India Languages, asked by uchilvarna, 2 days ago

ಗುಬ್ಬಚ್ಚಿಯ ಬಗ್ಗೆ ನಾಲ್ಕು ವಾಕ್ಯಗಳನ್ನು ಬರೆಯಿರಿ .​

Answers

Answered by devadigaleela235
0

Answer:

see the explanation

Explanation:

ಗುಬ್ಬಚ್ಚಿ ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿ.ಇದು ಜನರ ಮಧ್ಯೆ ವಾಸಿಸಬಯಸುತ್ತದೆ. ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತದೆ.ಅವುಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ.ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ.

ಗುಬ್ಬಚ್ಚಿಯು ಧಾನ್ಯಗಳನ್ನು,ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತದೆ.ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ.ಗುಬ್ಬಿ ಕಿಟಕಿಯ ಅಡಿಭಾಗ,ಬಾಗಿಲಿನ ಮೇಲ್ಭಾಗ, ಅಲ್ಮಿರಾ, ಮನೆಯ ಮೂಲೆಗಳು ಹೀಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಗೋಡೆಗಳಲ್ಲಿರುವ ರಂಧ್ರಗಳು,ಮಾಡುಗಳಲ್ಲಿ ಗುಬ್ಬಿ ಗೂಡು ಕಟ್ಟಿಕೊಳ್ಳುತ್ತದೆ.ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ಇಡುತ್ತದೆ.ಗುಬ್ಬಚ್ಚಿ ಒಂದು ವರುಷದಲ್ಲಿ ಅನೇಕ ಬಾರಿ ಮೊಟ್ಟೆಗಳನ್ನು ಇಟ್ಟು, ತನ್ನ ಸಂತಾನವನ್ನು ಬೆಳೆಸಿಕೊಳ್ಳುತ್ತದೆ.ಈ ಹಕ್ಕಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು.ಹಾಗಾಗಿ ಗುಬ್ಬಚ್ಚಿ ನಡೆಯುವದು ವಿರಳ.ಹತ್ತಿರದ ಗಮ್ಯವನ್ನು ಜಿಗಿಯುತ್ತ ಅಥವಾ ಹಾರುತ್ತ ಸೇರಿಕೊಳ್ಳುವದನ್ನು ಗಮನಿಸಬಹುದಾಗಿದೆ.

ಗುಬ್ಬಚ್ಚಿಗಳು ಇತ್ತೀಚಿನ ವರದಿಗಳ ಪ್ರಕಾರ ಅತ್ಯಂತ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಎಂದು ಗುರುತಿಸಲಾಗಿದೆ.

Similar questions