ಎರಡು ಅನ್ಯದೇಶ್ಯ ಶಬ್ದಗಳನ್ನು ಹೇಳಿ
Answers
Answered by
1
ಉತ್ತರ:
ಸಾಬೂನು, ರೈಲು.
ವಿವರಣೆ:
ಯಾವುದೇ ಭಾಷೆಯ ಮೂಲ ಜಗತ್ತಿನ ಒಂದು ಭಾಗದ ಅಥವಾ ಒಂದು ಗುಂಪಿನ ಜನರ ಸಂಸ್ಕೃತಿ, ಆಚಾರ-ವಿಚಾರಗಳ ಪ್ರತೀಕವಾಗಿದೆ. ಸಾಮಾಜಿಕ ಕಾರಣಗಳಿಂದ ಒಂದು ಭಾಗದ ಜನರು ಬೇರೆ ಭಾಗದ ಜನರೊಂದಿಗೆ ಬೆರೆತು ತಮ್ಮ ಆಚಾರ-ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಹೀಗೆ ವಿನಿಮಯ ಮಾಡಿಕೊಳ್ಳುವಾಗ ಭಾಷೆ ಪ್ರಮುಖ ಪಾತ್ರವಹಿಸುತ್ತದೆ. ಜನರ ವಿಚಾರ ವಿನಿಮಯದೊಂದಿಗೆ ಕೆಲವು ಪರ ಭಾಷಾ ಪದಗಳು ಮೂಲ ಭಾಷೆಗೆ ಬಂದು ಸೇರುವುದು ಸಾಮಾನ್ಯವಾದುದು. ಇದರಿಂದ ಭಾಷೆ ಬೆಳೆಯುತ್ತದೆ. ಹೆಚ್ಚು ಜನರು ಭಾಷೆಯನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಮತ್ತು ಭಾಷಾ ಸಂಪತ್ತು ಹೆಚ್ಚಾಗುತ್ತದೆ. ಹಾಗೆಂದು, ಮೂಲ ಪದಗಳ ಬಳಕೆ ಕಡಿಮೆಯಾಗುವುದಿಲ್ಲ. ಎರಡು ಭಾಷೆಯ ಶಬ್ದಗಳು ಉಚ್ಚಾರಣೆಗಳು ಒಂದೇ ರೀತಿಯಲ್ಲಿ ಇದ್ದಾಗ, ವ್ಯಾವಹಾರಿಕವಾಗಿ ಜನರಿಗೆ ಇದರಿಂದ ಲಾಭವಾಗುತ್ತದೆ ಮತ್ತು ಭಾಷೆಯ ಪ್ಯಾಪ್ತಿ ಮತ್ತು ಸಂವಹನೆ ಹೆಚ್ಚಾಗುತ್ತದೆ.
Similar questions