ಸತಿಪದ್ದತಿ ಭಾರತದಲ್ಲಿ ಯಾವಾಗ ರದ್ದುಗೊಂಡಿದು
Answers
Answer:
ಹಾಸನ: ಸತಿ ಸಹಗಮನ ಪದ್ಧತಿ ತೊಲಗಿದ್ದರೂ ಮಹಿಳೆಯರ ಸ್ಥಿತಿ ಇಂದಿಗೂ ಸುಧಾರಣೆಯಾಗಿಲ್ಲ ಎಂದು ಸಾಹಿತಿ ಜ.ನ.ತೇಜಶ್ರೀ ವಿಷಾದ ವ್ಯಕ್ತಪಡಿಸಿದರು.
ನಗರದ ಸರಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ(ಸ್ವಾಯತ್ತ) ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆ ಸಬಲಳಾಗಿದ್ದು ಆಕೆ ಏನೇ ಸಾಧನೆ ಮಾಡಬೇಕಿದ್ದಲ್ಲಿ ಪುರುಷನ ಮೊರೆ ಹೋಗಬೇಕಾಗಿದೆ. ಆದ ಕಾರಣ ಸ್ತ್ರೀ ಪುರುಷನ ಕೈಗೊಂಬೆಯಂತೆ ವರ್ತಿಸುತ್ತಿದ್ದು ಪುರುಷನನ್ನು ಅವಲಂಬಿಸಿರುವುದು ಕಣ್ಮುಂದೆ ಗೋಚರಿಸುತ್ತಿದೆ ಎಂದು ಹೇಳಿದರು.
ಸಮಾಜದಲ್ಲಿ ಬಾಲ್ಯವಿವಾಹಗಳಂತಹ ಕೃತ್ಯಗಳು ನಡೆಯುತ್ತಲೇ ಇವೆ. 21ನೇ ಶತಮಾನದಲ್ಲಿ ನಾವುಗಳು ಜೀವಿಸುತ್ತಿದ್ದರೂ ನಮ್ಮ ದೇಶದಲ್ಲಿ ಬಾಲ್ಯವಿವಾಹದ ಪ್ರಮಾಣ ಕೇವಲ ಇಳಿಮುಖವಾಗಿದೆ ಹೊರತಾಗಿ ಸಂಪೂರ್ಣವಾಗಿ ನಿಷೇಧವಾಗಿಲ್ಲ. ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ ಎಂದಾದರೂ ಎಲ್ಲ ಆಸ್ಪತ್ರೆಗಳಲ್ಲಿ ಈ ಕಾರ‍್ಯ ನಡೆಯುತ್ತಲೇ ಇದೆ. ಪೋಷಕರು ಹೆಣ್ಣು ಮಗು ಜನಿಸಿದರೆ ಬೇಸರ ಪಡುವ ಸ್ಥಿತಿ ಇಂದಿಗೂ ಮಾಸಿಲ್ಲ. ಈ ಅನಿಷ್ಟ ಪದ್ಧತಿಗಳು ತೊಲಗಿದಾಗ ಮಹಿಳಾ ದಿನಾಚರಣೆ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದು ತಿಳಿಸಿದರು.