World Languages, asked by manjappakb180, 3 months ago

. ಲೋಪಸಂಧಿ ಎಂದರೇನು? ೪ ಉದಾಹರಣೆ ಕೊಡಿ​

Answers

Answered by dhyt85
0

Explanation:

ಎಯ್ದೆ ಪೋಪವು ಲೋಪವು [೧]. ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ. ಉದಾ: ನೀರಿಲ್ಲ(‘ಉ’ಕಾರ ಲೋಪ)ಅವನೂರು('ಅ’ ಕಾರ ಲೋಪ) ಬೇರೊಬ್ಬ(‘ಎ’ ಕಾರ ಲೋಪ) ಅಭ್ಯಾಸಕ್ಕೆ : ಹಳಗನ್ನಡ - ನೆಲದಿಂದುಣ್ಬಂ, ಚಲದಾಣ್ಮಂ, ಇಂದ್ರಂಗೈರಾವತಂ, ಪೊಲದಲ್ಲಿರ್ದಂ. ಹೊಸಗನ್ನಡ - ಊರಲ್ಲಿ, ದೇವರಿಂದ, ಬಲ್ಲೆನೆಂದ, ಏನಾದುದು, ಇವನಿಗಾನು, ಮಾತೆಲ್ಲಂ.

ಕೇಸಿರಾಜನು ಶಬ್ದಮಣಿದರ್ಪಣಂ ಗಂಥದ ಸೂತ್ರ 62 ರಲ್ಲಿ ನಾಮರೂಢಿಯಳಿಯದ ಪಕ್ಷಂ ಎಂದಿದ್ದಾನೆ. ಎಂದರೆ, ‘ಸಂಧಿಮಾಡುವಾಗ ಅರ್ಥ ಕೆಡಬಾರದು’ ಎಂಬುದು ನಿಯಮ. ಗುರು+ಅನ್ನು=ಗುರನ್ನು, ಮಡು+ಇದು=ಮಡಿದು, ಮುದಿ+ಅಪ್ಪ=ಮುದಪ, ಬಾಳು+ಅನ್ನು=ಬಾಳನ್ನು ಎಂಬುದು ಭಿನ್ನಾರ್ಥ /

Similar questions