World Languages, asked by raidsannidhi4, 8 hours ago

ಕನ್ನಡ ಮೌಲ್ವಿ ಗಾಧ್ಯಬಾಗದ ಸಾರಾಂಶವನ್ನು ಬರೆಯಿರಿ​

Answers

Answered by sonalinalaker
0

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಪ್ರಯಾಣ ಮಾಡುತ್ತಿದ್ದ ಬಸ್ಸಿಗೆ ಒಬ್ಬ ಮುಸಲ್ಮಾನ ಹತ್ತಿದರು . ಈತನ ವಯಸ್ಸು ಸುಮಾರು 55-58 ಇರಬಹುದು , ಆಜಾನುಬಾಹುವಾಗಿ ಪಷ್ಟವಾಗಿ ಬೆಳೆದಿದ್ದ ಎತ್ತರದ ಕೆಂಪನೆಯ ಆಳು , ಮುಖದಲ್ಲಿ ಸಹ ಒಳ್ಳೆಯ ಕಳೆ ಇತ್ತು .

ಕಣ್ಣಿನ ದೃಷ್ಟಿ ತೀಕ್ಷ್ಯವಾಗಿತ್ತು . ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿಯಾಗಿ ಹತ್ತಿಯಂತೆ ಇತ್ತು . ಮಡಿ – ಮಡಿ ಇಸ್ತ್ರಿ ಮಾಡಿದ್ದ ಬಿಳಿಯ ಶರಾಯಿ ( ಕೋಟು ) ಇವುಗಳಿಂದ ಆತನನ್ನು ನೋಡುವವರಿಗೆ ಇವನೊಬ್ಬ ಮರ್ಯಾದಸ್ತ ಸಧೃಹಸ್ಥ ಎಂಬ ಭಾವನೆ ಉಂಟಾಗುತ್ತಿತ್ತು .

ಮತ್ತಷ್ಟು ಹೆಚ್ಚಾಗಿ ಅವನ ಕಡೆಗೆ ಆಕರ್ಷಿಸಿದ್ದು ಆ ಗೃಹಸ್ಥನ ಕೈಲಿದ್ದ ಒಂದು ದೊಡ್ಡ ಪುಸ್ತಕ . ಅದು ಕುಮಾರವ್ಯಾಸ ಭಾರತ , ಈ ಮುಸಲ್ಮಾನ ವ್ಯಕ್ತಿಯ ಕೈಯಲ್ಲಿದ್ದ ಕನ್ನಡ ಪುಸ್ತಕವನ್ನು ನೋಡಿದ ಲೇಖಕರಿಗೆ ಅವರ ಬಾಲ್ಯ ಜೀವನದ ಘಟನೆಗಳು ನೆನಪಿಗೆ ಬಂದವು .

ಅವರ ಹಳ್ಳಿಯಲ್ಲಿಯೇ ಒಬ್ಬ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತಿದ್ದನು . ರಂಗಸ್ಥಳದಲ್ಲಿ ಬಂದು ನಂತರ ಅವನ ವೇಷವನ್ನು , ವಾಕ್ ಶುದ್ಧಿಯನ್ನು ನೋಡಿ ವೈದಿಕ ಮನೆತನದ ವೃದ್ಧ ಸ್ತ್ರೀಯರೂ ಸಹ ಮೈ ಮರೆತು “ ಕೃಷ್ಣ ಪರಮಾತ್ಮ ಶಾಪಾಡಪ್ಪ ” ಎಂದು ಕೈ ಮುಗಿದು ಬಿಡುತ್ತಿದ್ದರು .

ಆನಂತರ ಲೇಖಕರು “ ಕೃಷ್ಣ ಪರಮಾತ್ಮನಲ್ಲಿ ಬಂದ ಇವ ಹೊಸಕೇರಿಯ ಹುಸೇನ್ ಸಾಬಿ ” ಎಂದರೂ ಸಹ ಆ ವೃದ್ಧೆಯರು “ ಹುಸೇನ್ ಸಾಬಿಯಂತೆ ಹುಸೇನ್ ಸಾಬಿ . ನಾವು ಕೈ ಮುಗಿದಿರುವುದು ತಲುಪುವುದು ಶ್ರೀ ಕೃಷ್ಣನಿಗೆ , ಇವನು ಯಾರಾದರೇನು ? ” ಎನ್ನುತ್ತಿದ್ದರು .

ಕೊನೆಗೆ ಆ ಸಾಹೇಬನಿಗೆ “ ಹುಸೇನ್ ಕೃಷ್ಣ ” ಎಂದೇ ಹೆಸರಾಗಿತ್ತು . ಲೇಖಕರು ಮುಸಲ್ಮಾನ ವ್ಯಕ್ತಿಯ ಕೈಯಲ್ಲಿದ್ದ ಕುಮಾರವ್ಯಾಸ ಪುಸ್ತಕವನ್ನು ನೋಡಿ ಅವರ ಬಗ್ಗೆ ಗೌರವ ಉಂಟಾಯಿತು . ಕುಳಿತಿದ್ದ ಉಳಿದ ಎಲ್ಲರಿಗಿಂತ ಹೆಚ್ಚು ಪ್ರಿಯರಾಗಿ ತೋರಿದರು .

ಇವರನ್ನು ಹೇಗಾದರೂ ಮಾಡಿ ಮಾತನಾಡಿಸಲೇಬೇಕು ಎಂದು

“ ನಿಮಗೆ ಕನ್ನಡ ಬರುತ್ತದೆಯೇ ? ” ಎಂದು ಕೇಳಿದರು .

ಇದಕ್ಕೆ ಆತ “ ಹೌದು , ನಾನು ಕನ್ನಡ ಕಲಿತದ್ದು ಮೂರನೇ ತರಗತಿವರೆಗೆ , ಆದರೆ ಮಾದರಿ ಪಾಠ ಅದರಿಂದಲೇ ಮೂವತ್ತು ವರ್ಷ ನಿಭಾಯಿಸಿಬಿಟ್ಟೆ ,

ನೆನ್ನೆ ನನಗೆ ನಿವೃತ್ತಿ ಆಯಿತು ” ಎಂದರು . ಲೇಖಕರು “ ಯಾವ ಕೆಲಸದಿಂದ ನಿವೃತ್ತರಾದಿರಿ ” ಎಂದು ಕೇಳಿದರು .

ಆತ “ ಪ್ರೈಮರಿ ಶಾಲಾ ಉಪಾಧ್ಯಾಯ ವೃತ್ತಿಯಿಂದ ” ಎಂದರು . ಮತ್ತೆ ಲೇಖಕರು “ ಹಾಗಾದರೆ ನಿಮಗೆ ಉರ್ದು ಬರುವುದಿಲ್ಲವೇ ? ಎಂದಾಗ ಮುಸಲ್ಮಾನ ವ್ಯಕ್ತಿಯು “ ಕಲಿತಿದ್ದು ಉರ್ದು , ಕಲಿಸಿದ್ದು ಕನ್ನಡ ” ಎಂದರು .

ಕನ್ನಡ ಮೌಲ್ವಿಯವರ ಊರಿನಲ್ಲಿ ಉರ್ದು ಶಾಲೆ ಇರಲಿಲ್ಲ . ಅವರ ತಂದೆಯವರಿಗೂ ಉರ್ದು ಓದಲೂ ಬರೆಯಲೂ ಬರುತ್ತಿರಲಿಲ್ಲ . ಆರು ಮೈಲಿ ದೂರದ ಹಳ್ಳಿಯಲ್ಲಿ ಒಂದು ಉರ್ದು ಶಾಲೆಯಲ್ಲಿ ಇತ್ತು

ಇಲ್ಲಿಯ ಉಪಾಧ್ಯಾಯರು ವಾರದಲ್ಲಿ ಎರಡು ದಿನ ಕನ್ನಡ ಮೌಲ್ವಿಯವರ ಮನೆಗೆ ಬಂದು ಉರ್ದು ಕಲಿಸುತ್ತಿದ್ದರು . ಉಪಾಧ್ಯಾಯರು ಬುದ್ಧಿವಂತರು . ಮೌಲ್ವಿಯವರು ಉರ್ದುವನ್ನು ಬೇಗ ಬೇಗ ಕಲಿತರು .

ಲೇಖಕರು “ ಭಾರತದ ಕಥೆ ನಿಮಗೆ ಪೂರ್ತಿ ಒಪ್ಪುತ್ತದೆಯೇ ? ನಿಮ್ಮ ಧರ್ಮ ನಂಬಿಕೆಗೆ ವಿರೋಧವಾದುದು ಅದರಲ್ಲಿ ಏನೂ ಇಲ್ಲವೇ ? ” ಎಂದು ಕೇಳಿದರು ಸಾಹೇಬರು “ ಇದು ಧರ್ಮದ ಕಥೆ , ಎಲ್ಲ ಮತಗಳನ್ನೂ ವ್ಯಾಸಂಗ ಮಾಡಬೇಕು .

ಎಲ್ಲ ಮತಗಳೂ ಇರಬೇಕು . ಇಲ್ಲದಿದ್ದರೆ ಜಗತ್ತು ರಸಹೀನವಾಗುತ್ತದೆ . ಉದ್ಯಾನದಲ್ಲಿ ನಾನಾ ಬಗೆಯ ಹೂಗಳಿರಬೇಕು . ಒಂದೇ ಬಗೆಯ ಹೊ ಎಲ್ಲೆಲ್ಲಿಯೂ ಇದ್ದರೆ ಸ್ವಾರಸ್ಯವಿಲ್ಲ .

ಎಲ್ಲ ಮತಗಳಲ್ಲಿಯೂ ಉದಾತ್ತ ತತ್ತ್ವಗಳಿವೆ , ನಾನು ಮಹಾಭಾರತ , ರಾಮಾಯಣ , ಭಗವದ್ಗೀತೆ , ಕುರಾನ್ ಎಲ್ಲವನ್ನೂ ಓದಿದ್ದೇನೆ . ಎಲ್ಲ ಹೇಳುವುದು ಒಂದೇ ಮನುಷ್ಯ ಒಳ್ಳೆಯವನಾಗಿರಬೇಕು ಎಂದು ” ಎಂದರು

, “ ನೀವು ಕನ್ನಡ ಪಾಠ ಚೆನ್ನಾಗಿ ಮಾಡುತ್ತೀರಾ “ ಎಂದು ಲೇಖಕರು ಕೇಳಿದಾಗ ಸಾಹೇಬರು ತೃಪ್ತಿಯಿಂದಲೇ “ ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲವೆಂದು ಪ್ರಶಸ್ತಿಯನ್ನು ಎಲ್ಲರಿಂದಲೂ ಪಡೆದಿದ್ದೇನೆ .

ಪ್ರೈಮರಿ ಶಿಕ್ಷಕರ ಸಮ್ಮೇಳನದಲ್ಲಿ ಒಂದು ಮಾಡಲು ಕೊಟ್ಟರು . ಹುಡುಗರು ಎಷ್ಟು ಆಸಕ್ತಿಯಿಂದ ಕೇಳುತ್ತಿದ್ದರೋ ಉಪಾಧ್ಯಾಯರು ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು ” ಎಂದು ಹೇಳಿದರು .

ಅಷ್ಟೆ ಅಲ್ಲದೇ ಕನ್ನಡ ಭಾಷಣವನ್ನು ಸಹ ಚನ್ನಾಗಿ ಮಾಡುತ್ತೇನೆ ಎಂದರು . ಮತ್ತೆ ಲೇಖಕರು ಕನ್ನಡ ಪುಸ್ತಕಗಳನ್ನು ಓದಿದ್ದಿರ ? ಎಂದು ಕೇಳಿದಾಗ ಸಾಹೇಬರು “ ಹೌದು ಓದಿದ್ದೇನೆ .

ಡಿವಿಜಿ ಅವರ ಉಮರನ ಒಸಗೆ ಪೂರ್ತಿ ಬಾಯಿಗೆ ಬರುವಂತೆ ಓದಿದ್ದೇನೆ . ತುಂಬಾ ಒಳ್ಳೆಯ ಪುಸ್ತಕ ” ಎಂದು ಹೇಳಿ ಸ್ವಲ್ಪ ಮೌನವಾಗಿದ್ದು ಲೇಖಕರಿಗೆ ನಿಮ್ಮ ಊರು ಯಾವುದು ? ‘ ಎಂದು ಕೇಳಿದರು ಇದಕ್ಕೆ ಲೇಖಕರು “ ಹಾಸನದ ಹತ್ತಿರದ ಒಂದು ಹಳ್ಳಿ ” ಎಂದರು . ಸಾಹೇಬರು “ ನಾನು ಹಾಸನಕ್ಕೆ ಹೋಗಿದ್ದೇನೆ , ಯಾವ ಹಳ್ಳಿ ? ” ಎಂದರು .

ಲೇಖಕರು “ ಗೊರೂರು ” ಎಂದರು . “ ನಾನೂ ಗೊರೂರಿಗೂ ಹೋಗಿದ್ದೇನೆ . ಆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದ್ದರಲ್ಲ . ಅವರು ತುಂಬಾ ಚೆನ್ನಾಗಿ ಕಥೆಗಳನ್ನು ಬರೆಯುತ್ತಾರೆ .

ಎಂದಾಗ ಲೇಖಕರು “ ಗೊರೂರಿಗೆ ಹೋಗಿದ್ದಾಗ ಅವರನ್ನು ಸಂಧಿಸಿದ್ದೀರಾ ? ” ಎಂದು ಕೇಳಿದರು ಸಾಹೇಬರು “ ಇಲ್ಲಿ ಆ ವೇಳೆಗೆ ನಾನು ಅವರ ಪುಸ್ತಕಗಳನ್ನು ನೋಡಿರಲಿಲ್ಲ .

ಈಚೆಗೆ ಓದಿದೆ , ನೋಡಬೇಕಾದ ಮನುಷ್ಯರು ” ಎಂದರು . ಲೇಖಕರು “ ಅವರು ನಿಮ್ಮೆದುರಿನಲ್ಲಿ ಈಗ ಬಂದರೆ ಏನು ಮಾಡುತ್ತೀರಿ ? ” ಎಂದು ಕೇಳಿದರು . ಸಾಹೇಬರು “ ಮಾಡುವುದೇನು ? ಅತ್ಯಂತ ಸಂತೋಷದಿಂದ ಆಲಿಂಗನ ಮಾಡಿಕೊಳ್ಳುತ್ತೇನೆ ” ಎಂದರು . ಆಗ ಲೇಖಕರು “ ನಾನೇ ಆ ಪ್ರಾಣಿ * ಎಂದರು .

ಲೇಖಕರು ಮತ್ತು ಸಾಹೇಬರು ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡರು . ಈ ದಿನ ಸುದಿನ ಎಂದು ಲೇಖಕರು ಭಾವಿಸಿದರು , ಲೇಖಕರಿಗೆ ಆ ಸಾಹೇಬರು ಅನೇಕ ಶತಮಾನಗಳಿಂದ ಜನ್ಮ ಜನ್ಮಗಳಲ್ಲಿ ಮಿತ್ರರಾಗಿದ್ದರು ಎಂದು ಭಾಸವಾಯಿತು . ಸಾಹೇಬರು ಮುಂದಿನ ಬಸ್ ನಿಲ್ದಾಣದಲ್ಲಿ ಇಳಿದು ಹೊರಟು ಹೋದರು .

mark as brainalist ♥️

Similar questions