CBSE BOARD XII, asked by sameer2356, 1 month ago

ಬೆಂಗಳೂರು ಪದವು ಈ ವ್ಯಾಕರಣಕ್ಕೆ ಉದಾಹರಣೆಯಾಗಿದೆ

Answers

Answered by n0171mpsbls
0

Answer:

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.

ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.

ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.

ಕನ್ನಡ ಭಾಷೆಯಲ್ಲಿ ಎರಡು ರೂಪಗಳಿವೆ.ಅವುಗಳೆಂದರೆ ಶ್ರಾವಣ ಮತ್ತು ಚಾಕ್ಷುಷ. ಶ್ರಾವಣ ರೂಪ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು. ಚಾಕ್ಷುಷ ರೂಪ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು. ಕನ್ನಡ ಲಿಪಿಯನ್ನು ತಿಳಿಯಬೇಕಾದರೆ ಲಿಪಿರೂಪದ ವರ್ಣಮಾಲೆಯನ್ನು ತಿಳಿಯಬೇಕು. ವರ್ಣ ಎಂದರೆ ಅಕ್ಷರ. ವರ್ಣಗಳ ವ್ಯವಸ್ಥಿತ ಜೋಡಣೆಯನ್ನು ವರ್ಣಮಾಲೆ ಎನ್ನುವರು.

ಕನ್ನಡ ವರ್ಣಮಾಲೆಯಲ್ಲಿ ೪೯(49) ಅಕ್ಷರಗಳು ಬಳಕೆಯಲ್ಲಿವೆ.

Explanation:

please mark as brainlist

Attachments:
Similar questions