ಹೂವನು ಸಂಧಿ ಬಿಡಿಸಿ ಹೆಸರಿಸಿ
Answers
Answer:
Explanation:
ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮ ಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ'. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.
ವ್ಯಂಜನ ಸಂಧಿ ನಿಯಮ
ಎರಡು ವಿಧ :
ಸ್ವರ+ವ್ಯಂಜನ. ಉದಾಹರಣೆಗೆ, ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ
ವ್ಯಂಜನ + ವ್ಯಂಜನ. ಉದಾಹರಣೆಗೆ,ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.yyuuu
ಕನ್ನಡ ವ್ಯಂಜನ ಸಂಧಿ ಲಕ್ಷಣ
ವ್ಯಂಜನ ವರ್ಣಗಳಿಗೆ ಬರುವ ಆದೇಶ ವರ್ಣಗಳ ಕ್ರಿಯೆಯನ್ನು ‘ವ್ಯಂಜನ ಸಂಧಿಕಾರ್ಯ’ವೆನ್ನಬಹುದು.
ವ್ಯಂಜನ ಸಂಧಿ ನಿಯಮ - ಸ್ವರ ಮತ್ತು ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ವ್ಯಂಜನ ಸಂ