ಬೋಳೇಶಂಕರನ ಅಣ್ಣಂದಿರೇ ವಾಸಿ ಎಂದು ಪಿಶಾಚಿ ಹೇಳಲು ಕಾರಣವೇನು?
Answers
Answer:
ಇವನಿಗೇನು ಹೆಂಡತೀನೇ ಮಕ್ಕಳೇ?
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈಮಾತನ್ನು ಸರದಾರನ ಹೆಂಡತಿ ಸರದಾರನಿಗೆ ಹೇಳುತ್ತಾಳೆ. ಆಸ್ತಿಯನ್ನು ಹಂಚಿಕೊಳ್ಳುವ ವಿಷಯಬಂದಾಗ ಬೋಳೇಶಂಕರನು ತನ್ನ ಅಣ್ಣಂದಿರನ್ನು ಕುರಿತು “ ನೀವಾಗಲಿ ನಿಮ್ಮ ಹೆಂಡಂದಿರಾಗಲಿ ಹೊಲದಲ್ಲಿ ದುಡಿದವರಲ್ಲ, ಕಷ್ಟಪಟ್ಟವರಲ್ಲ” - ಹೇಗೆ ಬದುಕುತ್ತೀರಿ ಎಂಬ ಅರ್ಥದಲ್ಲಿ ಕೇಳಿದರೆ ಸರದಾರ ಅಣ್ಣ ಆಸ್ತಿಯನ್ನು ಮೂರು ಭಾಗ ಮಾಡೋಣ ಒಂದು ಭಾಗ ನೀನು ತಗೋ ಎಂದಾಗ ಸರದಾರನ ಹೆಂಡತಿ ಈ ಮೇಲಿನ ಮಾತನ್ನು ಹೇಳುತ್ತಾಳೆ.
ಒಂದು ವೇಳೆ ಮದುವೆಯಾಗಲು ಒಪ್ಪಿದರೂ ಯಾರೂ ಹೆಣ್ಣು ಕೊಡಲು ಮುಂದೆ ಬರುವುದಿಲ್ಲ ಎಂದು ಕೇವಲವಾಗಿ ಮಾತನಾಡುತ್ತಾಳೆ
Answer:
ಪಿಶಾಚಿಗಳು ಸೈತಾನದೊರೆಯ ಆದೇಶದಂತೆ ಬೋಳೇಶಂಕರ ಮತ್ತು ಅವನ ಅಣ್ಣಂದಿರಲ್ಲಿ ವಿರಸ ಹುಟ್ಟಿಸಿ ಮೂವರನ್ನು ನರಕಕ್ಕೆ ಕರೆದೊಯ್ಯಲು ಬಂದಿದ್ದವು ಆಗ ಮೊದಲನೆ ಪಿಶಾಚಿಯು ಬೋಳೇಶಂಕರ ಮಹಾ ಪಾಕಡ , ಮಾತು ಮಾತಿಗೆ ಶಿವನ ಹೆಸರನ್ನು ಹೇಳುತ್ತಾ. ನನ್ನ ಇಷ್ಟುವರ್ಷದ ಅನುಭವಕ್ಕೆ ಸವಾಲು ಹಾಕುತ್ತಾಇದ್ದಾನೆ.ಇದುವರೆಗೆ ನನ್ನ ಅನುಭವಕ್ಕೆ ಮಸಿ ಬಳಿಯುವಂತ ವ್ಯಕ್ತಿಯನ್ನು ನೋಡಿರಲೇ ಇಲ್ಲ. ಬೋಳೇಶಂಕರನ ಅಣ್ಣಂದಿರು ಕೊಳೆತ ಬಲೆಹಾಕಿ ಎಳೆದರೂ ಬರುವಂಥರು. ತನ್ನ ಪಿಶಾಚಿ ಅಣ್ಣಂದಿರು ತಲೆಕೆರೆದುಕೊಳ್ಳುವ ಮೊದಲೇ ಅವರ ವಶವಾದವರು. ತನ್ನ ಪಿಶಾಚಿ ಅಣ್ಣಂದಿರು ಅವರಿಬ್ಬರ ಹಿಂದೆ ನಿಲ್ಲುವುದೇ ತಡ ಬೆಟ್ಟದ ತುದಿಯಿಂದ ನೆಗೆದು ಬೀಳಲು ಆಸೆಪಟ್ಟವರು. ಇವನಿಗೆ ಹೋಲಿಸಿದರೆ ಇವನ ಅಣ್ಣಂದಿರೇ ವಾಸಿ ಎಂದು ಹೇಳುತ್ತದೆ.