Business Studies, asked by maheshmaheshmadivala, 6 hours ago

ಒಂದು ಸಂಸ್ಥೆ ಅಳವಡಿಸಿಕೊಂಡಿರುವ ವಿವಿಧ ನಿರ್ವಹಣಾ ತತ್ವಗಳು ಯಾವುವು

Answers

Answered by 14parkyuri
1

Answer:

ವ್ಯಕ್ತಿ ಸಮಾಜದ ಒಂದು ಪ್ರಮುಖ ಘಟಕ. ಆದರೆ ಅವನು ತನ್ನ ಎಲ್ಲಾ ಅಭಿಲಾಷೆಗಳನ್ನು ತನ್ನಷ್ಟಕ್ಕೆ ತಾನೇ ತೃಪ್ತಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅವನು ತನ್ನೊಡನೆ ಇರುವ ವ್ಯಕ್ತಿಗಳೊಂದಿಗೆ ಗುಂಪುಗಳಲ್ಲಿ ಸಂಘಟಿತನಾಗಿ ವೈಯಕ್ತಿಕವಾಗಿ ತನಗೆ ಸಾಧ್ಯವಾಗದ ಕಾರ್ಯಗಳನ್ನು ಸಾಧಿಸುತ್ತಾನೆ. ಉದಾಹರಣೆ: ಕುಟುಂಬ, ಶಾಲೆ, ವ್ಯವಹಾರ, ಸಂಸ್ಥೆ ಇತ್ಯಾದಿ. ವ್ಯಕ್ತಿಗಳು ಗುಂಪುಗಳಲ್ಲಿ ಸಂಘಟಿತರಾಗಿ ಸಾಮಾನ್ಯ ಗುರಿ ಸಾಧನೆಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಿರ್ವಹಣೆಯು ಅವಶ್ಯಕವಾಗುತ್ತದೆ. ನಿರ್ವಹಣೆಯು ಮಾನವ ಹಾಗೂ ಇತರೆ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಜನರನ್ನು ಉತ್ತೇಜಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ. ನಿರ್ವಹಣೆಯು ಎಲ್ಲಾ ಸಂಸ್ಥೆಗಳಿಗೂ ಅತ್ಯವಶ್ಯಕ. ಅವುಗಳು ದೊಡ್ದ ಅಥವಾ ಚಿಕ್ಕ ಲಾಭ ಸಂಪಾದಿಸುವ ಅಥವಾ ಸಂಪಾದಿಸದೇ ಇರುವ (NGO) ಹಾಗೂ ಉತ್ಪಾದನಾ ಮತ್ತು ಸೇವಾ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳಾಗಿರಬಹುದು. ನಿರ್ವಹಣೆಯಲ್ಲಿ ಒಂದಾದ ನಂತರ ಮತ್ತೊಂದಂರಂತೆ ಪರಸ್ಪರ ಅವಲಂಬಿತ ನಿರ್ವಹಣಾ ಕಾರ್ಯಗಳಾಗಿರುತ್ತವೆ. ಈ ಎಲ್ಲಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಸಂಘಟನೆಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆಯಾದ ನಿರ್ವಹಣಾ ಕಾರ್ಯಗಳನ್ನು ವ್ಯವಸ್ಥಾಪಕರು ನಿರ್ವಹಿಸಬೇಕಾಗುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದ ಉಂಟಾದ ಉತ್ಪಾದನಾ ವಿಧಾನದ ಬದಲಾವಣೆ, ವ್ಯವಹಾರದ ಪ್ರಮಾಣದ ಹೆಚ್ಚಳ, ಸಾರಿಗೆ, ಸಂಪರ್ಕ ಹಾಗೂ ತಂತ್ರಜ್ಞಾನ, ಕ್ಷೇತ್ರದ ಬದಲಾವಣೆಗಳು ವಿಶೇಷವಾಗಿ ನಿರ್ವಹಣೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಿರುತ್ತವೆ.

ನಿರ್ವಹಣೆ (Manage) ಎಂಬ ಕ್ರಿಯಾಪದವು ಇಟಲಿ ಭಾಷೆಯ 'Maneggiare (ಮ್ಯಾನೇಜರ್) ಎಂಬ ಪದದಿಂದ ಬಂದಿದೆ.'ಮ್ಯಾನೇಜರೇ' ಎಂದರೆ ಕೈಯಿಂದ ನಿರ್ವಹಿಸು, ವಿಶೇಷವಾಗಿ ಉಪಕರಣಗಳನ್ನು ನಿರ್ವಹಿಸುವುದು ಎಂದರ್ಥ. ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ನಿರ್ವಹಣೆಯು ವ್ಯಕ್ತಿ ಮತ್ತು ಸಂಪನ್ಮೂಲಗಳೊಂದಿಗೆ ವ್ಯವಹರಿಸುವ ಹಾಗೂ ನಿಯಂತ್ರಿಸುವ ಪ್ರಕ್ರಿಯೆಯಾಗಿದೆ. ನಿರ್ವಹಣೆಯು ಸಂಸ್ಥೆಯ ನಿರ್ದಿಷ್ಟ ಉದ್ದೇಶಗಳನ್ನು ಸಾಧಿಸುವುದಕ್ಕೆ ಇತರ ವ್ಯಕ್ತಿಗಳಿಂದ ಅಥವಾ ಅವರ ಸಹಾಯದಿಂದ ಕಾರ್ಯ ಮಾಡಿಸಿಕೊಳ್ಳುವ ಕಲೆಯಾಗಿದೆ

ನಿರ್ವಹಣೆಯ ಲಕ್ಷಣಗಳು (features of management)

)'ನಿರ್ವಹಣೆಯು ಉದ್ದೇಶಗಳನ್ನು ಸಾಧಿಸುವ ಪ್ರಕ್ರಿಯೆಯಾಗಿದೆ (Management is goal oriented):ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿರುತ್ತದೆ. ಸಂಘಟನೆಯ ಸ್ವರೂಪದ ಆಧಾರದ ಮೇಲೆ, ವಿವಿಧ ಸಂಘಟನೆಗಳು ವಿವಿಧ ಉದ್ದೇಶಗಳನ್ನು ಹೊಂದಿರುತ್ತದೆ. ಈ ಉದ್ದೇಶಗಳು ಸರಳ ಮತ್ತು ಸ್ಪಷ್ಟವಾಗಿರಬೇಕು. ನಿರ್ವಹಣೆಯು ವಿವಿಧ ಜನರ ಪರಿಶ್ರಮವನ್ನು ಒಂದುಗೂಡಿಸುವ ಮೂಲಕ ಸಂಘಟನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.

2)'ನಿರ್ವಹಣೆಯು ಸಾರ್ವತ್ರಿಕವಾಗಿದೆ (Management is all pervasive):ನಿರ್ವಹಣೆಯ ಚಟುವಟಿಕೆಗಳು ಕೇವಲ ವ್ಯವಹಾರ ಸಂಸ್ಥೆಗಳಿಗೆ ಮಾತ್ರವಲ್ಲದೆ ಸಾರ್ವತ್ರಿಕವಾಗಿ ಎಲ್ಲಾ ರೀತಿಯ ಸಂಘಟನೆಗಳಿಗೂ ಅನ್ವಯಿಸುತ್ತವೆ. ಈ ಸಂಘಟನೆಗಳು ಆರ್ಥಿಕ, ಸಾಮಾಜಿಕ, ದತ್ತಿ, ಧಾರ್ಮಿಕ ಅಥವಾ ರಾಜಕೀಯ ಸಂಘಟನೆಗಳಾಗಿರಬಹುದು. ಆದುದರಿಂದ ನಿರ್ವಹಣೆಯ ಅನ್ವಯಿಸುವಿಕೆಯನ್ನು ಎಲ್ಲಾ ಸಂಘಟನೆಗಳಲ್ಲಿ ಕಾಣಬಹುದು.

3)'ನಿರ್ವಹಣೆಯು ವಿವಿಧ ಆಯಾಮಗಳನ್ನು ಹೊಂದಿದೆ (Management is multi dimensional):ನಿರ್ವಹಣೆಯ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಕೆಳಕಂಡ ಮೂರು ಆಯಾಮಗಳನ್ನು ಹೊಂದಿದೆ. a) ಕೆಲಸದ ನಿರ್ವಹಣೆ,b) ವ್ಯಕ್ತಿಗಳ ನಿರ್ವಹಣೆ c) ಕಾರ್ಯಚಟುವಟಿಕೆಗಳ ನಿರ್ವಹಣೆ.

ಕೆಲಸದ ನಿರ್ವಹಣೆ :ಪ್ರತಿಯೊಂದು ಸಂಘಟನೆಯನ್ನು ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸಲು ಸ್ಥಾಪಿಸಲಾಗಿರುತ್ತದೆ. ನಿರ್ವಹಣೆಯು ಈ ಕೆಲಸಗಳನ್ನು ಉದ್ದೇಶಗಳಾಗಿ ಪರಿವರ್ತಿಸಿ, ಅವುಗಳನ್ನು ಸಾಧಿಸಲು ಅವಕಾಶ ಕಲ್ಪಿಸುತ್ತದೆ. ನಿರ್ವಹಣೆಯು ಈ ಉದ್ದೇಶಗಳನ್ನು ಸಾಧಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ತೀರ್ಮಾನವನ್ನು ಕೈಗೊಳ್ಳುವ, ಯೊಜನೆಗಳನ್ನು ತಯಾರಿಸುವ, ಅಂದಾಜು ಪತ್ರವನ್ನು ಸಿದ್ಧಪಡಿಸುವ, ಜವಾಬ್ದಾರಿಗಳನ್ನು ವಹಿಸುವ ಹಾಗೂ ಅಧಿಕಾರವನ್ನು ಪ್ರತ್ಯಾಯೋಜಿಸುವ ಕಾರ್ಯಗಳನ್ನು ಒಳಗೊಂಡಿದೆ.

ವ್ಯಕ್ತಿಗಳ ನಿರ್ವಹಣೆ :ನಿರ್ವಹಣೆಯು ವ್ಯಕ್ತಿಗಳಿಂದ ಮತ್ತು ವ್ಯಕ್ತಿಗಳ ಮೂಲಕ ನಿರ್ದಿಷ್ಟ ಕಾರ್ಯವನ್ನು ಸಾಧಿಸಿಕೊಳ್ಳುವುದಾಗಿದೆ. ಸಂಘಟನೆಯು ವಿವಿಧ ವ್ಯಕ್ತಿತ್ವ, ಅವಶ್ಯಕತೆ, ಕೆಲಸದ ವಿಧಾನ ಮತ್ತು ಹಿನ್ನಲೆಯನ್ನು ಹೊಂದಿರುವ ವ್ಯಕ್ತಿಗಳನ್ನು ಹೊಂದಿರುತ್ತದೆ.ಅವರೊಂದಿಗೆ ವ್ಯವಹರಿಸಿ ಮತ್ತು ಕಾರ್ಯವನ್ನು ನಿಯಂತ್ರಿಸುವುದು ವ್ಯವಸ್ಥಾಪಕನ ಮುಖ್ಯಕಾರ್ಯವಾಗಿರುತ್ತದೆ. ಆದುದರಿಂದ ವ್ಯವಸ್ಥಾಪಕನು ಅವರೆಲ್ಲರು ಒಟ್ಟಾಗಿ ಕೆಲಸಗಳನ್ನು ಸಂಘಟನೆಯ ದೃಷ್ಟಿಯಿಂದ ನಿರ್ವಹಿಸುವಂತೆ ಮಾಡುವುದಾಗಿದೆ. *ಕಾರ್ಯಚಟುವಟಿಕೆಗಳ ನಿರ್ವಹಣೆ: ಪ್ರತಿಯೊಂದು ಸಂಘಟನೆಯು ಸರಕು ಸೇವೆಗಳನ್ನು ಒದಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾಗುತ್ತದೆ.ನಿರ್ವಹಣೆಯು ಕಾರ್ಯಸಾಧಕ ಸಂಪನ್ಮೂಲಗಳನ್ನು (ವಸ್ತು ಮತ್ತು ತಂತ್ರಜ್ಞಾನ) ಪರಿವರ್ತಿಸಿ ಬಳಕೆದಾರರಿಗೆ ಸಿದ್ಧಪಡಿಸಿದ ಉತ್ಪನ್ನಗಳನ್ನು(ಸರಕು ಮತ್ತು ಸೇವೆ) ಒದಗಿಸುವುದು.

Answered by pratapreddy2929
0

Explanation:

ప్రజాస్వామ్యం మరియు కోణం మరియు కోణాలు మరియు కోణాలు మరియు కోణాలు మరియు కోణాల నోట్స్‌తో ఈ పరికరంలో మొదటిసారి వ్యాఖ్యానించినందుకు ఇబ్బంది కలిగించినందుకు ధన్యవాదాలు మరియు ధన్యవాదాలు

Similar questions