ಶಬ್ದ ಮಾಲಿನ್ಯವನ್ನು ತಡೆಯುವುದು ಹೇಗೆ
Answers
Answer:
ಶಬ್ದ ಮಾಲಿನ್ಯ ಮಾನವ ಅಥವಾ ಪ್ರಾಣಿಗಳ ಜೀವನದ ಮೇಲೆ ದುಃಪರಿಣಾಮ ಬೀರಿ ಅವುಗಳ ಜೀವನ ಚಟುವಟಿಕೆಯ ಸಮತೋಲಕ್ಕೆ ಭಂಗ ತರುವಂಥ, ಮನುಷ್ಯ-ಪ್ರಾಣಿ-ಯಂತ್ರಗಳಿಂದ ಹೊಮ್ಮಿ ಬರುವ ಸಪ್ಪಳಕ್ಕೆ 'ಶಬ್ದ ಮಾಲಿನ್ಯ' ಎನ್ನಲಾಗಿದೆ. ಸಾಮಾನ್ಯವಾಗಿ ಸಾರಿಗೆ, ಅದರಲ್ಲೂ ವಿಶೇಷವಾಗಿ ಮೋಟಾರ್ ವಾಹನಸಂಚಾರದಿಂದ ಹೊಮ್ಮುವ ಶಬ್ದ ಈ ಮಲಿನತೆಗೆ ತನ್ನ ಕಾಣಿಕೆ ನೀಡುತ್ತದೆ.
ಒಂದು ಬೋಯಿಂಗ್ 747-400 ವಿಮಾನ ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೂ ಮುನ್ನ ಮನೆಗಳಿಗೆ ಸಮೀಪದಲ್ಲಿ ಹಾದು ಹೋಗುತ್ತಿರುವುದು
ವಿಶ್ವದಾದ್ಯಂತ ಶಬ್ದಮಾಲಿನ್ಯಕ್ಕೆ ಮುಖ್ಯ ಕಾರಣ ಸಾರಿಗೆ ವ್ಯವಸ್ಥೆ - ಎಂದರೆ ವಿವಿಧ ರೀತಿಯ ವಾಹನಗಳ ಸದ್ದು - ವಿಮಾನದ ಸದ್ದು ಹಾಗೂ ರೈಲುಗಳ ಸದ್ದು ಕೂಡ ಇದರಲ್ಲಿ ಸೇರಿರುತ್ತದೆ.[೧][೨]
ಕಳಪೆ ನಗರ ಯೋಜನೆಗಳ ಕಾರಣದಿಂದಾಗಿ ಅಕ್ಕಪಕ್ಕದಲ್ಲೇ ನಾಯಿಕೊಡೆಗಳಂತೆ ಮೇಲೇಳುತ್ತಿರುವ ಕೈಗಾರಿಕೆಗಳು ಮತ್ತು ಮನೆಗಳು, ವಸತಿ ಪ್ರದೇಶಗಳಲ್ಲಿನ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಕಾರ್ ಅಲಾರಮ್, ತುರ್ತು ಸೇವೆಗಾಗಿ ಬಳಸುವ ಸೈರನ್, ಕಚೇರಿ ಪರಿಕರ, ಕಾರ್ಖಾನೆಯ ಯಂತ್ರಗಳು,ನಿರ್ಮಾಣ ಕಾಮಗಾರಿಗಳು, ರಸ್ತೆ, ಚರಂಡಿ ಮುಂತಾದ ನೆಲ ಸಂಬಂಧೀ ದುರಸ್ತಿ ಕಾಮಗಾರಿ, ಬೊಗಳು ನಾಯಿಗಳ ಆರ್ಭಟ, ಸಾಧನ ಸಾಮಗ್ರಿಗಳು, ಯಾಂತ್ರಿಕ ವಿದ್ಯುತ್ ಪರಿಕರಗಳು, ಬೆಳಕು ಬೆಳಗು ದೀಪದ ನಾದ, ಧ್ವನಿ ಮನರಂಜನಾ ಉಪಕರಣಗಳು, ಧ್ವನಿ ವರ್ಧಕಗಳು, ಮತ್ತು ಗಲಾಟೆ ಮಾಡುವ ಜನ-ಇವೆಲ್ಲವೂ ಶಬ್ದ ಮಾಲಿನ್ಯವನ್ನು ಉಂಟುಮಾಡುವ ಇನ್ನಿತರ ಕಾರಣಗಳು .