ನಾಡಿನ ಹೊರಗಿನ ಮತ್ತು ಒಳಗಿನ ಕಳ್ಳರು ಯಾರು?
Answers
Answer:
ದಿನಾ ಸಾಯೋರಿಗೆ ಅಳೋರ್ ಯಾರು? ... ಕಣ್ಣಿಗೆ ಸುಣ್ಣ; ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು
Answer:
ಎಂದಿಗೆ
ಪದ್ಯ ಭಾಗ 8 – ಎಂದಿಗೆ
ಡಾ. ಬಿ.ಸಿ. ರಾಮಚಂದ್ರಶರ್ಮ
ಸಾರಾಂಶ : ನಮ್ಮ ನಾಡಿನ ನೂರುಕೋಟಿ ಹೆಣ್ಣು ಗಂಡುಮಕ್ಕಳಿಗೆ ಹುಟ್ಟಿನಿಂದ ಅಂಟಿಕೊಂಡು ಬಂದ ಚಿತ್ತದಾಸ್ಯ(ದಾಸ್ಯಮನೋಭಾವ) ಕಳೆಯುವುದು ಯಾವಾಗ? ಗತವೈಭವ(ಹಿಂದಿನಕಾಲದ ಸಮೃದ್ಧಿಯ ವಿಚಾರಗಳು)ವನ್ನೇ ನೆನೆಯುತ್ತಾ ಭವಿಷ್ಯತ್ತನ್ನು ಬಲಿಕೊಡುತ್ತಿವೆಯಲ್ಲಾ! ಯುಗಯುಗಗಳಲ್ಲಿ ನಮ್ಮ ನಾಡು ಮೆರೆದ ಗಳಿಸಿದ ಹಿರಿಮೆ ಗರಿಮೆಗಳನ್ನೆಲ್ಲ ಮತ್ತೆ ಮತ್ತೆ ಪದೇಪದೆ ನೆನೆಪು ಮಾಡಿಕೊಳ್ಳುತ್ತಾ ದವಡೆ ಸವೆದಿದೆ. (ಆಕಳು, ಮೇಕೆ ಮೊದಲಾದವುಗಳು ಹುಲ್ಲನ್ನು ತಿಂದು ಮೆಲುಕು ಹಾಕುವಂತೆ ಗತವೈಭವವನ್ನು ಮೆಲುಕುಹಾಕುತ್ತಾ ಇದ್ದೇವೆ ಎಂಬ ಭಾವ) ಹೀಗೆ ಗತವೈಭವವನ್ನು ಮೆಲುಕು ಹಾಕುವುದನ್ನೇ ಮೆಚ್ಚುವ ಜನತೆಯೂ ಇದೆ ಎಂಬುದನ್ನು ಕವಿಯು ಚಿತೆಯಮೇಲೆ ಮಲಗಿದ್ದ ಹೆಣದ ಸುತ್ತ ಕುಳಿತ ಜನ ಅದರ ಹಿನ್ನೆಲೆ ಹಿರಿಮೆ ಗರಿಮೆ ನೆನೆದು ತಲೆದೂಗುತ್ತಿದೆ. ಪ್ರತಿನಿತ್ಯ ಇದರ ರುದ್ರನರ್ತನ/ ಹುಚ್ಚುಕುಣಿತಕ್ಕೆ ತಾಳಹಾಕುವ ಜನ ಇದ್ದಾರೆ ಎಂದಿದ್ದಾರೆ.
ಯಾವ ಜನ್ಮದ ಬಲವೋ, ಉಗ್ರತಪಸ್ಸಿನ ಮಹಿಮೆಯೋ ಅಂತೂ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಲಕ್ಷಾಂತರ ಮಂದಿ ಸುರಿದ ರಕ್ತದ ಬಲಿದಾನದಿಂದ ಈ ಭೂಮಿ ಸಮೃದ್ಧಿಯಾಯಿತು. ಆದರೆ ಅದನ್ನೆಲ್ಲಾ ಹಾಳುಮಾಡಲೆಂದೇ ಸ್ವಾರ್ಥ ದುರಾಸೆಗಳಿಂದ ಕೂಡಿದ ಜನ ಅಧಿಕಾರಕ್ಕೆ ಬಂದಿದ್ದಾರೆ. ಹಿಂದೆ ದೇವಾಸುರರು ಸೇರಿ ಸಮುದ್ರಮಥನ ಮಾಡಿದಾಗ ಮೊದಲು ವಿಷ ಬಂತು ಅಂತೆಯೇ ಸ್ವಾತಂತ್ರಹೋರಾಟದಿಂದ ಮೋಸ , ಸುಳ್ಳು , ಲಂಚಕೋರತನ , ಭ್ರಷ್ಟಾಚರಿಗಳು ಹುಟ್ಟಿಕೊಂಡಿದ್ದಾರೆ ಇದಕ್ಕೆ ತಡೆ ಇಲ್ಲವೇ? ಎಂದು ಕೇಳುತ್ತಾ. ಅಮೃತ ಇನ್ನೂ ಏಕೆ ಬರಲಿಲ್ಲ. ಎಂದು ಪ್ರಶ್ನಿಸುತ್ತಾರೆ.
ಸ್ವಾತಂತ್ರಬಂದು ಕಡಲುಗಳ್ಳರ ಕಾಟ ನಿಂತರೂ ಅಧಿಕಾರಮದಾಂಧರಾದ ಒಡಲುಗಳ್ಳರು ಇನ್ನೂ ಇಲ್ಲೇ ಇದ್ದಾರೆ. ರೈತರು ಬೆಳೆದ ಬೆಳೆಯನ್ನು ಸುಲಿಗೆಮಾಡುವ ರಕ್ಕಸರಿವರು. ಮಾನವರ ಅಸ್ಥಿಪಂಜರದ ಮೇಲೆ ಅಡಿಗಲ್ಲು ಇಟ್ಟು ತಮ್ಮ ಭವ್ಯಭವನಗಳನ್ನು ನಿರ್ಮಿಸುತ್ತಾರೆ. ಅಳುವ ಮಗುವನ್ನು ಸಮಾಧಾನಪಡಿಸುವಂತೆ ಬಂದು ಕತ್ತು ಹಿಸುಕಿ ಹೋಗುವ ಮನೋಭಾವದವರು. ಸ್ಮಶಾನದಲ್ಲಿಯೆ ಸುಖಪಡುವ ದುಷ್ಟರು ಈ ನಾಡಿನಲ್ಲಿದ್ದಾರೆ.
ಇಂತಹ ನಾಡಿನಲ್ಲಿ ದುಷ್ಟ ಆಡಳಿತಕ್ಕೆ ಸಿಕ್ಕು ನಲುಗುವ ಜನ ಬೂಟುಕಾಲ ಏಟುತಿಂದೂ ಪ್ರತಿಭಟಿಸದೆ ಇದ್ದಾರಲ್ಲಾ ಎಂಬುದನ್ನೇ ಕವಿ ಕಲ್ಲಿನೇಟು ತಿಂದ ಕುನ್ನಿಮರಿಯ ಕೂಗು ಕೇಳದಲ್ಲೋ ಘರ್ಜನೆ ಎಂದಿದ್ದಾನೆ. ಅಂದು ಜಮದಗ್ನಿಯ ಮಗ ತನ್ನ ತಂದೆಯನ್ನು ಕೊಂದು ಆಶ್ರಮವನ್ನು ದ್ವಂಸಮಾಡಿದ ಕ್ಷತ್ರಿಯಕುಲವನ್ನೇ 21ಬಾರಿ ಭೂಮಂಡಲವನ್ನು ಸುತ್ತಿ ನಾಶಮಾಡಿದಂತೆ ಏಕೆ ಕೆರಳುತ್ತಿಲ್ಲ. ಆ ಪರಶುರಾಮನಂತೆ ಕೊಡಲಿ ಹಿಡಿದು ಅನ್ಯಾಯದ ವಿರುದ್ಧ ದನಿ ಎತ್ತುತ್ತಿಲ್ಲವೇಕೆ? ಕತ್ತಲೆಯ ಉದರದಲ್ಲಿ ಅನ್ಯಾಯಕ್ಕೆ ಒಳಗಾದ ಜನ ಜೀವನದಲ್ಲಿ ಬೆಳಕು ಮೂಡುವುದೆಂದಿಗೆ? ಈ ಜನರಿಗೆ ಹುಟ್ಟಿನಿಂದಲೇ ಹುಟ್ಟಿಬಂದ ಮಾನಸಿಕ ದಾಸ್ಯಮನೋಭಾವ (ಸೇವಕ/ ದಾಸ ಎಂಬ ಮನಸು/ ಹುಟ್ಟಿರುವುದೇ ಸೇವಕನಾಗಲಿಕ್ಕೆ ಎಂಬ ಭಾವನೆ)ಅಳಿಯುವುದು ಎಂದಿಗೆ? ನಾಡಿನ ಜನ ಮಾನಸದಲ್ಲಿ ಕ್ರಾಂತಿಸೂರ‍್ಯ ಮೂಡುವುದೆಂದಿಗೆ? ಎಂದು ಪ್ರಶ್ನಿಸುತ್ತಾರೆ.
ಸಂದರ್ಭ ಸೂಚಿಸಿ ವಿವರಿಸಿ :
೧. ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ನಮ್ಮನಾಡಿನ ಜನಮಾನಸದಲ್ಲಿ ಅಡಗಿರುವ ಹುಟ್ಟಿನೊಂದಿಗೆ ಅಂಟಿಕೊಂಡು ಬಂದಿರುವ ಚಿತ್ತದಾಸ್ಯವನ್ನು ಕಂಡುಕವಿ ಈ ಮಾತನ್ನು ಹೇಳುತ್ತಾರೆ
ಸ್ವಂತ ತಿಳುವಳಿಕೆ ಇಲ್ಲದೆ ಬದುಕುತ್ತಿರುವ, ಇತರರ ಆದೇಶವನ್ನು ಪ್ರಶ್ನಿಸದೆ ಬದುಕುತ್ತಿರುವ ಕೋಟಿಕೋಟಿ ಜನರಲ್ಲಿ ಈ ಬಗೆಯ ಚಿತ್ತದಾಸ್ಯ ಇದೆ ಇದು ಎಂದಿಗೆ ಕೊನೆಗೊಳ್ಳುತ್ತದೆ ಎಂದು ಪ್ರಶ್ನಿಸುತ್ತಾರೆ.
೨. ಅಳಿದ ಸಿರಿಯ ಅಣವಾಡು ಒಂದೆ ಸಮನೆ ನಡೆದಿದೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ನಾಡಿನ ಗತವೈಭವವನ್ನೇ ಸದಾ ನೆನೆಯುತ್ತಾ , ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹವನ್ನು ಹೊರತೆಗೆದು ಅವನಿಗಾಗಿ ಅಳುವ ರೀತಿ ಇದು ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ. ಹೀಗೆ ಹಿಂದಿನ ಘಟನೆಗಳನ್ನೇ ಮೆಲುಕುಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನ ಕೊಡಬೇಕಲ್ಲವೇ ಎಂದು ಕೇಳುತ್ತಾರೆ.
೩. ಅಂತು ಬಂದಿತು ಬಂದೆ ಬಂದಿತು ಎಂಥಾ ಎಂಥಾ ಬಿಡುಗಡೆ,
ಈ ಮಾತನ್ನು ಡಾ.ಬಿ.ಸಿ.ರಾಮಚಂದ್ರಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ.
ಯಾರದೋ ತಪಸಿನ ಫಲ, ಯಾರದೋ ಯೋಗದ ಬಲ , ಅಮೃತಕ್ಕಾಗಿ ಕ್ಷೀರಸಮುದ್ರ ಕಡೆದಂತೆ ಸ್ವಾತಂತ್ರ್ಯಕ್ಕಾಗಿ ರಕ್ತಹರಿಸಿ ಬಡಿದಾಡಿ ಕಡೆಗೂ ಸ್ವಾತಂತ್ರಗಳಿಸಿತು ಆದರೆ ಅಡ್ಡಿ ಆತಂಕವಿಲ್ಲದೆ ಮಾಡುವ ಮೋಸ , ವಂಚನೆ, ಸುಳ್ಳು ಸುಲಿಗೆ ಇವುಗಳಿಗೆ ಸ್ವಾತಂತ್ರ ಬಂದಿದೆ. ಇಂತಹ ಸ್ವಾತಂತ್ರ್ಯ ಬೇಕಿತ್ತೇ? ಇದಕ್ಕಾಗಿಯೇ ಎಷ್ಟೋ ಜೀವ ಬಲಿದಾನವಾಗಬೇಕಿತ್ತೇ. ಬಯಸಿದ್ದು ಎಂತಹ ಸ್ವಾತಂತ್ರ್ಯ ಎಂದು ಹೇಳುವಲ್ಲಿ ಈ ಮಾತು ಬಂದಿದೆ.