ಅಂತರ್ರಾಷ್ಟ್ರೀಯ ವ್ಯವಹರವನ್ನು ಮಾಡಲು ಆಕಾಂಕ್ಷಿಯಾಗಿರುವ ನೀವು ಅಂತರಾಷ್ಟ್ರೀಯ ವ್ಯಾವಹಾರವನ್ನು ಪ್ರವೇಶಿಸಲು ಯಾವ ವಿಧಾನ (ಪ್ರಾಕಾರ)ಗಳನ್ನು ನೋಡುತ್ತೀರಿ
Answers
Answer:
ಅಂತಾರಾಷ್ಟ್ರೀಯ ಗಡಿಪ್ರದೇಶಗಳು ಅಥವಾ ಪ್ರದೇಶಗಳಾದ್ಯಂತ ಹಣದ ಸರಕುಗಳು, ಮತ್ತು ಸೇವೆಗಳ ವಿನಿಮಯವನ್ನು ಅಂತಾರಾಷ್ತ್ರೀಯ ವ್ಯಾಪಾರ ಎನ್ನುತ್ತಾರೆ.[೧]. ಹಲವು ದೇಶಗಳಲ್ಲಿ, ಇದು ಒಟ್ಟು ದೇಶೀಯ ಉತ್ಪಾದನೆ (GDP)ಯ ಬಹು ಮುಖ್ಯವಾದ ಭಾಗವನ್ನು ಪ್ರತಿನಿಧಿಸುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರವು (ಸಿಲ್ಕ್ ರೋಡ್, ಅಂಬರ್ ರೋಡ್ನೋಡಿ) ಬಹುತೇಕ ಇತಿಹಾಸದುದ್ದಕ್ಕೂ ಅಸ್ತಿತ್ವದಲ್ಲಿದ್ದರೂ, ಅದರ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ಮಹತ್ವವು ಇತ್ತೀಚಿನ ಶತಮಾನಗಳಲ್ಲಿ ಹೆಚ್ಚಾಗುತ್ತಿದೆ. ಕೈಗಾರೀಕರಣ, ಮುಂದುವರಿದ ಸಾರಿಗೆಸೌಲಭ್ಯ, ಜಾಗತೀಕರಣ, ಮಲ್ಟಿನ್ಯಾಷನಲ್ಕಾರ್ಪೋರೇಶನ್ಗಳು, ಮತ್ತು ಹೊರಗುತ್ತಿಗೆಗಳೆಲ್ಲವು ಅಂತಾರಾಷ್ಟ್ರೀಯ ವ್ಯಾಪಾರದ ಪದ್ಧತಿಮೇಲೆ ಮಹತ್ವದ ಪರಿಣಮವನ್ನು ಬೀರುತ್ತಿವೆ. ಅಂತಾರಾಷ್ಟ್ರೀಯ ವ್ಯಾಪಾರದ ಹೆಚ್ಚಳವು ಜಾಗತೀಕರಣದ ಮುಂದುವರಿಕೆಗೆ ಅವಶ್ಯವಾಗಿದೆ. ಅಂತಾರಾಷ್ಟ್ರೀಯ ವ್ಯಾಪಾರವಿಲ್ಲದಿದ್ದಲ್ಲಿ, ಆ ದೇಶಗಳು ತಮ್ಮ ಗಡಿಯೊಳಗೆ ಮಾತ್ರ ನಿಯಮಿತವಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ವ್ಯಾಪಾರವು ಗಡಿಪ್ರದೇಶಗಳೊಂದಿಗೆ ಅಥವಾ ಇತರ ಸಂದರ್ಭಗಳಲ್ಲಿ ನಡೆಯುವ ವ್ಯಾಪಾರದ ವೇಳೆ ಭಾಗಿಯಾಗುವ ಭಾಗಿದಾರರ ನಡುವಿನ ಉತ್ತೇಜಕ ಶಕ್ತಿ ಮತ್ತು ನಡವಳಿಕೆ ಮೂಲಭೂತವಾಗಿ ಬದಲಾವಣೆ ಹೊಂದದಿರುವುದರಿಂದ ತಾತ್ವಿಕವಾಗಿ ದೇಶೀಯ ವ್ಯಾಪಾರವು ಅಂತಾರಾಷ್ಟ್ರೀಯ ವ್ಯಾಪಾರಕ್ಕಿಂತ ಭಿನ್ನವಾಗಿಲ್ಲ. ಒಂದು ಪ್ರಮುಖವಾದ ವ್ಯಾತ್ಯಾಸವೇನೆಂದರೆ ಅಂತಾರಾಷ್ಟ್ರೀಯ ವ್ಯಾಪಾರವು ದೇಶೀಯ ವ್ಯಾಪಾರಕ್ಕಿಂತ ಸ್ವಲ್ಪ ಹೆಚ್ಚೇ ಎನ್ನುವಷ್ಟು ವೆಚ್ಚದಾಯಕವಾಗಿದೆ. ಅದಕ್ಕೆ ಕಾರಣವೇನೆಂದರೆ ಗಡಿಪ್ರದೇಶವು ಸಾಮಾನ್ಯವಾಗಿ ಹೆಚ್ಚುವರಿ ವೆಚ್ಚವಾದ ಸುಂಕಗಳನ್ನು ಹೇರುವುದರಿಂದ, ಗಡಿಪ್ರದೇಶದಲ್ಲಾಗುವ ನಿಧಾನಗತಿಯಿಂದಾಗಿ ಮತ್ತು ಆ ದೇಶಗಳ ನಡುವಿನ ಭಾಷೆ, ಕಾನೂನಿನ ಪದ್ಧತಿ ಅಥವಾ ಸಂಸ್ಕೃತಿಯ ಕಾರಣದಿಂದ ವೆಚ್ಚವು ಹೆಚ್ಚಾಗುತ್ತದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಇನ್ನೊಂದು ವ್ಯತ್ಯಾಸವೇನೆಂದೆರೆ ಬಂಡವಾಳ ಮತ್ತು ದುಡಿಮೆಯಂತಹ ಉತ್ಪಾದನಾ ಅಂಶಗಳು ದೇಶ-ದೇಶಗಳ ಮಧ್ಯೆಗಿಂತ ದೇಶಗಳೊಳಗೆ ಸಾಮಾನ್ಯವಾಗಿ ಹೆಚ್ಚಿನ ಸಂಚಾರಿಯಾಗಿರುತ್ತದೆ. ಈ ರೀತಿಯಾಗಿ ಅಂತಾರಾಷ್ಟ್ರೀಯ ವ್ಯಾಪಾರವು ಹೆಚ್ಚಾಗಿ ಸರಕು ಮತ್ತು ಸೇವೆಗಳಿಗೆ ನಿರ್ಭಂದಿಸ್ಪಲ್ಪಟ್ಟಿದ್ದು, ಬಂಡವಾಳ, ಶ್ರಮ ಅಥವಾ ಉತ್ಪಾದನೆಯ ಇತರೆ ಅಂಶಗಳಿಗೆ ಕಡಿಮೆ ಪ್ರಮಾಣದಲ್ಲಿ ಸಂಬಂಧಿಸಿರುತ್ತದೆ. ಆಗ ಸರಕು ಮತ್ತು ಸೇವೆಗಳಲ್ಲಿನ ವ್ಯಾಪಾರವು ಉತ್ಪಾದನೆಯ ಅಂಶಗಳೊಂದಿಗೆ ಪರ್ಯಾಯವಾಗಿ ಬಳಸಿಕೊಳ್ಳಲಾಗುತ್ತದೆ. ಉತ್ಪಾದನೀಯ ಅಂಶಗಳನ್ನು ಆಮದುಮಾಡಿಕೊಳ್ಳುವುದರ ಬದಲು, ಒಂದು ದೇಶ ಉತ್ಪಾದನೀಯ ಅಂಶಗಳಿಗೆ ತೀವ್ರತರವಾಗಿ ಉಪಯೋಗವಾಗುವಂತಹ ಮತ್ತು ಈ ರೀತಿಯಾದ ಅಂಶಗಳನ್ನು ಒಟ್ಟುಗೂಡಿಸುವಂತಹ ಸರಕನ್ನು ಆಮದು ಮಾಡಿಕೊಳ್ಳಬಹುದು. ಉದಾಹರಣೆಗೆ ಅಮೇರಿಕವು ಕಾರ್ಮಿಕರಿಗೆ ಅವಶ್ಯವಾಗಿ ಬೇಕಾದಂತಹ ವಸ್ತುಗಳನ್ನು ಚೀನಾದಿಂದ ಆಮದುಮಾಡಿಕೊಳ್ಳುವುದು. ಚೈನಾದಿಂದ ಕೂಲಿಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಬದಲು, ಬದಲಿಗೆ ಅಮೇರಿಕಾವು ಚೀನಾದಿಂದ ಅಲ್ಲಿನ ಕೂಲಿಯಾಳುಗಳು ಉತ್ಪಾದಿಸಿದ ಸರಕನ್ನು ಆಮದುಮಾಡಿಕೊಳ್ಳುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರವು ಅರ್ಥಶಾಸ್ತ್ರದ ಒಂದು ಶಾಖೆಯಾಗಿದ್ದು, ಅಂತಾರಾಷ್ಟ್ರೀಯ ಹಣಕಾಸಿನ ಜೊತೆಗೆ ಅಂತಾರಾಷ್ಟ್ರೀಯ ಅರ್ಥಶಾಸ್ತ್ರ ಎಂಬ ಬೃಹತ್ ಶಾಖೆಯನ್ನಾಗಿ ನಿರ್ಮಿಸಿದೆ.