History, asked by srinivasaiahsuma, 14 days ago

ಧರ್ಮ ಗ್ರಂಥಗಳ ಮುಖ್ಯವಾದ ಅಂಶಗಳನ್ನು ತಿಳಿಸಿ​

Answers

Answered by ganeshprasadv5
1

Answer:

ಬಹುತೇಕ ಧರ್ಮಗಳಲ್ಲಿ ಕೆಲವು ಗ್ರಂಥಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಗ್ರಂಥಗಳನ್ನು ಕೆಲವು ಧರ್ಮಗಳು ದೈವಪ್ರೇರಿತವೆಂದು ಭಾವಿಸಿದೆರೆ, ಇನ್ನು ಕೆಲವು ಏಕೀಶ್ವರಾವಾದಿ ಧರ್ಮಗಳು ಈ ಗ್ರಂಥಗಳು ಸ್ವತಃ ಭಗವಂತನ ಮಾತುಗಳೇ ಎಂದು ಭಾವಿಸುತ್ತವೆ.

ಹಿಂದೂ ಧರ್ಮದ ಋಗ್ವೇದ ಕ್ರಿ.ಪೂ. ೧೫೦೦ರಿಂದ ಕ್ರಿ.ಪೂ. ೧೩೦೦ರ ಮಧ್ಯ ರಚಿತವಾಗಿರಬಹುದೆಂದು ನಂಬಲಾಗಿದೆ. ಆದ್ದರಿಂದ ಇದು ಜಗತ್ತಿನ ಅತೀ ಪುರಾತನ ಧಾರ್ಮಿಕ ಗ್ರಂಥಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಜೊರಾಸ್ಟರ ಧರ್ಮದ ಲಿಖಿತ ಸ್ವರೂಪವು ಕ್ರಿ.ಪೂ. ೧೧ನೇ ಶತಮಾನದಲ್ಲಿ ರಚಿತವಾಗಿರಬಹುದೆಂದು ನಂಬಲಾಗಿದೆ. ಆದರೆ ಸಾರ್ವಜನಿಕ ಪ್ರಸಾರಣೆಗೆ ಮೊದಲು ತಯಾರಲ್ಪಟ್ಟ ಗ್ರಂಥವೆಂದರೆ ಕ್ರಿ.ಶ. ೮೬೮ರಲ್ಲಿ ಮುದ್ರಿತವಾದ ಬೌದ್ಧ ಧರ್ಮದ ವಜ್ರ ಸೂತ್ರ.

ಪ್ರಮುಖ ಧರ್ಮ ಗ್ರಂಥಗಳು

ಬಹಾಯಿ ಧರ್ಮ - ಕಿತಾಬ್-ಇ-ಅಖ್ದಾಸ್ ಮತ್ತು ಕಿತಾಬ್-ಇ-ಈಖಾನ್

ಬೌದ್ಧ ಧರ್ಮ - ತ್ರಿಪಿಟಕ

ಕ್ರೈಸ್ತ ಧರ್ಮ - ಬೈಬಲ್

ಹಿಂದೂ ಧರ್ಮ -ಭಗವದ್ಗೀತೆ, ವೇದಗಳು, ಉಪನಿಷತ್, ಮಹಾಭಾರತ, ರಾಮಾಯಣ, ಇತ್ಯಾದಿ.

ಇಸ್ಲಾಂ - ಖುರಾನ್, ಹಾದಿತ್ (ಮೊಹಮ್ಮದ್ ಪೈಗಂಬರ್ರವರ ಕೃತಿಗಳು ಮತ್ತು ಮಾತುಗಳು), ಸುನ್ನಾ

ಜೈನ ಧರ್ಮ - ತತ್ವಾರ್ಥ ಸೂತ್ರ

ಯಹೂದಿ ಧರ್ಮ - ತನಾಕ್, ಮಿಶ್ನ, ಗೆಮಾರ ಮತ್ತು ತಾಲ್ಮುದ್

ಸಿಖ್ ಧರ್ಮ - ಗುರು ಗ್ರಂಥ ಸಾಹೀಬ್

ಶಿಂಟೋ ಧರ್ಮ - ಕೊಜಿಕಿ, ನಿಹೊನ್ ಶೋಕಿ

ತಾಓ ಧರ್ಮ - ತಾವೋ-ತೆ-ಚಿಂಗ್, ಐ ಚಿಂಗ್, ಚುಆಂಗ್ ತ್ಜು

ಜೊರಾಸ್ಟರ್ ಧರ್ಮ - ಗಾಥಾ, ಅವೆಸ್ತಾ

Thanks for giving me this opportunity to answer for my mother tongue language.

Hope this content helps.

Thank you.

Similar questions