India Languages, asked by pgspandan369, 1 month ago

ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ
బರೆಯಿರಿ​

Answers

Answered by Anonymous
5

Answer:

ಹೊಸಹಾಡು ಪದ್ಯದ ಸಾರಾಂಶ

ಬದುಕಿಗೆ ಹೊಸ ತಿರುವನ್ನು ನೀಡಬಲ್ಲ, ಹೊಸ ಆಶಯವನ್ನು, ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ. ಹಳೆಯ ಮೌಲ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು. ನಮ್ಮನ್ನು ಬಿಗಿದಿರುವ ಜಾತಿ-ಕುಲ-ಮತ-ಧರ್ಮ ಎಂಬ ಪಾಶಗಳನ್ನು ಕತ್ತರಿಸಿ ಉತ್ಸಾಹದಿಂದ ಹಾಡಬೇಕು. ಆ ಸಮಾನತಾ ಭಾವವು ಯುಗಯುಗಗಳಲ್ಲಿ ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕು. ಆ ಹೊಸ ಹಾಡನ್ನು ಉನ್ನತ ಶಿಖರದ ತುದಿಯಲ್ಲಿ ನಿಂತು ಹಾಡಿದಾಗ ಅದರ ನುಡಿಗುಂಡುಗಳು ದಶದಿಕ್ಕಿಗೂ ಸಿಡಿದು ಜನರಲ್ಲಿ ತುಂಬಿರುವ ಭಯವನ್ನು ಓಡಿಸಬೇಕು.

ಗಂಡೆದೆಯ ಗರ್ಜನೆಗೆ ನಮ್ಮ ದೇಶದ ಕೋಟ್ಯಂತರ ಜನರು ದನಿಗೂಡಿಸಬೇಕು. ಆ ಒಕ್ಕೊರಲಿನ ಏಕತಾಭಾವದ ಪ್ರತಿಧ್ವನಿಯು ಭೂಮಿ-ಆಕಾಶವನ್ನು ಆವರಿಸಬೇಕು. ಜಡತ್ವದಿಂದ ಕೂಡಿರುವ ಜನರು ಎಚ್ಚೆತ್ತು ಅಂಧಕಾರದ ಕತ್ತಲೆಯಿಂದ ಆವರಿಸಲ್ಪಟ್ಟಿರುವ ಬಾನು-ಭೂಮಿಯನ್ನು ಬೆಳಗಬೇಕು. ಪ್ರತಿಯೊಬ್ಬರ ನಡೆ-ನುಡಿಯಲ್ಲಿ ಕ್ರಾಂತಿಯ ಕಿಡಿ ಕೆರಳಬೇಕು.

ಜಯವನ್ನು ಹೊಂದಿದ ಮಾತೆಯೇ ನೀನು ಹೆದರದೆ ಧೈರ್ಯದಿಂದ ತಲೆ ಎತ್ತಿ ನೋಡು. ಹಿಂದಿನ ಪಾಡು ಹಿಂದೆಯೇ ಮುಗಿಯಿತು. ಇದೇ ಮೊದಲು. ಇದಕ್ಕಿಂತ ಮುಂಚೆ ಇಂತಹ ಹಾಡು ಇರಲಿಲ್ಲ. ಆದ್ದರಿಂದ ಇಂದು ಇದೇ ಹೊಸಹಾಡು ಎಂದು ಹೇಳುತ್ತಾ ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ. ಇಂತಹ ಸ್ಫೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು, ಅದು ನಿತ್ಯ ನೂತನವಾಗಿರಬೇಕೆಂಬುದು ಪದ್ಯದ ಆಶಯವಾಗಿದೆ.

Similar questions