ಆಯಸ್ಕಾಂತದಲ್ಲಿ ಕಂಡುಬರುವ ಎರಡು ಬಗೆಯ ಬಲಗಳು ಯಾವುವು?
Answers
Answer:
ಈ ಬಗೆಯಲ್ಲಿ ಕಬ್ಬಿಣವನ್ನು ಆಕರ್ಷಿಸುವ ಆಯಸ್ಕಾಂತದಲ್ಲಿ ಅಣುಗಳು ವಿವಿದ ಸಾಲುಗಳಲ್ಲಿ ಒಂದರ
ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಕಾಂತಗಳನ್ನು 'ನೈಸರ್ಗಿಕ ಕಾಂತಗಳು' ಅಥವಾ 'ಸಹಜ ಕಾಂತಗಳು' ಎಂದು ಕರೆಯುತ್ತಾರೆ. ಆದರೆ ಈ ಕಾಂತಗಳ ಆಕಾರ ಮತ್ತು ಗಾತ್ರ ಸೂಕ್ತ ಮಾದರಿಗಳಲ್ಲಿ ಇರುವುದಿಲ್ಲ. ಅವನ್ನು ಪ್ರಯೋಗಾಲಯಗಳಲ್ಲಿ ಮತ್ತು ಇತರ ಕಡೆಗಳಲ್ಲಿ, ಬೇರೆ ಬೇರೆ ಉಪಕರಣಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ನೈಸರ್ಗಿಕ ಕಾಂತಗಳ ಸಹಾಯ ಪಡೆದು ತಮಗೆ ಅಗತ್ಯ ವಾಗಿರುವಂತಹ ಕಾಂತಗಳನ್ನು ತಯಾರಿಸಿಕೊಳ್ಳಬಹುದು. ಇವನ್ನು 'ಕೃತಕ ಕಾಂತಗಳು' ಎಂದು ಕರೆಯುತ್ತಾರೆ. ಆಕಾರಕ್ಕೆ ಅನುಗುಣವಾಗಿ ಇವಕ್ಕೆ ಕುದುರೆಲಾಳಕಾರದ ಕಾಂತ, ಸೂಜಿ ಕಾಂತ, ಬಿಲ್ಲೆ ಕಾಂತ, ಉಂಗುರ ಕಾಂತ, ಸಲಾಕೆ ಕಾಂತ, ದಂಡ ಕಾಂತ ಎಂದು ಅನೇಕ ಹೆಸರುಗಳನ್ನು ಇಡಲಾಗಿದೆ. ಜಗತ್ತಿನ ಎಷ್ಟೋ ಪ್ರದೇಶಗಳಲ್ಲಿ ಕಾಂತೀಯ ಅದಿರು ದೊರೆಯುತ್ತದೆ. ಹಾಗೆ ದೊರೆಯದಿದ್ದರೂ ರಾಸಾಯನಿಕ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಈ ಅದಿರು ಸಿಗಬಹುದು. ಅದರಲ್ಲಿ ಕಾಂತ ಶಕ್ತಿ ಇದೆಯೇ ಎಂಬುದನ್ನು ಪರೀಕ್ಷಿಸಲು ಕಬ್ಬಿಣದ ಸಣ್ಣ ಚೂರುಗಳನ್ನು, ಪುಡಿಯನ್ನು ಇಲ್ಲವೆ ಉಕ್ಕಿನ ಬಹಳ ನವಿರಾದ ಪುಡಿಯನ್ನು ಬಿಳಿಯ ಕಾಗದದ ಮೇಲೆ ಉದುರಿಸಿಕೊಂಡು ತಂದಿರುವ ಅದಿರು ಅವನ್ನು ಆಕರ್ಷಿಸುವುದೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಕಾಗದ ಕ್ಲಿಪ್ಪುಗಳು, ಜಮಖಾನದ ಟಾಕುಗಳು ಮುಂತಾದ ಸ್ವಲ್ಪ ಭಾರವಿರುವ ವಸ್ತುಗಳನ್ನು ಆ ಅದಿರಿನಿಂದ ಎತ್ತಲು ಪ್ರಯತ್ನಿಸಿ ಅದರ ಕಾಂತ ಶಕ್ತಿಯನ್ನು ಖಚಿತ ಪಡಿಸಿಕೊಳ್ಳಬಹುದು. ಕಾಂತ ಸೂಜಿಯೊಂದನ್ನು ಅದಿರಿನ ಹತ್ತಿರ ತಂದು ಅದಿರಿನ ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ಕಾಂತ ಸೂಜಿಯನ್ನು ಆಕರ್ಷಿಸುವುದೇ ಎಂಬುದನ್ನೂ ಕಂಡುಕೊಳ್ಳಬಹುದು. ಹಳೆಯ ರೇಡಿಯೋ, ಧ್ವನಿವರ್ಧಕಗಳು, ಹಳೆಯ ಟೆಲಿಫ಼ೋನ್ ಗ್ರಾಹಕರು, ಹಳೆಯ ಮೋಟಾರಿನ ಸ್ಪೀಡೋಮೀಟರುಗಳು ಮುಂತಾದ ಕೆಲವು ಉಪಕರಣಗಳಿಂದ ಪ್ರಯೋಗಕ್ಕೆ ಮತ್ತು ಚಿಕ್ಕಪುಟ್ಟ ಕಾರ್ಯಗಳಿಗೆ ಅಗತ್ಯವಾಗಿರುವ ಕೃತಕ ಕಾಂತಗಳನ್ನು ಪಡೆದುಕೊಳ್ಳಬಹುದು. ಇವು ಸಾಮಾನ್ಯವಾಗಿ ಲಾಳದ ಅಥವಾ ದಂಡದ ಅಥವಾ ಪಟ್ಟಿ ಆಕೃತಿಗಳಲ್ಲಿ ಇರಬಹುದು. ಇಂಗ್ಲೀಷಿನ 'ಯು' ಆಕಾರದ ಮತ್ತು ಸೂಜಿ ಕಾಂತಗಳು ಕೂಡ ದೊರೆಯುತ್ತವೆ