Hindi, asked by kiransjadhav2005, 5 hours ago

೩೫. ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ -- ಎ) ದ್ವಿಗು, ಬಿ)ತತ್ಪುರುಷ, ಸಿ) ಕರ್ಮಧಾರಯ, ಡಿ) ದ್ವಂದ್ವ.​

Answers

Answered by poonammishra148218
1

Answer:ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. (೭೯) ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)

Explanation:

Step:1 ಎಸ್.ಮಹೇಶ. ಕನ್ನಡ ದೀವಿಗೆ, ಇವರು ಸಮರ್ಪಿಸುತ್ತಿರುವ ಕನ್ನಡ ರಸಪ್ರಶ್ನೆಗಳು.  ಇಲ್ಲಿ ಕನ್ನಡದಲ್ಲಿ ಬಳಕೆಯಲ್ಲಿರುವ 8 ಸಮಾಸಗಳ ಬಗ್ಗೆ 100 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳನ್ನು ನಿಗದಿಪಡಿಸಲಾಗಿದೆ.  [ಈ ರಸಪ್ರಶ್ನೆಯು ಮುಖ್ಯವಾಗಿ 10ನೆಯ ತರಗತಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಪೂರಕವಾಗಿದೆ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡು; ಕಾಲವಿಳಂಬವಿಲ್ಲದಂತೆ; ಅರ್ಥಕೆಡದಂತೆ ಒಂದೇ ಪದವಾಗುವುದನ್ನು ಹೀಗೆನ್ನುವರು:

Step:2 ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದನ್ನು ಸಮಾಸಗಳು ಎನ್ನುತ್ತಾರೆ.ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ 'ತತ್ಪುರುಷ ಸಮಾಸ' ಎನ್ನುತ್ತಾರೆ  ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ- ನೀಲವಾದ + ಉತ್ಪಲ = ನೀಲೋತ್ಪಲ[5] (ನೀಲಕಮಲ) ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ) ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ) ಬೃಹತ್ತಾದ + ವೃಕ್ಷ = ಬೃಹದ್ವೃಕ್ಷ (ದೊಡ್ಡಗಿಡ) ನೀಲವಾದ + ಶರಧಿ = ನೀಲಶರಧಿ ನೀಲವಾದ + ಸಮುದ್ರ = ನೀಲಸಮುದ್ರ ಶ್ವೇತವಾದ + ವರ್ಣ = ಶ್ವೇತವರ್ಣ ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ) ಪೀತವಾದ + ವಸ್ತ್ರ = ಪೀತವಸ್ತ್ರ ಪೀತವಾದ + ಅಂಬರ = ಪೀತಾಂಬರ ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ ಮೇಲಿನ ಕನ್ನಡ, ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.

Step:3 ಕರ್ಮಧಾರಯ ಸಮಾಸದಲ್ಲಿ ಉಪಮಾನೋಪಮೇಯಭಾವ ಸಂಬಂಧದಿಂದಲೂ ಪೂರ್ವೋತ್ತರ ಪದಗಳಿರುತ್ತವೆ. ತಾವರೆಯಂತೆ + ಕಣ್ಣು = ತಾವರೆಗಣ್ಣು (ಉಪಮಾನಪೂರ್ವಪದ ಕರ್ಮಧಾರಯ) ಪುಂಡರೀಕದಂತೆ + ಅಕ್ಷಗಳು = ಪುಂಡರೀಕಾಕ್ಷಗಳು ( - ,, - )

ಉಪಮಾನವು ಉತ್ತರಪದದಲ್ಲಿಯೂ ಇರುವುದುಂಟು. ಅಡಿಗಳು + ತಾವರೆಯಂತೆ = ಅಡಿದಾವರೆ ಮುಖವು + ಕಮಲದಂತೆ = ಮುಖಕಮಲ ಪಾದಗಳು + ಕಮಲಗಳಂತೆ = ಪಾದಕಮಲ ಕರವು + ಕಮಲದಂತೆ = ಕರಕಮಲ

ಕೆಲವು ಕಡೆ ಅವಧಾರಣೆಯ ಎಂದರೆ ನಿರ್ಧರಿಸಿ ಹೇಳುವ ಅರ್ಥದ ಏ ಎಂಬ ಸ್ವರವು ಅಂತ್ಯದಲ್ಲಿ ಉಳ್ಳಪದವು ಪೂರ್ವಪದವಾಗಿ ಸಮಾಸವಾಗುವುದುಂಟು. ಇದಕ್ಕೆ ಅವಧಾರಣಾಪೂರ್ವಪದಕರ್ಮಧಾರಯ ಸಮಾಸ ಎನ್ನುವರು. ಫಲವೇ + ಆಹಾರ = ಫಲಾಹಾರ ನಖವೇ + ಆಯುಧ = ನಖಾಯುಧ ವಿಶ್ವವೇ + ರಂಗಭೂಮಿ = ವಿಶ್ವರಂಗಭೂಮಿ ಸುಖವೇ + ಜೀವನ = ಸುಖಜೀವನ ವಾತವೇ + ಆಹಾರ = ವಾತಾಹಾರ - ಇತ್ಯಾದಿ. (vi) ಇನ್ನು ಕೆಲವು ಕಡೆ ಸಂಭಾವನೆ ಮಾಡಿದಾಗ ಅಂದರೆ ಊಹೆ ಮಾಡಿದಾಗ (ಇಂಥ ಹೆಸರಿದೆ ಎಂದು ಊಹೆ ಮಾಡಿ ಹೇಳಿದಾಗ) ಕರ್ಮಧಾರಯ ಸಮಾಸವಾಗುವುದು. ಇವು ಸಂಭಾವನಾಪೂರ್ವಪದ ಕರ್ಮಧಾರಯ ಸಮಾಸಗಳೆನಿಸುವುವು. ಕಾವೇರೀ ಎಂಬ ನದಿ = ಕಾವೇರೀನದಿ. ನಳನೆಂಬರಾಜ = ನಳರಾಜ. ಸ್ತ್ರೀ ಎಂಬ ದೇವತೆ = ಸ್ತ್ರೀದೇವತೆ. ಭೂಮಿಯೆಂಬ ಮಾತೆ = ಭೂಮಾತೆ. ವಿಂಧ್ಯವೆಂಬ ಪರ್ವತ = ವಿಂಧ್ಯಪರ್ವತ. ಈಗ ಕೆಳಗೆ ಕೆಲವೊಂದು ಕರ್ಮಧಾರಯ ಸಮಸ್ತಪದಗಳ ಪಟ್ಟಿಯನ್ನೇ ಕೊಟ್ಟಿದೆ. ಇವೆಲ್ಲ ಹಳಗನ್ನಡಕಾವ್ಯಗಳಲ್ಲಿ ವಿಶೇಷವಾಗಿ ಪ್ರಯೋಗಿಸಲ್ಪಡುತ್ತವೆ. ಅಲ್ಪ ಸ್ವಲ್ಪ ಹಳಗನ್ನಡ ಗದ್ಯ ಪದ್ಯ ಭಾಗಗಳನ್ನು ಓದುವ ನೀವು ಇವುಗಳ ಸ್ಥೂಲಪರಿಚಯ ಮಾಡಿಕೊಂಡರೆ ಸಾಕು.

To learn more about similar question visit:  

https://brainly.in/question/14521459?referrer=searchResults

https://brainly.in/question/14521459?referrer=searchResults

#SPJ1

Similar questions