ನಿಮ್ಮ ರಜಾ ದಿನದ ಅನುಭವಗಳನ್ನು ತಿಳಿಸುತ್ತಾ ಗೆಳೆಯ/ಗೆಳತಿಗೊಂದು ಪತ್ರ ಬರೆಯಿರಿ.
Answers
Answered by
3
ಪತ್ರ
ಪ್ರೀತಿಯಿಂದ ಗೆಳೆಯನಿಗೆ/ ಗೆಳತಿಗೆ,
ನಾನು ಕ್ಷೇಮವಾಗಿರುವೆ ನೀನೂ ಕ್ಷೇಮವಾಗಿ ಇರುವೆ ಎಂದು ಭಾವಿಸುತ್ತೇನೆ. ನನ್ನ ರಜ ದಿನದ ಅನುಭವ ತಿಳಿಸಲು ಈ ಪತ್ರ ಬರೆದಿದ್ದೇನೆ. ನಾವೆಲ್ಲರು ಬೇಲೂರು, ಹಳೇಬೀಡು, ಧರ್ಮಸ್ಥಳ, ಉಡುಪಿ, ಮಂಗಳೂರು, ಮಲೈ, ಕಾರವಾರ, ಹೊರನಾಡು, ಶೃಂಗೇರಿ ಮುಂತಾದ ಸ್ಥಳಗಳನ್ನು ನೋಡಿದೆವು. ತುಂಬಾ ಸುಂದರವಾದ ಅದ್ಭುತವಾದ ಸ್ಥಳಗಳಾಗಿದ್ದವು. ನಮ್ಮ ಇತಿಹಾಸವನ್ನು ಸಾಂಸ್ಕೃತಿಕ ಪರಂಪರೆಯನ್ನು ನೆನಪಿಸುವ ದೇವಾಲಯಗಳು, ಸ್ಮಾರಕಗಳು ಚೆನ್ನಾಗಿವೆ. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ನೋಡಲೇಬೇಕು. ಸಮುದ್ರತೀರವನ್ನು ಹೊಂದಿರುವ ಮಂಗಳೂರು, ಮಲ್ಪೆ ತುಂಬಾ ಸುಂದರವಾದ, ರಮಣೀಯವಾದ, ಪ್ರಕೃತಿ ಸೌಂದರ್ಯವನ್ನು ಹೊಂದಿವೆ. ನೀನು ನನ್ನ ಜೊತೆಯಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು.
ಧನ್ಯವಾದಗಳೊಂದಿಗೆ....
ನಿನ್ನ ಪ್ರೀತಿಯ ಗೆಳೆಯ ಗೆಳತಿ
____________
ಇವರಿಗೆ,
________
ಪ್ರಥಮ ಪಿಯುಸಿ
ಪದವಿ ಪೂರ್ವ ಕಾಲೇಜು
ಬೆಂಗಳೂರು.
Similar questions