World Languages, asked by supreeths2008, 1 month ago

ಆದೇಶ ಸಂಧಿಯಲ್ಲಿ 'ಪ' ವ್ಯಂಜನದ ಬದಲಾಗಿ ಈ ವ್ಯಂಜನವು ಆದೇಶವಾಗಿ ಬರುವುದು.

Answers

Answered by sgokul8bkvafs
0

Answer:

Explanation:

ಆದೇಶ ಸಂಧಿ

ವಿಕಿಪೀಡಿಯ ಇಂದ

Jump to navigationJump to search

ಸತಾಯಿಸು ಯಾವ ಸಂಧಿಗಳಲ್ಲಿ *ಲೋಪ ಆಗಮ ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಸಂಧಿ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

ಪರಿವಿಡಿ

೧ ಆದೇಶ ಸಂಧಿಕಾರ್ಯ

೧.೧ ವ್ಯಂಜನ ಸಂಧಿ ನಿಯಮ

೨ ಕನ್ನಡ ವ್ಯಂಜನ ಸಂಧಿ ಲಕ್ಷಣ

೩ ಉದಾಹರಣೆಗಳು

೩.೧ ಒಂದು

೩.೨ ಎರಡು

೩.೩ ಮೂರು

೩.೪ ನಾಲ್ಕು

೪ ಚರ್ಚೆ

೫ ಉಲ್ಲೇಖ

ಆದೇಶ ಸಂಧಿಕಾರ್ಯ

ಆದೇಶ ಸಂಧಿಯು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.

ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮ ಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.

ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ'. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.

ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.

ವ್ಯಂಜನ ಸಂಧಿ ನಿಯಮ

ಎರಡು ವಿಧ :

ಸ್ವರ+ವ್ಯಂಜನ. ಉದಾಹರಣೆಗೆ, ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ

ವ್ಯಂಜನ + ವ್ಯಂಜನ. ಉದಾಹರಣೆಗೆ,ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.yyuuu

ಕನ್ನಡ ವ್ಯಂಜನ ಸಂಧಿ ಲಕ್ಷಣ

ವ್ಯಂಜನ ವರ್ಣಗಳಿಗೆ ಬರುವ ಆದೇಶ ವರ್ಣಗಳ ಕ್ರಿಯೆಯನ್ನು ‘ವ್ಯಂಜನ ಸಂಧಿಕಾರ್ಯ’ವೆನ್ನಬಹುದು.

ವ್ಯಂಜನ ಸಂಧಿ ನಿಯಮ - ಸ್ವರ ಮತ್ತು ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ವ್ಯಂಜನ ಸಂಧಿಯಾಗುತ್ತದೆ. ಅಥವಾ ಎರಡೂ ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿಯಾಗುತ್ತದೆ. ಉದಾ: ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ. ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.

ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದೇ ‘ಆದೇಶ ಸಂಧಿ’ಯೆನಿಸುವುದು. ಆದೇಶ ಸಂಧಿಯಲ್ಲಿ ಈ ಕೆಳಗಿನ ವಿಭಾಗ ಕ್ರಮ ಮಾಡಬಹುದು.

ಉತ್ತರ ಪದದ ಆದಿಯಲ್ಲಿ ಕ, ತ, ಪ, ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗಿ ಬರುವುವು. ಉದಾ: ಹಳ+ಕನ್ನಡ = ಹಳಗನ್ನಡ = ‘ಕ’ಕಾರಕ್ಕೆ ‘ಗ’ಕಾರ ಆದೇಶ; ಬಾಯ್+ತೆರೆ = ಬಾಯ್ದೆರೆ = ‘ತ’ಕಾರಕ್ಕೆ ‘ದ’ಕಾರ ಆದೇಶ; ಕಣ್+ಪೊಲಂ = ಕಣ್ಬೊಲಂ = ‘ಪ’ಕಾರಕ್ಕೆ ‘ಬ’ಕಾರ ಆದೇಶ; ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಕಳೆಗೂಡಿ, ತಲೆಗಟ್ಟು, ಬೆಸೆಕೋಲ್, ಒಳಕಯ್, ಎಳೆಗರು, ಮೆಗೆಲಸ, ಮೈದೊಳೆ, ಸುಖಬಡು, ಮೆರೆದಪ್ಪು, ಬೆಂಬತ್ತು

ಉತ್ತರಪದ ಆದಿಯಲ್ಲಿರುವ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗಿ ಬರುವುದು. ಉದಾ: ಕೆನೆ+ಪಾಲು = ಕೆನೆವಾಲು = ‘ಪ’ಕಾರಕ್ಕೆ ‘ವ’ಕಾರ ಆದೇಶ; ತಲೆ+ಬಾಗು = ತಲೆವಾಗು = ‘ಬ’ಕಾರಕ್ಕೆ ‘ವ’ಕಾರ ಆದೇಶ; ಎಲೆ+ಮನೆ = ಎಲೆವನೆ = ‘ಮ’ಕಾರಕ್ಕೆ ‘ವ’ಕಾರ ಆದೇಶ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಮೆಲ್ವಾಸು, ಬೆವರ್ವನಿ, ಎಳವಳ್ಳಿ, ನೀರ್ವೊನಲ್, ಎಳವರೆ, ಬೆಮರ್ವನಿ, ಬೇರ್ವೆರಸಿ, ನೆಲೆವನೆ, ಕೆನೆವಾಲ್, ಕೈವಿಡಿ, ಪೊರವೀಡು

ಪೂರ್ವಪದದ ಅಂತ್ಯದಲ್ಲಿ ಯ, ಲ, ಗಳ ಹೊರತು ಬೇರೆ ವ್ಯಂಜನಗಳಿದ್ದಾಗ ಉತ್ತರಪದದ ಆದ್ಯಕ್ಷರವಾದ ‘ಸ’ ಕಾರಕ್ಕೆ ಸಾಮಾನ್ಯವಾಗಿ ಚ, ಛ, ಜ ಗಳು ಆದೇಶ. ಉದಾ: ಇನ್+ಸರ = ಇನ್+ಚರ = ಇಂಚರ; ಮುನ್+ಸೆರಂಗು = ಮುನ್+ಜೆರಂಗು = ಮುಂಜೆರಗು; ಇರ್+ಸಾಸಿರ = ಇರ್+ಛಾಸಿರ = ಇರ್ಛಾಸಿರ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಬಾಯ್ಸವಿ, ಬೆಳ್ಸರಿ, ಕಣ್ಜೋಲಂ, ನುಣ್ಚರ, ಮುಂಜೊಡರ್, ತಣ್ಜೊಡರ್, ಮುಂಜೂರ್, ಪೊಂಜುರಿಗೆ

ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿ, ಆಗಮಸಂಧಿ ಆಗುವಂತೆ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯಕ್ಕೆ ಉದಾಹರಣೆಗಳು.

ಮಳೆ + ಕಾಲ = ಮಳೆಗಾಲ (ಮಳೆ + ಗ್ಆಲ)

ಚಳಿ + ಕಾಲ = ಚಳಿಗಾಲ (ಚಳಿ +ಗ್ಆಲ)

ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್ಆವರೆ)

ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್ಎಟ್ಟು)

ಕಣ್ + ಪನಿ = ಕಂಬನಿ (ಕಂ + ಬ್ಅನಿ)

ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ. ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ. ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆ ದ ಕಾರ ಬಂದಿದೆ. [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ. ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು. ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.

ಉದಾಹರಣೆಗಳು

ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು. ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರವುದು?

ಒಂದು

ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಕ ತ ಪ" ವ್ಯಂಜನಗಳಿಗೆ ಕ್ರಮವಾಗಿ "ಗ ದ ಬ" ವ್ಯಂಜನಗಳು ಆದೇಶವಾಗಿ ಬರುವುವು. ಉದಾಹರಣೆಗೆ :

ಹುಲ್ಲು + ಕಾವಲು = ಹುಲ್ಲು + ಗ್ ಆವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)

ಹಳ + ಕನ್ನಡ = ಹಳ + ಗ್ ಅನ್ನಡ = ಹಳಗನ್ನಡ (ಕಕಾರಕ್ಕೆ ಗಕಾರಾದೇಶ)

ಕಳೆ + ಕೂಡಿ = ಕಳೆ + ಗ್ ಊಡಿ = ಕಳೆಗೂಡಿ (ಕಕಾರಕ್ಕೆ ಗಕಾರಾದೇಶ)

ಎಳೆ + ಕರು = ಎಳೆ + ಗ್ ಅರು = ಎಳೆಗರು (ಕಕಾರಕ್ಕೆ ಗಕಾರಾದೇಶ)

ಮನೆ + ಕೆಲಸ = ಮನೆ + ಗ್ ಎಲಸ = ಮನೆಗೆಲಸ (ಕಕಾರಕ್ಕೆ ಗಕಾರಾದೇಶ)

ಮೈ + ತೊಳೆ = ಮೈ + ದ್ ಒಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)

ಮೇರೆ + ತಪ್ಪು = ಮೇರೆ + ದ್ ಅಪ್ಪು = ಮೇರೆದಪ್ಪು (ತಕಾರಕ್ಕೆ ದಕಾರಾದೇಶ)

ಕಣ್ + ಪನಿ = ಕಣ್ + ಬ್ ಅನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)

ಬೆನ್ + ಪತ್ತು = ಬೆನ್ + ಬ್ ಅತ್ತು = (ಬೆಂಬತ್ತು) (ಪಕಾರಕ್ಕೆ ಬಕಾರಾದೇಶ)

ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು. ಇಂತಹವುಗಳು ಪ್ರಕೃತಿ ಭಾವಗಳು

ಮನೆ + ಕಟ್ಟು = ಮನೆಕಟ್ಟು

ತಲೆ + ಕಟ್ಟು = ತಲೆಕಟ್ಟು

Similar questions