ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ
Answers
ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಮಹಾಪ್ರಾಣ ಎನ್ನುವರು
ಒಟ್ಟು 10 ಮಹಾಪ್ರಾಣಾಕ್ಷರ ಗಳಿವೆ.
ಅವುಗಳು
ಖ ಛ ಠ ಥ ಫ ಘ ಝ ಢ ಧ ಭ
━━━━━━━━━━━━━━━━━━━━━━━━━━━━━━
ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(34) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು (Consonants) ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ
1. ವರ್ಗೀಯ ವ್ಯಂಜನಗಳು (25)
2. ಅವರ್ಗೀಯ ವ್ಯಂಜನಗಳು (9)
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(25) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಇವುಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ.
ಅವುಗಳು
ಕ-ವರ್ಗ, = ಕ, ಖ, ಗ, ಘ, ಙ.
ಚ-ವರ್ಗ, = ಚ, ಛ, ಜ, ಝ, ಞ.
ಟ-ವರ್ಗ ,= ಟ, ಠ, ಡ, ಢ, ಣ.
ತ-ವರ್ಗ, = ತ, ಥ, ದ, ಧ, ನ.
ಪ-ವರ್ಗ,= ಪ, ಫ, ಬ, ಭ, ಮ.
━━━━━━━━━━━━━━━━━━━━━━━━━━━━━━
ವರ್ಗೀಯ ವ್ಯಂಜನಗಳಲ್ಲಿ 3 ವಿಧಗಳಿವೆ.
1) ಅಲ್ಪಪ್ರಾಣ
1) ಅಲ್ಪಪ್ರಾಣ 2) ಮಹಾಪ್ರಾಣ
1) ಅಲ್ಪಪ್ರಾಣ 2) ಮಹಾಪ್ರಾಣ 3) ಅನುನಾಸಿಕ
ಅಲ್ಪಪ್ರಾಣ :
ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಅಲ್ಪಪ್ರಾಣ ಎನ್ನುವರು.
ಅಲ್ಪಪ್ರಾಣಗಳು ಒಟ್ಟು 10.
ಅವುಗಳು
ಕ ಚ ಟ ತ ಪ ಗ ಜ ಡ ದ ಬ
ಮಹಾಪ್ರಾಣ:
ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಮಹಾಪ್ರಾಣ ಎನ್ನುವರು
ಒಟ್ಟು 10 ಮಹಾಪ್ರಾಣಾಕ್ಷರ ಗಳಿವೆ.
ಅವುಗಳು
ಖ ಛ ಠ ಥ ಫ ಘ ಝ ಢ ಧ ಭ
ಅನುನಾಸಿಕಗಳು:
‘ ನಾಸಿಕ ’ ಎಂದರೆ ಮೂಗು. ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ
ಅನುನಾಸಿಕಗಳು ಎನ್ನುವರು. ಒಟ್ಟು 5 ಅನುನಾಸಿಕಗಳು ಇವೆ.
ಙ ಞ ಣ ನ ಮ
ಅವರ್ಗಿಯ ವ್ಯಂಜನಗಳು:
ಒಂದು ಗುಂಪಿಗೆ ಸೇರಿಸಲು ಬಾರದ ವ್ಯಂಜನಗಳಿಗೆ ಅವರ್ಗಿಯ ವ್ಯಂಜನಗಳು ಎನ್ನುವರು. ಇವುಗಳು ‘ಯ’ ಇಂದ ‘ಳ’ ವರೆಗಿನ 9 ಅಕ್ಷರಗಳಿವೆ
ಯ ರ ಲ ವ ಶ ಷ ಸ ಹ ಳ
━━━━━━━━━━━━━━━━━━━━━━━━━━━━━━
━━━━━━━━━━━━━━━━━━━━━━━━━━━━━━