Sociology, asked by arjunsaneesh8943, 1 month ago

ಕನಾ೯ಟಕದಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ಜಿಲ್ಲೆಯಲ್ ಹೆಸರಿಸಿ ಮತ್ತು ನಕ್ಷೆಯಲ್ಲಿ ಅ ಜಿಲ್ಲೆಯ ಬಣ್ಣ ತುಂಬಿ

Answers

Answered by pinkikumari198101
3

Answer:

(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?

Ans) ಆರ್ಯಭಟ

2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?

Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?

Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ

4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?

Ans) ಕರ್ನಾಟಕ

5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?

Ans) ಬಳ್ಳಾರಿ

6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?

Ans) ಮಧ್ಯ ಪ್ರದೇಶ

7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?

Ans) ಅಂಡಮಾನ್ ಮತ್ತು ನಿಕೋಬಾರ್

8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?

Ans) ಹರಿಯಾಣ

9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?

Ans) 1,91,791 ಚ.ಕಿ.ಮೀ.ಗಳು

10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?

Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ

11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?

Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"

12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?

Ans) ಕನ್ನಂಬಾಡಿ ಅಣೆಕಟ್ಟು

14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?

Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?

Ans) ಬೀದರ್

16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?

Ans) ಚಳ್ಳಕೆರೆ (456 ಮಿ.ಮೀ)

17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?

Ans) ಕರ್ನಾಟಕ

18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?

Ans) ಕೊಡಗು ಜಿಲ್ಲೆಯ ನಾಗರಹೊಳೆ

19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

Ans) ಚಾಮರಾಜನಗರ

20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?

Ans) ತಮಿಳುನಾಡು

(ಸಂಗ್ರಹ)

Similar questions