲಿಗೆ ಬರುತ್ತಾರೆ. ಆ ಅರಣ್ಯದಲ್ಲಿ ಎತ್ತಹೋಗಲೂ ಅರಿಯದೇ ದುಃಖದಿಂದ ದಿಕ್ಕೆಟ್ಟು ಅನಾಥೆಯಂತಿದ್ದ. ಬೇಸಿಗೆಯ ಕಡುಬಿಸಿಲಿಗೆ ಬಳಲಿದ ಕಾಡಿನ ದೇವತೆಯಂತೆ ಇದ್ದ ಸೀತೆಗೆ ವಾಲ್ಮೀಕಿ "ದೇವಿ, ಶೋಕವನ್ನು ಬಿಡು. ನೀನು ಅವಳಿ ಪುತ್ರರಿಗೆ ಜನ್ಮ ನೀಡುವೆ. ನಾನು ಅನ್ಯನೆಂದು ಭಾವಿಸಬೇಡ, ಸಂದೇಹ ಪಡಬೇಡ. ನಾನು ನಿನ್ನ ತಂದೆ ಜನಕರಾಜನಿಗೆ ಅನ್ಯನಲ್ಲ. ನಮ್ಮ ಆಶ್ರಮಕ್ಕೆ ಬಂದು ನೀನು ಸುಖದಿಂದ ಇರು. ಆಯಾ ಕಾಲಕ್ಕೆ ನಿನ್ನ ಬಸುರ ಬಯಕೆಯನ್ನು ಪೂರೈಸಿ ಸಲಹುವೆನು. ಹೆದರಬೇಡ” ಎಂದು ಸಂತೈಸಿದನು.
Similar questions